ಹೊನ್ನಾವರ: ಕೋರೋನಾ ಕಾರಣ ನೀಡಿ ಎಸ್.ಎಸ.ಎಲ್.ಸಿ ಮತ್ತು ದ್ವೀತೀಯ ಪಿಯುಸಿ ವಿದ್ಯಾರ್ಥಿಗಳ ತೆರ್ಗಡೆ ಮಾಡುವ ಸರ್ಕಾರ, ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಸಮಯವಕಾಶ ನೀಡಲು ಮುಂದಾಗದೇ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು ತರಲು ಮೂಂದಾಗಿದೆ ಎಂದು ಪದವಿ ವಿದ್ಯಾರ್ಥಿಗಳು ತಹಶೀಲ್ದಾರ ಕಛೇರಿಯ ಮುಂಭಾಗ ಆಕ್ರೋಶ ವ್ಯಕ್ತಪಡಿಸಿದರು.
ಎಸ್.ಡಿ.ಎಂ. ಕಾಲೇಜು ಹಾಗೂ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಈ ಹಿಂದೆ ವಿಶ್ವವಿದ್ಯಾಲಯದ ಆದೇಶದಂತೆ ಬಹು ಆಯ್ಕೆಯ ಮಾದರಿ ಪರೀಕ್ಷೆ ಹಾಗೂ ಸಮಯ ನೀಡಿ ಪರೀಕ್ಷೆ ನಡೆಸಬೇಕೆಂದು ಮನವಿ ನೀಡಿದ್ದರು. ಮನವಿಯನ್ನು ತಾಲೂಕ ಮಟ್ಟದ ಅಧಿಕಾರಿಗಳು, ವಿಶ್ವವಿದ್ಯಾಲಯದ ಕುಲಪತಿಗಳು ಹಾಗೂ ಹಾಲಿ ಮಾಜಿ ಜನಪ್ರತಿನಿಧಿಗಳಿಗೆ ಮನವಿ ನೀಡಿ ಬೇಡಿಕೆ ಈಡೇರಿಕೆಗೆ ಜುಲೈ 26ಕ್ಕೆ ಗಡುವು ನೀಡಿದ್ದರು.

ಈವರೆಗೂ ಮನವಿಗೆ ಸಂಭದಿಸಿದಂತೆ ಯಾವುದೇ ಬದಲಾವಣೆ ಆಗದೇ ಇರುದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳೂ ಮಿನಿವಿಧಾನಸೌದಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಕೊರೋನಾ ಕಾರಣ ಹೇಳಿ ಉಳಿದವರಿಗೆ ತೆರ್ಗಡೆ ಮಾಡುವ ಸರ್ಕಾರ ನಮಗೆ ಪರೀಕ್ಷೆ ನಡೆಸಲು ಸಮಯ ನೀಡುತ್ತಿಲ್ಲ ಎಂದು ಸರ್ಕಾರದ ವಿರುದ್ದ ಹರಿಹಾಯ್ದು, ಅಧಿಕಾರ ಉಳಿಸಿಕೊಳ್ಳಲು ಹಾಗೂ ಮಂತ್ರಿಗಿರಿ ಉಳಿಸಿಕೊಳ್ಳುವತ್ತ ಗಮನಹರಿಸುತ್ತಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿದರು.
ಜುಲೈ 2 ಮತ್ತು 16ರಂದು ಆದೇಶದಂತೆ ಸಮ, ಬೆಸ ಸೆಮಿಸ್ಟರ್ ಪರೀಕ್ಷೆ ನಡೆಸಿ ಬಹು ಆಯ್ಕೆಯ ಮಾದರಿ ಪರೀಕ್ಷೆ ನಡೆಸುವಂತೆ ತಹಶೀಲ್ದಾರ ವಿವೇಕ ಶೇಣ್ವಿ ಮೂಲಕ ಮನವಿ ಸಲ್ಲಿಸಿದರು.
ಹೋರಾಟಕ್ಕೆ ಬೆಂಬಲ ಸೂಚಿಸಿ ಸ್ಥಳಕ್ಕಾಗಮಿಸಿದ ಸೂರಜ್ ನಾಯ್ಕ ಸೋನಿ ಮಾತನಾಡಿ ಇದು ವಿದ್ಯಾರ್ಥಿಗಳಿಗೆ ಗೊಂದಲ ಜೊತೆ ಭವಿಷ್ಯಕ್ಕೆ ಕೊಡಲಿಪೆಟ್ಟು ನೀಡುವ ತೀರ್ಮಾನವಾಗಿದೆ. ಈಗಾಗಲೇ ಉಪಕುಪತಿಗಳೊಂದಿಗೆ ಚರ್ಚಿಸಿದ್ದು ಸಮಸ್ಯೆ ಶೀಘ್ರವಾಗಿ ಬಗೆಹರಿಸುವ ಭರವಸೆ ನೀಡಿದ್ದಾರೆ ಶಾಸಕರು ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಆಗ್ರಹಿಸಿದರು.
ವಿದ್ಯಾರ್ಥಿ ಮಧುರೇಶ ಗೌಡ ಮಾತನಾಡಿ ವಿದ್ಯಾರ್ಥಿಗಳಾದ ನಾವು ಕಾಲೇಜಿನಲ್ಲಿ ಇರಬೇಕಾದವರು ಇಂದು ಪ್ರತಿಭಟನೆ ನಡೆಸಬೇಕಾದ ಸ್ಥಿತಿ ಒದಗಿಬಂದಿದೆ. ನೀವು ಈ ಹಿಂದೆ ಹೇಳಿದಂತೆ ಬಹು ಆಯ್ಕೆ ಮಾದರಿ ಪರೀಕ್ಷೆ ಬಗ್ಗೆ ತಿಳಿಸಿರುದಕ್ಕೆ ನಾವು ಸಿದ್ದರಾಗಿದ್ದೇವೆ. ಸಮಯವಕಾಶ ನೀಡಿ ಪರೀಕ್ಷೆ ನಡೆಸುವಂತೆ ಕುಲಪತಿಗಳು ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು.ಕರವೇ ಅರ್ಧಯಕ್ಷ ಮಂಜುನಾಥ ಗೌಡ, ಕ್ರಾಂತಿರಂಗದ ಮುಖಂಡ ಸಚೀನ ನಾಯ್ಕ ಪದವಿ ವಿದ್ಯಾರ್ಥಿಗಳು ಹಾಜರಿದ್ದರು.
Leave a Comment