• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ವಿಶ್ವದರ್ಶನ ಶಿಕ್ಷಣ ಸಂಸ್ಥೆಯಿಂದ ಸಂತ್ರಸ್ತರನ್ನು ರಕ್ಷಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳಿಗೆ ಸನ್ಮಾನ

July 31, 2021 by Jayaraj Govi Leave a Comment

IMG 20210730 192013 scaled

ಯಲ್ಲಾಪುರ: ಕಷ್ಟದಲ್ಲಿ ಸಿಲುಕಿಕೊಂಡವರಿಗೆ ಸಹಾಯ ಮಾಡುವುದು ಮಾನವ ಧರ್ಮ ಎಂದು ವಿಶ್ವದರ್ಶನ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಹಾಗೂ ಉದ್ಯಮಿ ಶ್ರೀನಿವಾಸ ಹೆಬ್ಬಾರ್ ಹೇಳಿದರು.    ಅವರು ಶುಕ್ರವಾರ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ  ನೆರೆ ಪ್ರವಾಹದ ಪರಿಸ್ಥಿತಿಯಲ್ಲಿ ತಮ್ಮ ಜೀವದ ಹಂಗು ತೊರೆದು ಸಂತ್ರಸ್ತರನ್ನು ರಕ್ಷಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗೆ ಗೌರವಿಸಿ ಮಾತನಾಡಿದರು.    ಅಪಾಯದಲ್ಲಿ ಇರುವವರನ್ನು ರಕ್ಷಿಸಲು ಬೇರೆ ಯಾರೋ ಬರುತ್ತಾರೆ ಎಂದು ಕಾಯುವ ಬದಲು ಅನಾಹುತ ತಪ್ಪಿಸಲು ಜನ ಮುಂದೆ ಬರಬೇಕು. ಜನರ ನೋವಿಗೆ ಸ್ಪಂದಿಸುವ ದೊಡ್ಡಗುಣವನ್ನು ಪ್ರತಿಯೊಬ್ಬರು ಬೆಳಸಿಕೊಳ್ಳಬೇಕು.  ಸೇವೆ ಮಾಡುವದರಲ್ಲಿನ ಖುಷಿಯನ್ನು ಅನುಭವಿಸಬೇಕು ಎಂದರು.

IMG 20210730 191803 scaled

ಕಾರ್ಯಕ್ರಮ‌ ಉದ್ಘಾಟಿಸಿದ ಜಿಲ್ಲಾ ಅಗ್ನಿ ಶಾಮಕ ದಳದ ಅಧಿಕಾರಿ ಮಂಜುನಾಥ ಸಾಲಿ ಮಾತನಾಡಿ, ಅಗ್ನಿ ಶಾಮಕ ದಳವು ಬೆಂಕಿ ಅವಘಡ, ಅಪಘಾತ ಮೊದಲಾದ ನೋವಿನ ವೇಳೆ ನಿಸ್ವಾರ್ಥವಾಗಿ ಸೇವೆ ಮಾಡುತ್ತಿದೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಕೆಲಸ ಗುರುತಿಸಿ ಶಿಕ್ಷಣ ಸಂಸ್ಥೆಯೊಂದು ಗೌರವಿಸುತ್ತಿರುವುದು ಇದೇ ಮೊದಲು ಎಂದು ಹೇಳಿದರು. ಮೂಲಭೂತ ಸೌಕರ್ಯದ ನಡುವೆಯೂ 18ರಕ್ಷಣಾ ತಂಡಗಳನ್ನು ಮಾಡಿ ಕದ್ರಾ ಹಾಗೂ ಕಳಚೆಯಲ್ಲಿ ಸಾವಿರಕ್ಕೂ ಅಧಿಕ ನೆರೆ ಸಂತ್ರಸ್ತರನ್ನು ರಕ್ಷಿಸಿದ ಬಗ್ಗೆ ವಿವರಿಸಿದರು. ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ನಿರ್ದೇಶಕ ನರಸಿಂಹ ಕೋಣೆಮನೆ ಮಾತನಾಡಿ, ಪಠ್ಯದ ಬೋಧನೆ ಮಾತ್ರವಲ್ಲದೇ ವಿದ್ಯಾರ್ಥಿಗಳಿಗೆ ಬದುಕಿನ ಪಾಠ ಕಲಿಸಲು ವಿಶ್ವದರ್ಶನ ಸೇವಾ ಕೆಲಸ ಶುರು ಮಾಡಿದೆ. ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿದ ಸಂತೃಪ್ತಿಯಿದೆ. ಸಾಮಾಜಿಕ ಕಾಳಜಿಯಿಂದ ಈ ಕೆಲಸ ಮಾಡಲಾಗಿದ್ದು, ಪ್ರತಿಯೊಬ್ಬರಿಗೂ ಪರೋಪಕಾರ ಹಾಗೂ ಸೇವೆ ಪ್ರೇರಣೆಯಾಗಬೇಕು.‌ ಜೊತೆಗೆ ಸೇವೆ ಮಾಡುವವರನ್ನು ಗುರುತಿಸುವ ಕೆಲಸವನ್ನು  ಆಗಬೇಕು ಎಂದು ಗೌರವ ಸಮರ್ಪಣೆ ಮಾಡಲಾಗಿದೆ ಎಂದರು.      ವಿಶ್ವದರ್ಶನ ಸೇವಾ ತಂಡದ ಸದಸ್ಯೆ ವನಿತಾ ಭಾಗ್ವತ್ ಹಾಗೂ ಅಗ್ನಿ ಶಾಮಕ ದಳ ಸಿಬ್ಬಂದಿ ನಾಗೇಶ ದೇವಾಡಿಗ ರಕ್ಷಣಾ ಕಾರ್ಯದಲ್ಲಿ ಭಾಗವಹಿಸಿದ ಅನುಭವ ಹಂಚಿಕೊಂಡರು.

