ಬೆಂಗಳೂರು: ಮಾದಕ ವಸ್ತು ಅಫೀಮು
ಮಾರಾಟದಲ್ಲಿ ತೊಡಗಿದ್ದ ರಾಜಸ್ಥಾನ ಮೂಲದ
ಇಬ್ಬರನ್ನು ಆಗ್ನೇಯ ವಿಭಾಗದ ಪರಪ್ಪನ ಅಗ್ರಹಾರ ಠಾಣೆ
ಪೆÇಲೀಸರು ಬಂಧಿಸಿ 20 ಲಕ್ಷ ರೂ. ಮೌಲ್ಯದ 1 ಕೆಜಿ
ಅಫೀಮು ವಶಪಡಿಸಿಕೊಂಡಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿಯ
ವಿನಾಯಕನಗರ ಲೇಔಟ್ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ
ಅಮರಾರಾಮ್ (32) ಮತ್ತು ಚಿಕ್ಕಬಾಣಾವಾರದ
ಹೆಸರಘಟ್ಟ ಮುಖ್ಯರಸ್ತೆಯಲ್ಲಿ ವಾಸವಾಗಿದ್ದ ಮೋತಿಲಾಲ್
(48) ಬಂಧಿತ ಆರೋಪಿಗಳು. ಆಗ್ನೇಯ ವಿಭಾಗದಲ್ಲಿ
ಮಾದಕ ವಸ್ತುಗಳ ಮಾರಾಟ, ಖರೀದಿ, ಸಾಗಾಣಿಕೆಯಲ್ಲಿ
ತೊಡಗಿರುವವರ ಬಗ್ಗೆ ನಿಗಾ ವಹಿಸಿ ಪತ್ತೆ ಮಾಡಲು
ಉಪ ಪೆÇಲೀಸ್ ಕಮಿಷನರ್ ಶ್ರೀನಾಥ್ ಮಹದೇವ
ಜೋಶಿ ಅವರ ಮಾರ್ಗದರ್ಶನದಲ್ಲಿ ಎಲೆಕ್ಟ್ರಾನಿಕ್ ಸಿಟಿ
ಉಪವಿಭಾಗದ ಸಹಾಯಕ ಪೆÇಲೀಸ್ ಕಮಿಷನರ್
ಪವನ್ ನೇತೃತ್ವದಲ್ಲಿ ಪರಪ್ಪನ ಅಗ್ರಹಾರ ಠಾಣೆ ಇನ್ಸ್ಪೆಕ್ಟರ್
ಸಂದೀಪ್ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು.

ಈ ತಂಡ ಕಾರ್ಯಾಚರಣೆ ನಡೆಸುತ್ತಿದ್ದಾಗ ಎಲೆಕ್ಟ್ರಾನಿಕ್
ಸಿಟಿ ಎರಡನೆ ಹಂತದ ವೋಲ್ಗಾ ರೆಸ್ಟೋರೆಂಟ್
ಮುಂಭಾಗ ದ್ವಿಚಕ್ರ ವಾಹನದಲ್ಲಿ ಮಾದಕ ವಸ್ತು ಅಫೀಮು
ಇಟ್ಟುಕೊಂಡು ಪಿಜಿಯ ಯುವಕ-ಯುವತಿಯರಿಗೆ
ಹಾಗೂ ಸಾಫ್ಟ್ವೇರ್ ಕಂಪೆನಿಗಳ ನೌಕರರಿಗೆ ಮಾರಾಟ
ಮಾಡಲು ಯತ್ನಿಸುತ್ತಿದ್ದ ಬಗ್ಗೆ ಮಾಹಿತಿ ಲಭಿಸಿದೆ.
Leave a Comment