ಯಲ್ಲಾಪುರ: ಕರ್ನಾಟಕ ರಾಷ್ಟç ಸಮಿತಿ ಪಕ್ಷ ಕರ್ನಾಟಕ ಅಸ್ಮಿತೆ ಮತ್ತು ಹಿತಾಸಕ್ತಿಗಾಗಿ ರಾಜಕೀಯ ಹೋರಾಟ ಮೂಲಕ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಿ ,ಸರಕಾರಿ ಕಚೇರಿಗಳಲ್ಲಿ ಲಂಚ ಮುಕ್ತ ,ಜನಪರ ಆಡಳಿತವನ್ನು ತರುವ ಉದ್ದೇಶ ಹೊಂದಿದೆ ಎಂದು ರಾಜ್ಯಾಧ್ಯಕ್ಷ ರವಿ ಕೃಷ್ಣಾ ರೆಡ್ಡಿ ಹೇಳಿದರು.

ಅ೮ ರಿಂದ ಶಿಕಾರಿಪೂರದ ಈಸೂರಿನಿಂದ ಆರಂಭವಾದ ಭ್ರಷ್ಟರೇ ಪವಿತ್ರವಾದ ರಾಜಕಾರಣವನ್ನು ಬಿಟ್ಟು ತೊಲಗಿ ಜಾಗೃತಿ ಅಭಿಯಾನ ಶಿರಸಿ ಮೂಲಕ . ಸೋಮವಾರ ಸಂಜೆ ಯಲ್ಲಾಪೂರದ ತಹಶೀಲ್ದಾರ ಕಚೇರಿಗೆ ಬಂದ ಸಂದರ್ಭದಲ್ಲಿ ಮಾತನಾಡಿದರು. ಪಕ್ಷದ ಉಪಾಧ್ಯಕ್ಷ ಲಿಂಗೇಶ ಎಚ್ ಎಸ್ ಮಾತನಾಡಿ ಸರ್ಕಾರಿ ಕಚೇರಿಯಲ್ಲಿ ಅಲ್ಲಿಯ ವ್ಯವಸ್ಥೆಗಳಲ್ಲಿನ ಲೋಪದೋಷಗಳನ್ನು ಪಟ್ಟಿ ಮಾಡಿ ಅವುಗಳನ್ನು ಸರಿಪಡಿಸಿ ಸಾರ್ವಜನಿಕರಿಗೆ ಉತ್ತಮ ಸೇವೆ ಸಿಗುಂತಹ ಪರಿಸ್ಥಿತಿ ನಿರ್ಮಾಣ ಮಾಡಲು ದಿ ೮ ರಿಂದ ೩೧ ಜಿಲ್ಲೆಗಳಲ್ಲಿ,೩೨ ದಿನಗಳ ೩೫೦೦ಕಿಮೀ ಗಳಷ್ಟು ಕ್ರಮಿಸುವ ಮೂಲಕ ಅಭಿಯಾನ ಕೈಗೊಂಡಿದ್ದೇವೆ ಎಂದರು. ಕಚೇರಿಯಲ್ಲಿ ಕಂಡುಬAದ ಕೆಲವು ಲೋಪ ದೋಷಗಳ ಪಟ್ಟಿ ಮಾಡಿ ತಹಶೀಲ್ದಾರ ಶ್ರೀಕೃಷ್ಣ ಕಾಮಕರ ಅವರಿಗೆ ನೀಡಿ ಶೀಘ್ರದಲ್ಲಿ ಸರಿಪಡಿಸುವಂತೆ ವಿನಂತಿಸಿದರು.

ಸುಮಾರು ೩೦ ಜನರು ಬೈಕ್ ನಲ್ಲಿ ಅಭಿಯಾನದಲ್ಲಿ ಇದ್ದರು. ಅವರೆಲ್ಲರೂ ತಹಶೀಲ್ದಾರ್ ಕಚೇರಿ ಯಲ್ಲಿ ಎಲ್ಲ ವಿಭಾಗ ಗಳಲ್ಲಿ ನುಗ್ಗಿದ್ದರಿಂದ , ಸಿಬ್ಬಂದಿಗಳು ,ಸಾರ್ವಜನಿಕರಿಗೆ ಗಲಿಬಿಲಿಯಾಗಿ ಭಯಭೀತಿ ಉಂಟಾಯಿತು.
ಕೊರೋನ ನಿಯಮ ಪಾಲಿಸದೇ ಹೊರಜಿಲ್ಲೆ ಯಿಂದ ಇಷ್ಟೊಂದು ಜನರು ಏಕಾಯಕಿ ಬಂದು ರೀತಿ ಮಾಹಿತಿ ಕೇಳುವ ನೆವದಲ್ಲಿ ಅಧಿಕಾರಿ, ಸಿಬ್ಬಂದಿಗಳಿಗೆ ಕಿರಿ ಕಿರಿ ಮಾಡಿದ್ದು ಆಕ್ಷೇಪ ವ್ಯಕ್ತವಾಗಿದೆ.ಏನಾದ್ರು ಮಾತಿನ ಚಕ್ ಮಕಿ ಉಂಟಾಗಿ ಹೆಚ್ಚು ಕಡಿಮೆ ಆದರೆ ತಹಸೀಲ್ದಾರ್ ಕಚೇರಿಯಲ್ಲಿ ಭದ್ರತೆ ಇಲ್ಲದಂತಾಗಿದೆ ಎಂದು ಸಾರ್ವಜನಿಕರು ಆಡಿಕೊಳ್ಳು ವಂತಾಗಿದೆ.
Leave a Comment