(31-07-2021) ಭಟ್ಕಳ ತಾಲೂಕಿನ ಸೋನಾರಕೇರಿಯ ವೃದ್ಧ ಮಹಿಳೆಯೊಬ್ಬರು ಕೋವಿಡ್ ಸೋಂಕಿನಿಂದ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಶವಸಂಸ್ಕಾರಕ್ಕೆ ಅವರ ಕುಟುಂಬ ವರ್ಗದವರಿಗೆ ಸೂಕ್ತ ಸಹಕಾರ ಸಿಗದಿದ್ದರಿಂದ, ವಿಷಯ ತಿಳಿದ ನಮ್ಮ ಧರ್ಮಸ್ಥಳ ವಿಪತ್ತು ನಿರ್ವಹಣಾ ದಳದ ಸದಸ್ಯರು ಹಾಗೂ ಆಸರಕೇರಿಯ ಸ್ಥಳೀಯರು ಕೂಡಲೇ ಸ್ಪಂದಿಸಿ, ಭಟ್ಕಳ ಸರ್ಕಾರಿ ಆಸ್ಪತ್ರೆಯಿಂದ ಶವವನ್ನು ಭಟ್ಕಳ ಬಂದರ್ ರೋಡ್ ನಲ್ಲಿರುವ ವಿಶ್ವ ಹಿಂದೂ ಪರಿಷತ್ ರುದ್ರಭೂಮಿಗೆ ತಂದು ವ್ಯವಸ್ಥಿತವಾಗಿ ಶವಸಂಸ್ಕಾರ ನಡೆಸುವುದರ ಮೂಲಕ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿರುತ್ತಾರೆ.
ಈ ಸಮಯದಲ್ಲಿ ವಿಪತ್ತು ನಿರ್ವಹಣಾ ದಳದ ಸದಸ್ಯರಾದ ಶ್ರೀಕಾಂತ ನಾಯ್ಕ (ಮಾಜಿ ಸೈನಿಕರು), ಪಾಂಡುರಂಗ ನಾಯ್ಕ, ಈಶ್ವರ ಎನ್ ನಾಯ್ಕ, ವಿವೇಕಾನಂದ ನಾಯ್ಕ, ಈಶ್ವರ ಕೆ ನಾಯ್ಕ, ಶ್ರೀನಿವಾಸ ನಾಯ್ಕ ಹಾಗೂ ಆಸರಕೇರಿಯ ಸ್ಥಳಿಯರಾದ ರಾಜೇಶ ನಾಯ್ಕ, ಮಂಜುನಾಥ ನಾಯ್ಕ, ಮನಮೋಹನ ನಾಯ್ಕ, ಕೃಷ್ಣ ನಾಯ್ಕ (ನಾಮಧಾರಿ ಸಮಾಜದ ಅಧ್ಯಕ್ಷರು), ಭಾಸ್ಕರ ನಾಯ್ಕ, ವೆಂಕಟೇಶ ನಾಯ್ಕ, ಕೃಷ್ಣ ನಾಯ್ಕ, ಕೇಶವ ನಾಯ್ಕ, ಜಗದೀಶ ನಾಯ್ಕ ಹಾಗೂ ವೃದ್ಧ ಮಹಿಳೆಯ ಪುತ್ರರಾದ ದಿನೇಶ ರಾಯ್ಕರ ಹಾಗೂ ರಾಜೇಶ ರಾಯ್ಕರ ಶವ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.

Leave a Comment