ಹೊನ್ನಾವರ: ಪಟ್ಟಣದ ಶರಾವತಿ ವೃತ್ತದ ಸಮೀಪ ಸಾಯಿ ಕಾಂಪ್ಲೆಕ್ಸ ಬಳಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಸ್ಥಳಿಯರು ಬಹು ಸಮಯದಿಂದ ವ್ಯಕ್ತಿ ಮಲಗಿರುದನ್ನು ಗಮನಿಸಿ ಪಟ್ಟಣ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ವಿಜಯ ಕಾಮತ ಗಮನಕ್ಕೆ ತಂದಿದ್ದಾರೆ.
ಕೂಡಲೆ ಪರಿಶೀಲನೆ ನಡೆಸಿ ೧೦೮ ಕರೆ ಮಾಡಿದಾಗ ಸ್ಥಳಕ್ಕಾಗಮಿಸಿದ ಸಿಬ್ಬಂದಿಗಳು ಮೃತ ಪಟ್ಟಿರುದು ದೃಡಪಡಿಸಿದ್ದಾರೆ. ಪೋಲಿಸ್ ಇಲಾಖೆಗೆ ಬಳಿಕ ಮಾಹಿತಿ ನೀಡಲಾಗಿದೆ. ಶವವನ್ನು ತಾಲೂಕ ಆಸ್ಪತ್ರೆಯ ಶವಗಾರದಲ್ಲಿಡಲಾಗಿದೆ. ಈ ಸಂಭದ ಹೊನ್ನಾವರ ಪೋಲಿಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment