ಹೊನ್ನಾವರ: ಪಟ್ಟಣದ ಮಿನಿವಿಧಾನಸೌದದಲ್ಲಿ ತಹಶೀಲ್ದಾರ ವಿವೇಕ ಶೇಣ್ವಿ ಅಧ್ಯಕ್ಷತೆ ಸ್ವಾತಂತ್ರ್ಯೊತ್ಸವದ ಅಂಗವಾಗಿ ಪೂರ್ವಭಾವಿ ಸಭೆ ಜರುಗಿತು. ತಾಲೂಕ ಆಡಳಿತದ ವತಿಯಿಂದ ನಡೆಯುವ ಈ ಕಾರ್ಯಕ್ರಮ ಕೊರೋನಾ ಹಿನ್ನಲೆಯಲ್ಲಿ ಈ ಬಾರಿ ಯಾವುದೇ ವಿದ್ಯಾರ್ಥಿಗಳಿಗೆ ಭಾಗವಹಿಸಲು ಅನುಮತಿ ಇಲ.
ಅಲ್ಲದೆ ಪ್ರಾಥಮಿಕ ಹಾಗೂ ಪ್ರೌಡ ಶಾಲಾ ವಿದ್ಯಾರ್ಥಿಗಳು ಕೊರೋನಾ ಸಂಭದಿಸಿದಂತೆ ಜಾಗೃತಿ ಮೂಡಿಸುವ ದೃಷ್ಟಿಯಿಂದ ಭಾಷಣ ಹಾಗೂ ಕೊರೋನಾ ಜಾಗೃತಿಗೀತೆ ಆನಲೈನ್ ಸ್ವರ್ಧೆ ಆಯೋಜಿಸಲಾಗಿದೆ. ವಿವಿಧ ಇಲಾಖೆಗಳಿಗೆ ಹಲವು ಜವಬ್ದಾರಿಯನ್ನು ತಹಶೀಲ್ದಾರರು ನೀಡಿದರು.

ಕೊರೋನಾ ಸಂಭದ ಮುಂಚೂಣಿ ವಾರಿಯರ್ಸಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲು ನಿರ್ಧರಿಸಲಾಯಿತು. ಕಡ್ಡಾಯವಾಗಿ ಮಾಸ್ಕ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಯಕ್ರಮ ನಡೆಸೋಣ ಎಂದರು. ಸಿಪಿಐ ಶ್ರೀಧರ ಎಸ್.ಆರ್, ತಾಲೂಕ ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
Leave a Comment