ಯಡಿಯೊರಪ್ಪ ಜಾರಿಗೆ ತಂದ ಆದೇಶ ಪಾಲನೆ : ಸಿಎಂ
ಕಾರವಾರ : ಮಳೆ ಸಂತ್ರಸ್ತರಿಗೆ ತಲಾ 10.ಸಾವಿರ ರು. ತುರ್ತು ಪರಿಹಾರ ನೀಡುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾvಯಿ ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.
ಅಂಕೋಲಾ ನಾಡವರ ಸಭಾಭವನದಲ್ಲಿ ಗುರುವಾರ ಸಂಜೆ ಏರ್ಪಡಿಸಿದ ಪ್ರವಾಹ ಪರಿಸ್ಥಿತಿ ಮತ್ತು ಅದರಿಂದ ಆಗಿರುವ ಹಾನಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು ಮನೆ ಕಳೆದುಕೊಂಡಿದವರಿಗೆ 2019ರಲ್ಲಿ ಮಾಜಿ ಸಿಎಂ. ಯಡಿಯೊರಪ್ಪ ಅವರ ಅವಧಿಯಲ್ಲಿ ನೀಡಲಾಗುತ್ತಿದೆ. 10 ಸಾವಿರ ರು. ತಕ್ಷಣದ ಪರಿಹಾರವನ್ನು ಈ ಬಾರಿಯೂ ನೀಡಲಾಗುವುದು.

ಜಿಲ್ಲಾಧಿಕಾರಿ ವೈಯಕ್ತಿನ ಖಾತೆಯಲ್ಲಿ 42 ಕೋ. ರು ಇದೆ ಎನ್ನುವ ಮಾಹಿತಿ ಮಡೆದ ಮುಖ್ಯಮಂತ್ರಿ ಈಗಾಗಲೇ ಎನ್.ಡಿ.ಆರ್.ಎಫ್ ಮಾನದಂಡದ ಪ್ರಕಾರ ಮಳೆ ಸಂತ್ರಸ್ತರಿಗೆ ರು.3800 ನೀಡಲಾಗುತ್ತದೆ. ಆದರೆ ಉಳಿದ 6200 ರು. ಗಳನ್ನು ತಕ್ಷಣವೇ ಬಿಡುಗಡೆಗೆ ಕ್ರಮ ಕೈಕೊಳ್ಳಬೇಕು. ಜಿಲ್ಲೆಯಲ್ಲಿ ಒಟ್ಟೂ 114 ಮನೆಗಳಿಗೆ ಮನೆ ಹಾನಿಯಾಗಿದ್ದು, ಅವರಿಗೆಲ್ಲರೂ ಜಿಲ್ಲಾಧಿಕಾರಿ ಖಾತೆಯಲ್ಲಿರುವ ಹಣದಿಂದ ರು.10 ಸಾವಿರ ತುರ್ತು ಪರಿಹಾರ ನೀಡಬೆಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಅರಣ್ಯ ಹಕ್ಕು ಕಾಯ್ದೆಯಡಿ ಯರ‍್ಯಾರು ಅರಣ್ಯ ಭೂಮಿ ಮಂಜೂರಾತಿಗಾಗಿ ಪ್ರಯತ್ನಿಸುತ್ತಿದ್ದಾರೋ ಅಂತವರ ಮನೆ ಮನೆ ಹಾನಿಗೀಡಾಗಿದ್ದಾರೆ ಅವರಿಗೆಲ್ಲ 2019 ಪರಿಗಾರ ನೀತಿಯಂತೆ ಪರಿಹಾರ ನೀಡಬೇಕು. ಅಂತವರ ಮಾಹಿತಿ ಸಂಗ್ರಹಿಸಿ ತಕ್ಷಣದ ಪರಿಹಾರದ ಕ್ರಮಕ್ಕೆ ಮುಂದಾಗಿ ವಾರದೊಳಗಾಗಿ ಹಾನಿಯ ಸಮೀಕ್ಷೆ ನಡೆಸಿ ಎಂದು ಜಿಲ್ಲಾಧಿಕಾರಿ ಮುಖ್ಯಮಂತ್ರಿ ಸೂಚಿಸಿದ್ದಾರೆ.
Leave a Comment