ಕಾರವಾರ : ಪಾನಲೆ ಮತ್ತು ರಕ್ಷಣೆ ಹಾಗೂ ಕಾನೂನಿನ ಸಂಘರ್ಷಕ್ಕೆ ಒಳಪಟ್ಟು ಮಕ್ಕಳ ಛಾಯಾಚಿತ್ರಗಳನ್ನು ಮುದ್ರಣ ಮತ್ತು ದೃಶ್ಯ ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳವುದು ಬಾಲ ನ್ಯಾಯ ಕಾಯ್ದೆ 2015ರ ಸೆಕ್ಷನ್ 74 ರನ್ವಯ ದಂಡನೀಯ ಅಪರಾಧವಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಘಟಕದ ರಕ್ಷಣಾಧಿಕಾರಿ ಸೋನಲ್ ಐಗಳ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಕ್ಕಳ ಮಾರಾಟ ಮತ್ತು ಸಾಗಾಣಿಕ ಹಾಗೂ ಕಾನೀನು ಬಾಹೀರವಾಗಿದ್ದು, ಸ್ವೀಕಾರ ಕುರಿತಂತೆ ಹಾಗೂ ಕೋವಿಟ್ ಸೋಂಕಿತ, ಬಾಧಿತ ಮಕ್ಕಳಿಗೆ ವಿವಿಧ ರೀತಯ ನೆರವು ರೇಷನ್ ಕಿಟ್ ಒದಗಿಸುತ್ತಿರುವ ಛಾಯಾಚಿತ್ರಗಳು ವಾಟ್ಸಾಪ್ ಗ್ರೂಪ್ನಲ್ಲಿ ಹರಿದಾಡಿದ್ದು ಇವು ಬಾಲ ನ್ಯಾಯಕಾಯ್ದೆಯಡಿ ದಂಡನೀಯ ಅಪರಾಧವಾಗಿದೆ.
ಕೋವಿಡ್ ಹಿನ್ನಲೆ ಪೋಷಕರನ್ನು ಕಳೆದುಕೊಂಡ ಮಕ್ಕಳ ಮಾಹಿತಿಯನ್ನು ಮಾಧ್ಯಮಗಳಲ್ಲಿ ಪ್ರಸಾರ ಮತ್ತು ಪ್ರಕಟಿಸಲಾಗಿದೆ. ಬಾಲ ನ್ಯಾಯ ಕಾಯ್ದೆ 2015 ರ ಸೆಕ್ಷನ್ 74 ರನ್ವಯ ಅಪರಾಧವಾಗಿರುತ್ತದೆ. ಅದೇ ರೀತಿ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಆಗಲಿ ನೇರವಾಗಿ ಮಕ್ಕಳನ್ನು ದತ್ತು ನೀಡುವುದು ಹಾಗೂ ತೆಗೆದುಕೊಳ್ಳವದಾಗಿ ನೀಡುವ ಹೇಳಿಕೆಯನ್ನು ಅನಧೀಕೃತ ಹಾಗೂ ಕಾನೂನು ಬಾಹಿರವೆಂದು ಪರಿಗಣಿಸಿ. ಅಂತಹ ಹೇಳಿಕೆಯನ್ನು ಮಾಧ್ಯಮದಲ್ಲಿ ಪ್ರಕಟಿಸಲು ಅವಕಾಶವಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
Leave a Comment