
ಯಲ್ಲಾಪುರ: ನೆರೆ ಪರಿಹಾರಕ್ಕೆ ರಾಜ್ಯಸರಕಾರದಲ್ಲಿ ಹಣಕ್ಕೆ ಕೊರತೆಯಿಲ್ಲ ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದೇನೆ .ಹಾನಿಯ ನಿಖರ ಮಾಹಿತಿ ಪಡೆದ ಬಳಿಕ ಕೇಂದ್ರಕ್ಕೆ ಹೆಚ್ಚಿನ ನೆರವು ಕೇಳುವ ಕುರಿತು ಚರ್ಚಿಸುತ್ತೇವೆ ಎಂದರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಗುರುವಾರ ಅತಿವೃಷ್ಟಿಗೀಡಾದ ತಾಲೂಕಿನ ತಳಕೆಬೈಲ್, ಅರಭೈಲ್ ಘಟ್ಟ ಬಳಿ ಭೂಕುಸಿತ ,ರಸ್ತೆ ಬಿರುಕು ಬಿಟ್ಟ ಪ್ರದೇಶ , ಕೊಚ್ಚಿ ಹೋದ ಗುಳ್ಳಪುರ ಸೇತುವೆ ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.ಶಾಸಕ ಶಿವರಾಮ ಹೆಬ್ಬಾರ ಮುಖ್ಯ ಮಂತ್ರಿಗಳಿಗೆಹಾನಿಗೊಳಗಾದ ಪ್ರದೇಶಗಳ ಕುರಿತು ಸಂಪೂರ್ಣ ಮಾಹಿತಿ ನೀಡಿದರು.

ಕಳಚೆ ರಸ್ತೆ ಸಂಪರ್ಕಇಲ್ಲದೇ ಸಂತ್ರಸ್ತರು ವಿದ್ಯಾರ್ಥಿಗಳು ಅನುಭಿಸುತ್ತಿರುವ ಸಮಸ್ಯೆಗಳನ್ನು ಮುಖ್ಯಮಂತ್ರಿಯೆದುರು ಹೇಳಿಕೊಂಡು ಕಣ್ಣಿರಿಟ್ಟರು. ಈಭಾಗದಲ್ಲಿ ಮೂಲಭೂತ ಸೌಕರ್ಯಗಳ ಪುನನಿರ್ಮಾಣಕ್ಕಾಗಿ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡುವ ಜೊತೆಯಲ್ಲಿ ಸಂತ್ರಸ್ತರಿಗೆ ಶೀಘ್ರ ಪರಿಹಾರವನ್ನು ಮಂಜೂರು ಮಾಡುವಂತೆ ಮನವಿ ಮಾಡಿದರು.
ತುರ್ತಾಗಿ ಮುಖ್ಯಮಂತ್ರಿಗಳನ್ನು ಹಾನಿಗೊಳಗಾದ ಪ್ರದೇಶಗಳಿಗೆ ಕರೆದುಕೊಂಡು ಬಂದಿರುವ ಶಾಸಕ ಶಿವರಾಮ ಹೆಬ್ಬಾರ ಅವರ ಕಾರ್ಯ ವೈಕರಿ ಬಗ್ಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಯಲ್ಲಾಪುರ ಪ್ರವಾಸಿಮಂದಿರದಲ್ಲಿ ಮುಖ್ಯಮಂತ್ರಿಗಳಿಗೆ ಪುಷ್ಪವೃಷ್ಟಿ ಮಾಡಿ ಸನ್ಮಾನಿಸಿ ಗೌರವಿಸಲಾಯಿತು. ನೂತನ ಮುಖ್ಯಮಂತ್ರಿಗಳನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು.ನಂತರ ಅರಭೈಲ್ ಭೂಕುಸಿತ ಗುಳ್ಳಾಪುರ ಪ್ರದೇಶ ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ ಸದಸ್ಯ ಶಾಂತರಾಮ ಸಿದ್ದಿ, ವಾಕರರಾ ಸಂಸ್ಥೆಯ ಅಧ್ಯಕ್ಷ ವಿ.ಎಸ್ ಪಾಟೀಲ, ಭಟ್ಕಳ ಶಾಸಕ ಸುನೀಲ ನಾಯ್ಕ, ವಿ.ಪಂ ರಾ ಉಪಾಧ್ಯಕ್ಷ ಪ್ರಮೋದ ಹೆಗಡೆ, ಜಿಲ್ಲಾಧಿಕಾರಿ ಮುಲ್ಲೆöÊ ಮುಗಿಲನ್ ಮುಂತಾದವರು ಇದ್ದರು.
Leave a Comment