ಹೊನ್ನಾವರ: ಜಿಲ್ಲೆಯ ವಿವಿಧ ಭಾಗದಲ್ಲಿ ನಡೆದ ಕಾರ್ಮಿಕ ಕಿಟ್ ವಿಚಾರ ಪ್ರತಿಭಟನೆಯ ಕಾವು ಹೊನ್ನಾವರಕ್ಕೂ ತಪ್ಪಿಲ್ಲ. ಅಧಿಕಾರಿಗಳ ದ್ವಂದ ನಿಲುವಿನಿಂದ ಕಾರ್ಮಿಕರು ಕಾದು ಕಿಟ್ ಸಿಗದೇ ಮಿನಿವಿಧಾನಸೌದಕ್ಕೆ ಮುತ್ತಿಗೆ ಹಾಕಿ ಅಧಿಕಾರಿಗಳಿಗೆ ಘೇರಾವ್ ಹಾಕಿದರು. ಈ ಸಮಯದಲ್ಲಿ ಅಧಿಕಾರಿಗಳು ಹಾಗೂ ಕಾರ್ಮಿಕರ ನಡುವೆ ಮಾತಿನ ಚಕಮಕಿ ನಡೆಯಿತು.
ತಾಲೂಕಿನಲ್ಲಿ ನೊಂದಾಯಿತ 14 ಸಾವಿರ ಕಟ್ಟಡ ಕಾರ್ಮಿಕರಿದ್ದು ಸರ್ಕಾರ ಕಾರ್ಮಿಕರಿಗೆ ಕೊರೋನಾ ಮಹಾಮಾರಿಯಿಂದ ಸಂಕಷ್ಟಕ್ಕೆ ಒಳಗಾದವರಿಗೆ ನೆರವಾಗುವ ನಿಟ್ಟಿನಲ್ಲಿ ಕಿಟ್ ವಿತರಿಸಲು ಮುಂದಾಗಿತ್ತು. ತಾಲೂಕಿಗೆ 5 ಸಾವಿರ್ ಕಿಟ್ ಬರಬೇಕಿದ್ದು, ವಾರದ ಹಿಂದೆ ಎರಡು ಸಾವಿರ ಕಿಟ್ ಆಗಮಿಸಿತ್ತು. ಮಳೆ ಹಾಗೂ ರಸ್ತೆ ಸಂಚಾರದ ವ್ಯತಯದಿಂದ 2 ಸಾವಿರ ಕಿಟ್ ಮಂಗಳವಾರ ಆಗಮಿಸಿತ್ತು.
ಕಾರ್ಮಿಕ ಇಲಾಖೆಯ ನಿರೀಕ್ಷಕಿ ಕಾವೇರಿಯವರು 2 ಸಾವಿರ ಜನರಿಗೆ ಟೋಕನ್ ನೀಡಿ ಮಂಗಳವಾರ ಕಿಟ್ ವಿತರಣೆಗೆ ಆಗಮಿಸುವಂತೆ ತಿಳಿಸಿದ್ದರು. ಮಧ್ಯಾಹ್ನದ ಬಳೀಕ ಕಿಟ್ ವಿತರಣೆ ಮಾಡುವುದಿಲ್ಲ ಎನ್ನುವ ತಿರ್ಮಾನಕ್ಕೆ ಬಂದಿರುವುದು ತಾಲೂಕಿನ ಕಾರ್ಮಿಕರಿಗೆ ಮಾಹಿತಿ ಸಿಗಲಿಲ್ಲ. ಗ್ರಾಮೀಣ ಭಾಗವಾದ ಚಿಕ್ಕನಕೋಡ್, ಮಾಗೋಡ, ದರ್ಬಜಡ್ಡಿ, ನಗರಬಸ್ತಿಕೇರಿ ಸೇರಿದಂತೆ ವಿವಿಧಡೆಯಿಂದ ಬೆಳಿಗ್ಗೆ ಕಿಟ್ ಪಡೆಯಲು ಆಗಮಿಸಿಲ್ಲ.
