ಹೊನ್ನಾವರ : ಕರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಕೆಲವು ಪ್ರವಾಸಿ ತಾಣಗಳಿಗೆ ಸ್ಥಳೀಯ ಆಡಳಿತ ಕಟ್ಟು ನಿಟ್ಟಿನ ನಿಯಮ ಜಾರಿಗೊಳಿಸಿದೆ. ತಾಲೂಕಿನ ಕೆಳಗಿನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರಸಿದ್ದ ಪ್ರವಾಸಿ ತಣವಾದ ಅಪ್ಸರಕೊಂಡದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತ ಕರೋನಾ ಪ್ರಕರಣಗಳು ಉಲ್ಬಣವಾಗುತ್ತಿದ್ದು ಮೂರನೇ ಅಲೆಯ ಮುನು ಸೂಚನೆ ನೀಡುತ್ತಿದ್ದೆ.
ಕರೋನಾ ತಡೆಗಟ್ಟಲು ಮುಂಚಾಗೃತಾ ಕ್ರಮವಾಗಿ ಸ್ಥಳೀಯಾಡಳಿತ ಕೆಲವು ನಿಯಮಗಳನ್ನು ಜಾರಿಗೊಳಿಸಿದೆ. ಪ್ರವಾಸಿ ತಾಣಕ್ಕೆ ಬರುವ ಪ್ರವಾಸಿಗರು ಖಡ್ಡಾಯವಾಗಿ ಕರೋನಾ ನೆಗೆಟಿವ್ ವರದಿ ಹೊಂದಿರಬೇಕು, ಮಾಸ್ಕ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಬೇರೆ ಜಿಲ್ಲೆ ಹಾಗೂ ರಾಜ್ಯದಿಂದ ಬರುವ ಪ್ರವಾಸಿಗರು ಖಡ್ಡಾಯವಾಗಿ ಜಿಲ್ಲಾಡಳಿತ ಹಾಗೂ ಸ್ಥಳೀಯಾಡಳಿತದ ನಿಯಮಗಳನ್ನು ಪಾಲಿಸಬೇಕು ಹಾಗೂ ಕಡಲ ತೀರ. ಜಲಪಾತ ಮತ್ತು ಉದ್ಯಾನವವದಲ್ಲಿ ಸ್ಥಳೀಯ ಆಡಳಿತ ಸಮಿತಿಯವರು ಕೇಳುವ ಮಾಹಿತಿಯನ್ನು ನೀಡಬೇಕು.
ಈ ಎಲ್ಲಾ ನಿಯಮಗಳು ಉಲ್ಲಂಘನೆಯಾಗಿದಲ್ಲಿ ಕೋವಿಡ್ ನಿಯಮಾವಳಿ ಪ್ರಕಾರ ದಂಡ ವಿಧಿಸಲಾಗುತ್ತದೆ ಎಂದು ಆದೇಶ ಹೊರಡಿಸಲಾಗಿದೆ. ಪ್ರವಾಸಿಗರು ಪ್ರವಾಸಿ ತಾಣಗಳ ಭೇಟಿ ನೀಡುವ ಮುನ್ನ ಅಲ್ಲಿಯ ಸ್ಥಳೀಯ ಆಡಳಿತ ಸಂಸ್ಥೆಗಳ ನಿಯಮವನ್ನು ಪಾಲಿಸುವುದು ಖಡ್ಡಾಯವಾಗಿದೆ.
Leave a Comment