ಭಟ್ಟಳ : ಮುಡೇಶ್ವರ ದೇವಸ್ಥಾನದ ಪಾರ್ಕಿಂಗ್ ಸ್ಥಳದಲ್ಲಿ ಪೋಟೋ ತೆಗೆಯಲು ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ಮುರ್ಡೇಶ್ವರ ಬೀಚ್ ಪೋಟೋಗ್ರಾರ್ಸ ಮುರ್ಡೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ಮತ್ತು ಸಹಾಯಕ ಆಯಕ್ತೆ ಮಮತಾದೇವಿ ಅವರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ಮುರ್ಡೇಶ್ವರ ದೇವಸ್ಥಾನದÁ್ವವರಣ ಮತ್ತು ಬೀಚ್ನಲ್ಲಿ ಪೊಟೋಗ್ರಾರ್ಸ್ ಆಗಿ 60ಕ್ಕೂ ಅಧಿಕ ಜನರು ಕೆಲಸ ಮಾಡುತ್ತಿದ್ದು, ಈ ವೃತಿಯನೇ ನಂಬಿ ಜಿವನ ಸಾಗಿಸುತ್ತಿದ್ದೇವೆ. ಆದರೆ ಲಾಕಟೌನ್ ಆದ ದಿನದಿಂದ ಕೆಲಸ ಇಲ್ಲವಾಗಿದೆ. ಮುಡೇಶ್ವರ ದೇವಸ್ಥಾನದಿಂದ ಪ್ರತಿವರ್ಷ ಪೋಟೋ ತೆಗೆಯಲು ಟೆಂಡರ್ ಕರೆಯಲಾಗುತ್ತಿತ್ತು. ಆದರೆ ಆಡಳಿತ ಮಂಡಳಿಯಲ್ಲಿ ಗೊಂದಲ ಉಂಟಾಗಿ ದೇವಸ್ಥಾನದ ಆಡಳಿತ ಜವಬ್ದಾರಿಯನ್ನು ಸಹಾಯಕ ಆಯಕ್ತರಿಗೆ ಹಸ್ತಾಂತರಿಸಲಾಗಿದೆ. ಕಳೆದ ನಾಲ್ಕು ತಿಂಗಳಿನಿAದ ದುಡಿದು ಇಲ್ಲದೇ ಜೀವನ ನಿರ್ವಹಣೆ ತೀರಾ ಕಷ್ಟವಾಗಿದೆ.

ದುಬಾರಿ ವೆಚ್ಚದ ಕ್ಯಾಮರಾ ಕಂಪ್ಯೂಟರ್, ಪಿಂಟರ್ ಮತ್ತತರ ಸಾಮಗ್ರಿಗಳನ್ನು ಸಾಲ ಮಾಡಿ ಖರಿದಿಸಿದ್ದು. ದುಡಿಮೆ ಇಲ್ಲದೇ ಇರುವುದರಿಂದ ಸಾಲ ಮರುಪಾವತಿಯೂ ಕಷ್ಟವಾಗಿದೆ. ದೇವಸ್ಥಾನದಿಂದ ಟೆಂಡರ್ ಕರೆಯುವವರೆಗೆ ತಾತ್ಕಾಲಿಕ ದೇವಸ್ಥಾನದ ಪಾರ್ಕಿಂಗ್ ಸ್ಥಳಗಳಲ್ಲಿ ಪ್ರವಾಸಿಗರ ಮತ್ತಿತರ ಪೋಟೋ ತೆಗೆದು ದುಡಿದು ದುಡಿಮೆ ಮಾಡಲು ತಾವು ಅವಕಾಶ ಮಾಡಿಕೊಡಬೇಕು ಕೋರಿದ್ದಾರೆ.
ಸಹಾಯಕ ಆಯಕ್ತರ ಮನವಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಗಣೇಶ ಶೆಟ್ಟಿ, ಸುರೇಶ ದೇವಡಿಗ, ಸುಬ್ರಾಯ ಮಾಬ್ಲೇಶ್ವರ ನಾಯ್ಕ, ಅಂತೋನಿ ಟೆಲ್ಲೀನ್, ರಾಮಾ ನಾಯ್ಕ, ಆನಂದ ದೇವಾಡಿಗ ಮುರಗೇಶ ನಾಯರ್, ಅಣ್ಣಪ್ಪ ನಾಯ್ಕ, ಲಕ್ಷö್ಮಣ ದೇವಾಡಿಗ, ಈಶ್ವರ ಶಯ್ಕ ಮುಂತಾದವರಿದ್ದರು.
Leave a Comment