ಕಾರ್ಮಿಕ ಇಲಾಖೆಯ ಸಂಘಟನೆಯ ಪ್ರಮುಖರು ಕಿಟ್ ವಿತರಿಸುದಿಲ್ಲ. ಮಿನಿವಿಧಾನಸೌದದತ್ತ ಹೋಗುವಂತೆ ಸೂಚಿಸಿರುದರಿಂದ ಮಿನಿವಿಧಾನಸೌದತ್ತ ಆಗಮಿಸಿ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದರು. ಸ್ಥಳಕ್ಕೆ ಆಗಮಿಸಿದ ಕಾರ್ಮಿಕ ನಿರೀಕ್ಷಕಿ ಕಾವೇರಿ ಇವರು ವಾಪಸ್ಸು ಮನೆಗೆ ಹೋಗುವಂತೆ ಸೂಚಿಸಿದರು. ಇದಕ್ಕೆ ಒಪ್ಪದೇ ಅಧಿಕಾರಿಗಳಿಗೆ ಪ್ರಶ್ನೆಯ ಸುರಿಮಳೆಗೈದರು. ಈ ವೇಳೆ ಅಧಿಕಾರಿಗಳು ಕಾರ್ಮಿಕರ ನಡುವೆ ಮಾತಿನ ಚಕಮಕಿ ಉಂಟಾಯಿತು. ಸ್ಥಳಕ್ಕೆ ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಕರವೇ ಅಧ್ಯಕ್ಷ ಮಂಜುನಾಥ ಗೌಡ ಸೇರಿದಂತೆ ಪ್ರಮುಖರು ಆಗಮಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
………………………
ಮಾಧ್ಯಮದವರು ಪ್ರಶ್ನಿಸುತ್ತಾರೆಂದು ಸ್ಥಳದಿಂದ ಓಡಿ ಹೋದ ಅಧಿಕಾರಿ.
ಕಾರ್ಮಿಕ ಕಿಟ್ ವಿಷಯ ಹಾಗೂ ಮಿನಿವಿಧಾನಸೌದದ ಮುಂಭಾಗ ಜನಜಗುಂಲಿ ಅರಿತ ಮಾಧ್ಯಮದವರು ಸ್ಥಳಕ್ಕೆ ಆಗಮಿಸಿ ಪ್ರಶ್ನಿಸಿದಾಗ ಉತ್ತರಿಸಲು ತಲಕಾಡಿ ಸ್ಥಳದಿಂದ ಉತ್ತರಿಸದೇ ಕಾಲ್ಕಿತ್ತರು. ಮತ್ತೊಮ್ಮೆ ಕಾಣಿಸಿಕೊಂಡಾಗ ಕಾರ್ಮಿಕರ ಕೆಲಸ ಬಿಟ್ಟು ಬಂದು ಕುಳಿತಿದ್ದಾರೆ. ಮಾಹಿತಿ ನೀಡಿ ಇಲ್ಲದೆ ಹೋದಲ್ಲಿ ಮೇಲಾಧಿಕಾರಿಯೊಂದಿಗೆ ಪ್ರಶ್ನೆ ಮಾಡುತ್ತೇವೆ ಎನ್ನುತ್ತಿರುವಾಗ ತಹಶೀಲ್ದಾರ ವಿವೇಕ ಶೇಣ್ವಿ ಆಗಮಿಸಿ ಸಮಸ್ಯೆ ಆಲಿಸಿದರು.
