ಯಲ್ಲಾಪುರ ತಾಲೂಕಿನ ದೇಹಳ್ಳಿ ಪಂಚಾಯಿತಿ ವ್ಯಾಪ್ತಿಯ ಸಾತೋಡ್ಡಿ ಜಲಪಾತಕ್ಕೆ ಜುಲೈ 23 ರಿಂದ ಪ್ರವಾಸಿಗರನ್ನು ನಿಷೇಧಿಸಿ ಗ್ರಾಮ ಅರಣ್ಯ ಸಮಿತಿ ಹಾಗೂ ಅರಣ್ಯ ಇಲಾಖೆ ಪ್ರಕಟಣೆ ಹೊರಡಿಸಿದೆ.
ತಾಲೂಕು ವ್ಯಾಪ್ತಿಯ ಜಲಪಾತ ಹಳ್ಳಕೊಳ್ಳಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಎಲ್ಲಾ ಪ್ರದೇಶಗಳು ಅಪಾಯದ ಸ್ಥಿತಿಗೆ ತಲುಪಿವೆ.
ಈ ಕಾರಣದಿಂದ ಪ್ರವಾಸಿಗರು ಯಾವುದೇ ಅಪಾಯಕ್ಕೆ ಸಿಲುಕಬಾರದು ಎನ್ನುವುದು ಉದ್ದೇಶದಿಂದ ಮುಂದಿನ ಪ್ರಕಟಣೆಯವರಗೆ ಜುಲೈ 23 ರಿಂದ ಪ್ರವಾಸಿಗಳನ್ನು ನಿಷೇಧಿಸಲಾಗಿದೆ ಎಂದು ವಿ. ಎಸ್. ಪಿ ಅಧ್ಯಕ್ಷ ನಾರಾಯಣ ಭಟ್ ತಿಳಿಸಿದ್ದಾರೆ.
ಈ ಕುರಿತು ಬಿಸ್ಕೊಡ್ ಕ್ರಾಸ್ ಬಳಿ ಸಾತೋಡಿ ಜಲಪಾತ ತೆರಳುವ ರಸ್ತೆಯ ಪಕ್ಕದಲ್ಲಿ ಪ್ಲೇಕ್ಸ್ ಬೋರ್ಡನ್ನು ಕೂಡ ಅಳವಡಿಸಲಾಗಿದೆ.
Yellapura news:ಸುದ್ದಿ ಹಾಗೂ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗಿhttps://chat.whatsapp.com/D0Ry5Povwke1s77ibSLq4A

Leave a Comment