ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಭಾಗವತಿ ಗ್ರಾಮದಲ್ಲಿ ರಾಣಿ ಚೆನ್ನಮ್ಮ ಫೌಂಡೇಶನ ವತಿಯಿಂದ ಮೂರು ತಿಂಗಳಿನಿಂದ ನಡೆದ ಹೊಲಿಗೆ ತರಬೇತಿ ಕಾರ್ಯಕ್ರಮದ ಮುಕ್ತಾಯ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಇದರಲ್ಲಿ ವಿಧಾನ ಪರಿಷತ್ ಸದಸ್ಯರಾದ ಮಾನ್ಯ ಶ್ರೀ ಎಸ್ ಎಲ್ ಘೋಟ್ನೆಕರ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಲಕ್ಕುಬಾಯಿ ಅಂಬಾಜಿ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಜೆ ಕೆ ದೇಸಾಯಿ ಹಾಗು ಕೆನರಾ ಬ್ಯಾಂಕಿನ ಕೌನ್ಸಿಲರ್ ಆದ ಶ್ರೀ ವಿನಾಯಕ ಚಲವಾದಿ ಹಾಗೂ ಗ್ರಾಮ ಪಂಚಾಯತಿಯ ಇನ್ನಿತರ ಸದಸ್ಯರು ಮತ್ತು ಗ್ರಾಮದ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಹಾಗೂ ರಾಣಿ ಚೆನ್ನಮ್ಮ ಫೌಂಡೇಶನ ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ಸರಸ್ವತಿ ಎಸ್ ಶೆಟ್ಯಾಳಕರ ಇವರು ಅಧ್ಯಕ್ಷಿಯ ಭಾಷಣ ಮಾಡಿ, ಫೌಂಡೇಶನ ಉದ್ದೇಶ ಮತ್ತು ಕಾರ್ಯಗಳ ಬಗ್ಗೆ ತಿಳಿಸಿದರು.

ಹಾಗೂ ವಿಧಾನ ಪರಿಷತ ಎಸ್ ಎಲ್ ಘೋಟ್ನೆಕರ ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಹಿತನುಡಿಗಳನ್ನು ತಿಳಿಸಿದರು ಹಾಗೂ ಈ ಕಾರ್ಯಕ್ರಮದ ಉಸ್ತುವಾರಿಯನ್ನು ಸಂದೀಪ ಕೊಳಾಂಬಿ ಇವರು ವಹಿಸಿದರು ಮತ್ತು ಶ್ರೀ ಶಾಂತಾರಾಮ ಚಿಬ್ಬಲಕರ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು.
ವರದಿ;ಮಂಜುನಾಥ. ಎಚ್ . ಎಮ್ ಹಳಿಯಾಳ
Leave a Comment