……………………………
ತಾಲೂಕಿನ 14 ಸಾವಿರ ನೊಂದಾಯಿತ ಕಾರ್ಮಿಕರಿಗೆ ಕಿಟ್ ನೀಡಲೇಬೇಕು, ಸರ್ಕಾರ ಈ ವಿಷಯದಲ್ಲಿ ರಾಜಕಾರಣ ಮಾಡಲು ಬಿಡುವುದಿಲ್ಲ. ಸ್ಥಳಿಯ ಶಾಸಕರು ತಮಗೆ ಬೇಕಾದವರಿಗೆ ಕಿಟ್ ನೀಡಲು ಮುಂದಾದಲ್ಲಿ ಪ್ರತಿಭಟನೆ ನಡೆಸಿ ಕಾರ್ಮಿಕರ ಪರವಾಗಿ ಪಕ್ಷ ನಿಲ್ಲಲಿದೆ
ಸೂರಜ್ ನಾಯ್ಕ ಸೋನಿ ಜೆಡಿಎಸ್ ಮುಖಂಡ
……………
ಗ್ರಾಮೀಣ ಭಾಗದಿಂದ ಕೆಲಸ ಬಿಟ್ಟು ಇಡೀ ದಿನ ಹಾಳಾಗಿದೆ. ಅಧಿಕಾರಿಗಳು ಕಾರ್ಮಿಕರ ಕಷ್ಟ ಅರಿತು ಕಾರ್ಯನಿರ್ವಹಿಸಬೇಕು. ಕಾರ್ಮಿಕ ಕಾರ್ಡನಿಂದ ಹಿಡಿದು ಇಲಾಖೆಯ ಸೌಲಭ್ಯ ನೈಜ ಕಾರ್ಮಿಕರಿಗೆ ಸಿಗದೇ ಅನ್ಯಾಯವಾಗುತ್ತಿದೆ, ಇಲ್ಲಿ ಮಧ್ಯವರ್ತಿ ಹಾವಳಿ ಇದ್ದು ಮೇಲಾಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು
ಮಂಜುನಾಥ ಗೌಡ ಕರವೇ ಅಧ್ಯಕ್ಷ
..
………………
ಅಧಿಕಾರಿಗಳು ಎಡವಿರುವುದು ಎಲ್ಲಿ
ತಾಲೂಕಿನಲ್ಲಿ 14 ಸಾವಿರ ಕಾರ್ಮಿಕರಿದ್ದು 5 ಸಾವಿರ ಕಿಟ್ ಬರಲಿದೆ. ಇದನ್ನು ತಾಲೂಕ ಕೇಂದ್ರದಲ್ಲಿ ವಿತರಿಸದೇ ಹೋಬಳಿವಾರು ವಿಂಗಡಿಸಬಹುದಿತ್ತು. ಇಲಾಖೆ ನಿಯಮವಿಲ್ಲದೇ ಟೋಕನ್ ನೀಡಲು ಒಂದು ದಿನ ಕಿಟ್ ನೀಡಲು ಇನ್ನೊಂದು ದಿನ ಮಾಡಿರುದು ತಪ್ಪಾಗಿದೆ. ಕೆಲ ಟೋಕನ್ ನೇರವಾಗಿ ಕಾರ್ಮಿಕರಿಗೆ ನೀಡಿ ಇನ್ನು ಕೆಲವು ಸಂಘಟಕರ ಮೂಲಕ ನೀಡಿರುದು. ಕೋರೋನಾ ನಿಯಮವಿದ್ದರು ಮಂಗಳವಾರ ಕಿಟ್ ವಿತರಣೆಗೆ 2 ಸಾವಿರ ಟೋಕನ್ ನೀಡಿರುದು. ಕೊನೆಕ್ಷಣದಲ್ಲಿ ಕಿಟ್ ನೀಡಲು ಹಿಂದೆ ಸರಿದಿರುವುದು. ಸಮಸ್ಯೆ ಅರಿವಿದ್ದರು ಪೋಲಿಸ್ ಇಲಾಖೆಯ ಸಹಕಾರ ಪಡೆಯದೇ ಇರುವುದು. ತಹಶೀಲ್ದಾರ ಸೇರಿದಂತೆ ವಿವಿಧ ಇಲಾಖೆಗೆ ಮಾಹಿತಿ ನೀಡದೇ ಒರ್ವರೆ ನಿಭಾಹಿಸಲು ಮುಂದಾಗಿರುದು.
Leave a Comment