ಹುಬ್ಬಳ್ಳಿ : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 9ನೇ ಕಂತಿನ ಹಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಿದ್ದಾರೆ. 9.50 ಕೋಟಿಗೂ ಹೆಚ್ಚು ಕೃಷಿಕ ಕುಟುಂಬಗಳಿಗೆ 19,000 ಕೋಟಿ ರೂ.ಗೂ ಹೆಚ್ಚಿನ ಹಣವನ್ನು ವರ್ಗಾಯಿಸಿದ್ದಾರೆ. ಅದರಲ್ಲಿ ಧಾರವಾಡ ಜಿಲ್ಲೆಯ 1.16 ಲಕ್ಷ ರೈತ ಕುಟುಂಬಗಳಿಗೆ 23.22 ಕೋಟಿ ರೂ. ಸಹಾಯಧನ ಜಮೆಯಾಗಿದೆ.

ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ. ಸಾಗುವಳಿ ಭೊಮಿ ಹೊಂದಿರುವ ಅರ್ಹ ರೈತ ಕುಟುಂಬಗಳಿಗೆ ಕೇಂದ್ರ ಸರ್ಕಾರ ವಾರ್ಷಿಕ 6000 ರೂ. ಅರ್ಥಿಕ ನೆರವು ನೀಡುತ್ತಿದೆ. ಈ ಯೋಜನೆಯ ಅನುದಾನವನ್ನು 2,000 ರೂ.ನಂತೆ ಮೂರು ಕಂತುಗಳಲ್ಲಿ ನಾಲ್ಕು ತಿಂಗಳಿಗೊಮ್ಮೆ ನೀಡಲಾಗುತ್ತದೆ. ಧಾರವಾಡ ಲೋಕಸಭಾ ಕ್ಷೇತ್ರದ 1.58 ಲಕ್ಷ ರೈತ ಕುಟುಂಬಗಳು ಮಾರ್ಚ್ 2019 ರಿಂದ ಮಾರ್ಚ್ 2021ರವರೆಗೆ ಒಟ್ಟು 237.3 ಕೋಟಿ ರೂ. ಸಹಾಯ ಪಡೆದಿದ್ದಾರೆ. 2021-22ನೇ ಸಾಲಿನ 1.16 ಲಕ್ಷ ರೈತರಿಗೆ ಪ್ರಸಕ್ತ ವರ್ಷದ ಮೊದಲ ಕಂತಿಗೆ 23.23 ಕೋಟಿ ರೂ. ಸಹಾಯಧನವನ್ನು ಪ್ರಧಾನಿ ಮೋದಿ ಅವರು ನೇರವಾಗಿ ರೈತ ಕುಟುಂಬಗಳ ಖಾತೆಗಳಿಗೆ ಬಿಡುಗಡೆ ಮಾಡಿದ್ದಾರೆಂದು ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment