ಹೊನ್ನಾವರ: ವಿವಿಧ ಬೇಡಿಕೆಗಳಿಗೆ ಈಡೇರಿಕೆ ಆಗ್ರಹಿಸಿ ತಾಲೂಕಿನ ಆಶಾ ಕಾರ್ಯಕರ್ತೆಯರ ಸಂಘದಿAದ ತಹಶೀಲ್ದಾರ್ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕರೆಯ ಮೇರೆಗೆ ಹೊನ್ನಾವರ ತಾಲೂಕು ಆಶಾ ಕಾರ್ಯಕರ್ತೆಯರು ಕೋರೋನಾ ಮಾರ್ಗಸೂಚಿಯನ್ವಯ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ರಾಷ್ಟ್ರೀಯ ಕಾರ್ಮಿಕ ಸಮ್ಮೇಳನದ ಶಿಫಾರಸಿನಂತೆ ಸ್ಕಿಮ್ ಕಾರ್ಯಕರ್ತೆಯರನ್ನು ಕಾರ್ಮಿಕರು ಎಂದು ಪರಿಗಣಿಸಬೇಕು.
ಅಲ್ಲಿಯವರೆಗೆ ಕನಿಷ್ಠ ೨೧೦೦೦ ರೂಪಾಯಿ ಮಾಸಿಕ ವೇತನ ಮತ್ತು ಹತ್ತು ಸಾವಿರ ರೂಪಾಯಿ ಪಿಂಚಣಿ ನೀಡಬೇಕು. ಕಾರ್ಮಿಕ ವಿರೋಧಿ, ರೈತ ವಿರೋಧಿ, ಕಾನೂನು ತಿದ್ದುಪಡಿ ಹಿಂಪಡೆದು ವಿದ್ಯುತ್ ಬಿಲ್ ೨೦೨೦ ತಿದ್ದುಪಡಿ ಮಸೂದೆ ವಾಪಸ್ಸು ಪಡೆಯಬೇಕು.

ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ನಿಲ್ಲಿಸಬೇಕು. ಕೋರೋನಾ ವಾರಿಯರ್ಸ್ ಗಳಿಗೆ ಸುರಕ್ಷಾ ಕಿಟ್ ಸಮರ್ಪಕವಾಗಿ ನೀಡಬೇಕು ಹಾಗೂ ಕೋವಿಡ್ ನಿಂದ ಮರಣ ಹೊಂದಿದವರಿಗೆ ೫೦ ಲಕ್ಷ ರೂಪಾಯಿ ಕೂಡಲೇ ನೀಡಬೇಕು. ಗೌರವಧನ, ಗುತ್ತಿಗೆ ಪದ್ಧತಿ ರದ್ದುಗೊಳಿಸಬೇಕೆಂದು ಆಗ್ರಹಿಸಿ ತಹಶೀಲ್ದಾರ ಹೊನ್ನಾವರರವರ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕ ಅಧ್ಯಕ್ಷೆ ಪ್ರಭಾಮಣಿ ಶೇಟ್, ಭಾರತಿ ನಾಯ್ಕ, ಮಾದೇವಿ ನಾಯ್ಕ, ರೇಣುಕಾ ವೈದ್ಯ, ಜಯಲಕ್ಷಿö್ಮ ಕೊಡಿಯಾ, ದೇವಿ ಗೌಡ, ಜಯಲಕ್ಷಿö್ಮ ಶೇಟ್ಟಿ, ಯಮುನಾ ನಾಯ್ಕ ಮತ್ತಿತರರು ಹಾಜರಿದ್ದರು.
Leave a Comment