


ಯಲ್ಲಾಪುರ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟ ಗೊಂಡಿದ್ದು ಪಟ್ಟಣದ ಸರ್ಕಾರಿ ಪ್ರೌಢಶಾಲೆ ಯ 100 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದರು ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಶೇ.94.4 ಅಂಕಗಳಿಸಿದ ವಿಶ್ವನಾಥ್ ದಾನಪ್ಪ ಲಮಾಣಿ ಪ್ರಥಮಸ್ಥಾನ 86.4 ಅಂಕಗಳೊಂದಿಗೆ ಭಾವನಾ ಶಿರೋಡ್ಕರ್ ದ್ವಿತೀಯ ಸ್ಥಾನ 84.6 ಅಂಕಗಳೊಂದಿಗೆ ಸಪ್ನ ಧರ್ಮಜಿ ತೃತೀಯ ಸ್ಥಾನ ಪಡೆದಿದ್ದಾರೆ. ಕೋವಿಡ್ ಒತ್ತಡದ ಸನ್ನಿವೇಶದಲ್ಲಿಯೂ ತಮ್ಮ ಸಾಧನೆಗೈದ ವಿದ್ಯಾರ್ಥಿಗಳನ್ನು ಶಾಲಾ ಎಸ್ಡಿಎಂಸಿ ಅಧ್ಯಕ್ಷ ಎಸ್.ಕೆ ಹೆಗಡೆ ಹಾಗೂ ಶಾಲಾ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರು ಅಭಿನಂದಿಸಿದ್ದಾರೆ.
Leave a Comment