
ಯಲ್ಲಾಪುರ :ಕ್ಷೇತ್ರದ ಜನತೆಯ ಆಶೀರ್ವಾದದಿಂದ ಇಂದು ಎರಡನೇ ಬಾರಿಗೆ ಕರ್ನಾಟಕ ರಾಜ್ಯ ಬಿಜೆಪಿ ಸರಕಾರದ ಸಂಪುಟ ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸಿದ್ದೇನೆ.ಎಂದು ನೂತನ ಸಚಿವ ಶಿವರಾಮ ಹೆಬ್ಬಾರ್ ಹೇಳಿದ್ದಾರೆ.
ನನಗೆ ಮತ್ತೊಮ್ಮೆ ಸಚಿವನಾಗಿ ಸೇವೆ ಮಾಡುವುದಕ್ಕೆ ಅವಕಾಶ ನೀಡಿದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರಿಗೆ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡ್ಡಿಯೂರಪ್ಪ ನವರಿಗೆ ರಾಷ್ಟ್ರಾಧ್ಯಕ್ಷರಾದ ಜೆ.ಪಿ ನಡ್ಡಾಜಿ ಯವರಿಗೆ, ರಾಜ್ಯಾಧ್ಯಕ್ಷರಾದ ನಳಿನ ಕುಮಾರ ಕಟೀಲ್ ಅವರಿಗೆ ಹಾಗೂ ಕೇಂದ್ರದ ಹಾಗೂ ರಾಜ್ಯದ ಎಲ್ಲಾ ನಾಯಕರಿಗೆ, ಪಕ್ಷದ ಪದಾಧಿಕಾರಿಗಳಿಗೆ ನನ್ನನ್ನು ಪ್ರೀತಿಸಿ ಬೆಳೆಸುತ್ತಿರುವ ಕ್ಷೇತ್ರದ ಸಮಸ್ತ ಜನತೆಗೆ ಹಾಗೂ ಕಾರ್ಯಕರ್ತರಿಗೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದ್ದಾರೆ.

ತಮ್ಮೆಲ್ಲರ ನಿರೀಕ್ಷೆಗಳಿಗೆ ತಕ್ಕಂತೆ ಕ್ಷೇತ್ರದ ಹಾಗೂ ರಾಜ್ಯದ ಜನತೆಗೆ ಚುತ್ಯಿ ಬರದಂತೆ ರಾಜ್ಯದ ಏಳಿಗೆಗಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೆನೆ.ಎಂದಿದ್ದಾರೆ
Leave a Comment