
ಯಲ್ಲಾಪುರ :ತಾಲೂಕಿನ ಬಾಳೆಜಡ್ಡಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದವನಿಗೆ 11 ವರ್ಷ ಜೈಲು ಶಿಕ್ಷೆ ಹಾಗೂ 25ಸಾವಿರ ದಂಡ ವಿಧಿಸಿ ಕಾರವಾರ ಹೆಚ್ಚುವರಿ ಜಿಲ್ಲಾ ಹಾಗೂಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ತಾಲೂಕಿನ ಬಾಳೆಜಡ್ಡಿ ಯ ರಾಘವೇಂದ್ರ ಮಂಜ ಚಲವಾದಿ ಎಂಬಾತ 2018 ರಲ್ಲಿ ಮದುವೆ ಮನೆ ಗೆ ಬಂದಿದ್ದ ಬಾಲಕಿಗೆ ಆಮಿಷ ಒಡ್ಡಿ, ನಂಬಿಸಿ ನಿರಂತರ 8ದಿನಗಳ ಕಾಲ ಅತ್ಯಾಚಾರ ನಡಿಸಿದ್ದ. ಈ ಸಂಬಂಧ ಬಾಲಕಿಯ ಕುಟುಂಬದವರು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಅಪರಾಧಿ ಯನ್ನು ಅಂದಿನ ಸಿ ಪಿ ಐ ಡಾ.ಮಂಜುನಾಥ ವಶಕ್ಕೆ ಪಡೆದು ತನಿಖೆ ನಡಿಸಿದ್ದರು. ಪ್ರಕರಣ ದ ವಿಚಾರಣೆ ಬಳಿಕ ಹೆಚ್ಚುವರಿ ಜಿಲ್ಲಾ ಹಾಗೂಸತ್ರ ನ್ಯಾಯಾಲಯದ ನ್ಯಾಯಾಧೀಶ ಶಿವಾಜಿ ನಲವಡೆ ಅವರು ತೀರ್ಪು ನೀಡಿದ್ದಾರೆ. ಸರ್ಕಾರ ದ ಪರ ವಿಶೇಷ ಅಭಿಯೋಜಕ ಸುಭಾಷ ಕೈರನ್ ವಾದ ಮಂಡಿಸಿದ್ದರು.
ಯಲ್ಲಾಪುರ ಹಾಗೂ ಸುದ್ದಿಗಾಗಿ ಈ ಗ್ರುಪ್ ಸೇರಿ
ಗ್ರುಪ್ ಸೇರಲು ಈ ಲಿಂಕ್ ಒತ್ತಿ https://chat.whatsapp.com/D0Ry5Povwke1s77ibSLq4A
Leave a Comment