ಪಾಲ್ಘರ್:
ಐಸಿಐಸಿಐ ಬ್ಯಾಂಕ್ಗೆ ನುಗ್ಗಿದ ಇಬ್ಬರು ದರೋಡೆಕೋರರು ಮಹಿಳಾ ಅಧಿಕಾರಿಯೊಬ್ಬರನ್ನು ಇರಿದು ಕೊಂದು ಮತ್ತಿಬ್ಬರ ಮೇಲೆ
ಮಹಿಳಾ ಅಧಿಕಾರಿಯೊಬ್ಬರನ್ನು ಇರಿದು ಕೊಂದು ಮತ್ತಿಬ್ಬರ ಮೇಲೆ ಹಲ್ಲೆ ಮಾಡಿರುವ ಘಟನೆ ಪಾಲ್ಘರ್ ಜಿಲ್ಲಾಯ ವಿರಾರ್ನಲ್ಲಿ ರಾತ್ರಿ ನಡೆದಿದೆ. ಬ್ಯಾಂಕ್ನ ಸಹಾಯಕ ಮ್ಯಾನೇಜರ್ ಯೋಗಿತಾ ವಾರ್ತಾಕ್ ಹತ್ಯೆಯಾಗಿದ್ದರೆ.

ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಾತ್ರಿ 8.30ರ ಸಂದರ್ಭದಲ್ಲಿ ಬ್ಯಾಂಕ್ಗೆ ಬಂದ ಇಬ್ಬರು ವ್ಯಕ್ತಿಗಳು ಮೊದಲು
ಮಾಹಿತಿ ಪಡೆಯುವ ನಿಟ್ಟಿನಲ್ಲಿ ವಿಚಾರಿಸಿದ್ದಾರೆ. ಈ ವೇಳೆ ಏಕಾಏಕಿ ಗಲಾಟೆ ಆರಂಭಿಸಿದ್ದಾರೆ. ಬ್ಯಾಂಕ್ನಲ್ಲಿ ಕಡಿಮೆ ಜನ ಇದ್ದ ಕಾರಣ ಉದ್ಯೋಗಿಗಳನ್ನು ಬೆದರಿಸಿ ಹಣದ ಖಜಾನೆ ತೋರಿಸುವಂತೆ ಕ್ಯಾಷಿಯರ್ ಬಳಿ ಹೋಗಿ ಮಾರಕಾಸ್ತ್ರಗಳನ್ನು ಹಿಡಿದು ಹಂತಕರು ಬೆದರಿಸಿದ್ದಾರೆ.
ತಕ್ಷಣ ಎಚ್ಚೆತ್ತ ಸಿಬ್ಬಂದಿ ಅಲಾರಾಂ ಒತ್ತಿದ್ದಾರೆ. ಇದರಿಂದ ಗಾಬರಿಗೊಂಡ ದರೋಡೆಕೋರರು
ಅಲ್ಲಿಂದ ಓಡಲು ಪ್ರಯತ್ನಿಸಿದಾಗ ಯೋಗಿತಾ ವಾರ್ತಾಕ್ ಹಿಂಬಾಲಿಸಿ ಹಿಡಿಯಲು ಹೋಗಿದ್ದಾರೆ. ಈ ವೇಳೆ ಅವರ ಮೇಲೆ ಚಾಕುವಿನಿಂದ ಇರಿಯಲಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.
ಮತ್ತಿಬ್ಬರು ಆಕೆಯ ರಕ್ಷಣೆಗೆ ಹೋದಾಗ ಅವರಿಗೂ ಕೂಡ ಚಾಕುವಿನಿಂದ ಇರಿಯಲಾಗಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಿಬ್ಬಂದಿಯನ್ನು ರಕ್ಷಿಸಲು ತಕ್ಷಣ ಆ್ಯಂಬುಲೆನ್ಸ್
ಹಾಗೂ ಪೆÇಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆಗಾಗಲೇ ಯೋಗಿತಾ ವಾರ್ತಾಕ್ ಮೃತಪಟ್ಟಿದ್ದು, ಮತ್ತಿಬ್ಬರಿಗೆ ಗಂಭೀರ ಗಾಯಗಳಾಗಿವೆ.
Leave a Comment