ಹೊನ್ನಾವರ : ಮಳೆಗಾಳಿಯಬ್ಬರಕ್ಕೆ ಹೊನ್ನಾವರ ತಾಲೂಕಿನಲ್ಲಿ 2 ಮನೆಗಳಿಗೆ ಹಾನಿ ಸಂಭವಿಸಿದ್ದು ಮೀನುಗಾರಿಕೆಗೆ ತೆರಳಿದ್ದ ಮಹಿಳೆಯೋರ್ವಳು ದೋಣಿ ಮುಳಗಿ ಮೃತಪಟ್ಟ ಘಟನೆ ನಡೆದಿದೆ.
ಹೊನ್ನಾವರ ಪಟ್ಟಣದ ಉದ್ಯಮನಗರದ ಗೋಪಾಲ ಮಂಜುನಾಥ ಮೇಸ್ತ ಇವರ ಮನೆಯ ಮೇಲ್ಬಾವಣಿ ಕುಸಿದುಬಿದ್ದು ಹಾನಿ ಸಂಭವಿಸಿದ್ದು, ಕಾಸರಕೋಡನ ಬುದವಂತ ತಿಮ್ಮಪ್ಪ ಮೇಸ್ತ ಇವರ ಮನೆ ಹಾನಿಗೊಳಗಾಗಿದೆ ಕಂದಾಯ ಇಲಾಖಾಧಿಕಾರಿಗಳು ಬೇಟಿ ನೀಡಿ ಹಾನಿಯ ಪರೀಶೀಲನೆನಡೆಸಿರುವದಾಗಿ ತಹಸೀಲ್ದಾರ ವಿವೇಕ ಶೇಣ್ವಿ ತಿಳಿಸಿದ್ದಾರೆ.

ತಾಲೂಕಿನ ಮಾಳ್ಕೋಡ ಗ್ರಾಮದ ಸುಬ್ರಾಯ ಅಂಬಿಗ ಇವರ ಪತ್ನಿ ಮಾದೇವಿ ಸುಬ್ರಾಯ ಅಂಬಿಗ (46) ಇವರು ಶರವಾತಿ ನದಿಯಲ್ಲಿ ದೋಂಇಯಲ್ಲಿ ಮಿನುಗಾರಿಕೆಗೆ ತೆರಳಿದ್ದ ವೇಳೆ ಭಾರೀ ಗಾಳಿ ಮಳೆಗೆ ದೋಣಿ ನದಿಯಲ್ಲಿ ಮುಳಗಿ ದೋಣಿಯಲ್ಲಿದ್ದ ಮಾದೇವಿ ಅಂಬಿಗ ನದಿಯಲ್ಲಿ ಮುಳಗಿ ಕಾಣಿಯಾಗಿದ್ದು, ದೋಣಿಯಲ್ಲಿದ್ದ ಈಕೆಯ ಪತಿ ಸುಬ್ರಾಯ ಅಂಬಿಗ ಈಜಿಕೊಂಡು ದಡಸೇರಿದ್ದಾರೆ.
ಮುಳಗಿ ಕಾಣೆಯಾಗಿದ್ದ ಮಾದೇವಿ ಅಂಬಿಗ ಇವರ ಶೋಧನೆ ಕಾರ್ಯ ಕೈಗೋಂಡ ಪೋಲಿಸರಿಗೆ ಈಕೆಯ ಮೃತದೇಹ ಕಳಸಿನಮೋಟೆ ಸಮೀಪ ತಟದಲ್ಲಿ ಪತ್ತೆಯಾಗಿದ್ದು ಈ ಕುರಿತು ಮಂಕಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶರವತಿ ಯೋಜನೆಯ ಶರಾವತಿ ಜಲಾನಯನ ಗರಿಷ್ಠಮಟ್ಟವು 1819 ಅಡಿಗಳಿದ್ದು ಈಗಿನ ಜಲಾಶಯಮಟ್ಟವು 1801 ಅಡಿ ಆಗಿರುತ್ತದೆ. ಲಿಂಗನಮಕ್ಕಿ ಜಲಾಶಯದ ಒಳಹರಿವು 1.18000ಕ್ಯುಸೆಕ್ಸ್ ಇದ್ದು, ಇದೇ ರೀತಿ ಒಳಹರಿವು ಮುಂದುವರಿದಲ್ಲಿ ಜಲಾಶಯವು ಗರಿಷ್ಠ ಮಟ್ಟ ತಲುಪಲಿದೆ ಲಿಂಗನಮಕ್ಕಿ ಆಣೆಕಟ್ಟು ಸುರಕ್ಷಾ ಕ್ರಮವಾಗಿ ಯಾವುದೇ ಸಮಯದಲ್ಲಿ ಹೇಚ್ಚಾದ ನೀರನ್ನು ಹೊರಬಿಡಲಾಗುವದು
ಲಿಂಗನಮಕ್ಕಿ ಆಣೆಕಟ್ಟಿನಿಂದ ಹೊರಬಿಟ್ಟ ನೀರು ಗೇರಸೊಪ್ಪಾ ಜಲಾಶಯಕ್ಕೆ ಹರಿದುಬರುವದರಿಂದ ಗೇರಸೊಪ್ಪಾ ಆಣೆಕಟ್ಟಿನಲ್ಲಿ ಗರಿಷ್ಠಮಟ್ಟ ತಲುಪಿದರೆ ಯಥಾವತ್ತಾಗಿ ನೀರನ್ನು ಆಣೆಕಟ್ಟನಿಂದ ಹೊರಬಿಡಬೇಕಾಗುತ್ತದೆ. ಕಾರಣ ಶರಾವತಿ ನದಿಯ ಕಳದಂಡೆಯ ನಿವಾಸಿಗಳು ಸುರಕ್ಷಿತ ಕ್ರಮವಹಿಸಬೇಕಾಗುತ್ತದೆ. ಎಂದು ಕರ್ನಾಟಕ ವಿದ್ಯತ್ ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ.
Leave a Comment