IMG 20210730 WA0133

ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್ ಭಟ್ಟ ಮಾತನಾಡಿದರು. ನೆರೆ ಪ್ರವಾಹದ ವೇಳೆ ಶೌರ್ಯ ಮೆರೆದ ಅಗ್ನಿ ಶಾಮಕ ದಳದ ಸಿಬ್ಬಂದಿಗಳಾದ ಎನ್ ಸುರೇಶ್, ಭೀಮರಾವ ಉಪ್ಪಾರ್, ಹಣಮಂತ ನಾಯ್ಕ, ಪದ್ಮನಾಭ ಕಾಂಡನ, ಬಾರಬೋಜಾ ಟೋನಿ, ಜಯಸಿಂಗ್ ಟೋಸಣ್ಣನವರ್, ರವಿ ಹವಲ್ದಾರ್, ರಮೇಶ ಬೀರಾದರ, ನಾಗೇಶ ದೇವಾಡಿಗ, ಅಮಿತ ಗುನಗಿ, ಪ್ರಶಾಂತ ಬಾರ್ಕಿ, ಅಡಿವೆಪ್ಪ ಪುಂಜಗ ಅವರನ್ನು ಸನ್ಮಾನಿಸಲಾಯಿತು. ಅಗ್ನಿಶಾಮಕ ದಳದ ಯಲ್ಲಾಪುರ ಠಾಣಾಧಿಕಾರಿ ಶಂಕರ್ ಅಂಗಡಿ ಹಾಗೂ ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಮಂಜುನಾಥ ಸಾಲಿ ಗೌರವ ಸ್ವೀಕರಿಸಿದರು.     ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ಗುರುರಾಜ ಕುಂದಾಪುರ ಇದ್ದರು. ಡಾ.‌ಕವಿತಾ ಹೆಬ್ಬಾರ್ ನಿರ್ವಹಿಸಿದರು. ಅನನ್ಯಾ ಹಳೆಮನೆ ತಂಡದವರು ಸೇವಾ ಗೀತೆ ಹಾಡಿದರು. ಮುಕ್ತಾ ಶಂಕರ್ ಸ್ವಾಗತಿಸಿದರು. ಗಣೇಶ ಭಟ್ಟ ವಂದಿಸಿದರು. ಮಕ್ಕಳು ಹಾಗೂ ಪಾಲಕರು ಆನಲೈನ್ ಮೂಲಕ ಕಾರ್ಯಕ್ರಮ ವೀಕ್ಷಿಸಿದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Other

Explore More:

About Jayaraj Govi

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,025 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...