ಭಟ್ಕಳ: ಇಲ್ಲಿನ ಜೈ ಮಾರುತಿ ರಕ್ತದಾನಿ ಬಳಗದ ಸದಸ್ಯರು ಕ್ಯಾನ್ಸರ್ ಪೀಡಿತ ಮಹಿಳೆಯರೊರ್ವರಿಗೆ 15 ಯೂನಿಟ್ ರಕ್ತದಾನ ಮಾಡುವ ಮೂಲಕ ಮಹಿಳೆಯ ಜೀವ ಉಳಿಸಿದ ಪ್ರಕರಣ ಮಣಿಪಾಲ ಕೆಎಂಸಿಯಲ್ಲಿ ಮಂಗಳವಾರ ನಡೆದಿದೆ.








ಕುಮಟಾದ ಹೆಗಡೆ ಗ್ರಾಮದ 45 ವರ್ಷ ವಯಸ್ಸಿನ ಮಹಿಳೆಯೊರ್ವರು ಬ್ಲಡ್ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದರು. ಇವರಿಗೆ ಶಸ್ತ್ರ ಚಿಕಿತ್ಸೆಗೆ 15 ಯೂನಿಟ್ ರಕ್ತದ ಅವಶ್ಯಕತೆ ಇತ್ತು. ಮಹಿಳೆಯ ಪುತ್ರ ರಕ್ತದಾನಿ ಸಂಘಟನೆಗೆ ವಿನಂತಿಸಿದ್ದು ರಕ್ತ ನೀಡಿ ಜೀವ ಉಳಿಸಿ ತಂಡದ ಭಟ್ಕಳದ ಜೈ ಮಾರುತಿ ರಕ್ತದಾನಿ ಬಳಗ ರಕ್ತದಾನ ಮಾಡಿ ಮುಂದಿನ ಚಿಕಿತ್ಸೆಗೆ ನೇರವಾಗಿದ್ದಾರೆ.
ಸಾಮಾಜಿಕ ಜಾಲತಾಣದ ಸದ್ಬಳಕೆಯಿಂದ ಮಹಿಳೆಯೊರ್ವರಿಗೆ ಸಕಾಲದಲ್ಲಿ ರಕ್ತ ಲಭಿಸಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
ಭಟ್ಕಳ ಹಾಗೂ ಸುದ್ದಿಗಾಗಿ ಈ ಗ್ರುಪ್ ಸೇರಿ ;ನಿಮ್ಮ ಸ್ನೇಹಿತರಿಗೂ ಫಾರ್ವರ್ಡ್ ಮಾಡಿ ಗುಂಪಿಗೆ ಸೇರಿಸಿ.
ಗ್ರುಪ್ ಸೇರಲು ಈ ಲಿಂಕ್ ಒತ್ತಿhttps://chat.whatsapp.com/GtLqeUMgaXDGRtGRyC9KnP
Leave a Comment