ಹೊನ್ನಾವರ : ತಾಲೂಕಿನ ಪುರಾಣ ಪ್ರಸಿದ್ಧ ಇಡಗುಂಜಿ ಶ್ರೀ ವಿನಾಯಕ ದೇವರ ಸನ್ನಿಧಿಯಲ್ಲಿ ಸರ್ವವಿಧ ಸೇವೆಗಳು ಪ್ರಾರಂಭವಾಗಲಿದೆ ಎಂದು ದೇವಾಲಯದ ಪಾರಂಪರಿಕ ಅರ್ಚಕರಾದ ವೇ.ಮೂ. ಮಂಜುನಾಥ ಶಿವರಾಮ್ ಭಟ್ಟ ತಿಳಿಸಿದ್ದಾರೆ.
ಕೊರೊನಾ ಎರಡನೇ ಅಲೆಯ ಕಾರಣಕ್ಕೆ ಬಾಗಿಲು ಮುಚ್ಚಿದ್ದ ದೇವಾಲಯಗಳನ್ನು ಲಾಕ್ ಡೌನ್ ಸಡಿಲಿಕೆ ಮಾಡಿದ ನಂತರ ಜುಲೈ ಮೂರರಂದು ಬಾಗಿಲು ತೆರೆದು ಭಕ್ತರಿಗೆ ಕೇವಲ ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ಯಾವುದೇ ದೇವಾಲಯಗಳಲ್ಲಿ ಭಕ್ತರ ಸೇವೆಗಳಿಗೆ ಅವಕಾಶವಿರಲಿಲ್ಲ.

ಜುಲೈ 25 ರಂದು ಸರ್ಕಾರ ಕೋವಿಡ್ ನಿಯಮಾವಳಿಗಳ ಪರಿಷ್ಕೃತ ಆದೇಶ ಹೊರಡಿಸಿದ್ದು ದೇವಾಲಯ, ಮಸೀದಿ, ಚರ್ಚ್, ಗುರುದ್ವಾರ ಸೇರಿದಂತೆ ಧಾರ್ಮಿಕ ಕೇಂದ್ರಗಳಲ್ಲಿ ಪೂಜೆ, ಪುನಸ್ಕಾರ ಸೇರಿದಂತೆ ವಿವಿಧ ರೀತಿಯ ಸೇವೆಗಳನ್ನು ಮಾಡಿಸಲು ಭಕ್ತರಿಗೆ ಅವಕಾಶ ನೀಡಲಾಗಿದೆ. ಕೋವಿಡ್ 19 ಸುರಕ್ತಾ ನಿಯಮಗಳನ್ನು ಪಾಲಿಸಿ ದೇವಾಲಯಗಳಲ್ಲಿ ದರ್ಶನ ಹಾಗೂ ಪೂಜೆ ಇನ್ನಿತರ ಸೇವೆಗಳನ್ನು ಸಲ್ಲಿಸಬಹುದಾಗಿದೆ.
ಜುಲೈ.27 ಅಂಗಾರಕ ಸಂಕಷ್ಠಿ
ಜುಲೈ 27 ರಂದು ಅಪರೂಪವೂ ಹಲವಾರು ವಿಶೇಷತೆಯುಳ್ಳದ್ದೂ ಆಗಿರುವ ಅಂಗಾರಕ ಸಂಕಷ್ಠಿ ಇರುವ ಹಿನ್ನಲೆಯಲ್ಲಿ ಧಾರ್ಮಿಕ ಕೇಂದ್ರಗಳಲ್ಲಿ ಸೇವೆಗೆ ಅವಕಾಶ ಕಲ್ಪಿಸಿರುವುದು ಭಕ್ತರ ಖುಷಿಗೆ ಕಾರಣವಾಗಿದೆ.
ಅಂಗಾರಕ ಸಂಕಷ್ಠಿಯಂದು ಇಡಗುಂಜಿಗೆ ನಾಡಿನ ಮೂಲೆ ಮೂಲೆಯಿಂದ ಭಕ್ತರು ಆಗಮಿಸಿ ಶ್ರೀದೇವರ ದರ್ಶನ ಪಡೆಯಲು ಆಗಮಿಸುವ ಸಾಧ್ಯತೆ ಇದೆ. ಕೊರೋನಾ ನಿಯಮವಾದ ಮಾಸ್ಕ ಹಾಗೂ ಸಾಮಾಜಿಕ ಅಂತರ ಕಡ್ಡಾಯವಾಗಿದೆ ಎಂದು ದೇವಾಲಯದ ಆಡಳಿತಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Honvar news:ಸುದ್ದಿ ಹಾಗೂ ಮಾಹಿತಿಗಾಗಿ ನಮ್ಮ. Whatsapp group join ಆಗಿ https://chat.whatsapp.com/G9SxG7l3Wo36m72c85bSOA

Leave a Comment