ಯಲ್ಲಾಪುರ: ಇಂದು ಜ್ಞಾನ ಕೇವಲ ಜಾಲತಾಣಗಳಿಂದ ಪಡೆಯಬಹುದು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ . ಆದರೆ ಅದನ್ನು ವಾಸ್ತವಿಕ ನೆಲೆಯಲ್ಲಿ ಅಧ್ಯಯನ ಮಾಡಬೇಕಾದರೆ ಪುಸ್ತಕ ,ಪತ್ರಿಕೆಗಳೇ ನಂಬಲರ್ಹ ಮೂಲಗಳಾಗಿವೆ. ಪುಸ್ತಕಗಳು ಪ್ರತಿ ಮಗುವಿಗೂ ಜ್ಞಾನದ ಭಂಡಾರವಾಗಿ ಮಸ್ತಕಕ್ಕೆ ಎರೆಯುತ್ತದೆ.
ಅತ್ಯಮೂಲ್ಯವಾದ ಪುಸ್ತಕಗಳನ್ನು ಗ್ರಂಥಾಲಯದಲ್ಲಿ ಒಪ್ಪ ಓರಣ ವಾಗಿಸಿ ನಿರ್ವಹಣೆ ಮಾಡುತ್ತ ಓದುಗರಿಗೆ ,ಅಧ್ಯಯನ ಶೀಲ ಮನಸ್ಸಿಗೆ ತಲುಪಿಸುವ ಕಾರ್ಯ ಮಾಡುತ್ತಿರುವ ಗ್ರಂಥಪಾಲಕರು ಅಭಿನಂದನಾರ್ಯರು ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷೆ ಶಿವಲೀಲಾ ಹುಣಸಗಿ ಹೇಳಿದರು.

ಅವರು ಗುರುವಾರ ಗ್ರಂಥಾಲಯದ ಪಿತಾಮಹರಾದ ದಿ.ಎಸ್.ಆರ್ ರಂಗನಾಥ ಜನ್ಮದಿನ ನಿಮಿತ್ತ ಪಟ್ಟಣದ ಕೇಂದ್ರ ಗ್ರಂಥಾಲಯದಲ್ಲಿ ಹಮ್ಮಿಕೊಂಡಿದ್ದ ಗ್ರಂಥಪಾಲಕರ ದಿನಾಚಾರಣೆ ಕಾರ್ಯ ಕ್ರಮದಲ್ಲಿ ಮಾತನಾಡಿದರು.ವೇದಿಕೆಯ ಜಿಲ್ಲಾ ಸಂಚಾಲಕಿ ಹಾಗೂ ಪತ್ರಕರ್ತೆ ಪ್ರಭಾವತಿ ಗೋವಿ ಮಾತನಾಡಿ ಇಂದಿನ ದಿನಗಳಲ್ಲಿ ಯಾವದೇ ದಿನಾಚಾರಣೆಯನ್ನು ಸರಕಾರದ ಆದೇಶ,ಅನುದಾನ ವಿದ್ದರೆ ಮಾತ್ರ ಕೆಲವೊಮ್ಮೆ ಕಾಟಾಚಾರಕ್ಕೆಂಬಂತೆಯೂ ಆಚರಿಸುವುದುಂಟು .
ಆದರೆ ಗ್ರಂಥಪಾಲಕರಾದ ಎಫ್ .ಎಚ್ ಬಾಸುರ್ ರವರು ಸ್ವಂತ ವೆಚ್ಚದಲ್ಲಿ ಸ್ವಯಂಪ್ರೇರಿತರಾಗಿ ಗ್ರಂಥಾಲಯ ದಿನವನ್ನು ಆಚರಿಸುತ್ತಿರುವದು ಅವರಿಗೆ ಪುಸ್ತಕದ ಮೇಲಿರುವ ಪ್ರೀತಿ ,ವೃತ್ತಿ ಬದ್ಧತೆ ಯನ್ನು ಎತ್ತಿತೋರಿಸುತ್ತದೆ. ಗ್ರಂಥಾಲಯವನ್ನು ಜ್ಞಾನದೇಗುಲಎಂಬಂತೆ ಪ್ರಶಾಂತತೆ ಹಾಗೂಶಿಸ್ತುಬದ್ಧ, ಸ್ವಚ್ಛತೆಯಿಂದ ಇರುವಂತೆ ನರ್ವಹಿಸುತ್ತಿರುವದು ಶ್ಲಾಘನೀಯ ಕರ್ಯವಾಗಿದೆ. ಪುಸ್ತಕದ ಮಹತ್ವವನ್ನು ಅರಿತ ಮುಖ್ಯ ಮಂತ್ರಿಗಳು ಸಮಾರಂಭಗಳಲ್ಲಿ ಪುಸ್ತಕವನ್ನು ನೀಡುವಂತೆ ಆದೇಶ ನೀಡಿರುವದು ಸ್ವಾಗತರ್ಹ ಬೆಳವಣಿಗೆಯಾಗಿದೆ ಎಂದರು.

.
ಇದೇ ಸಂದರ್ಭದಲ್ಲಿ ಜಿಲ್ಲಾ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆವತಿಯಿಂದ ಮುಖ್ಯ ಗ್ರಂಥಪಾಲಕ ಎಫ್ ಎಚ್ ಬಾಸೂರ ಅವರಿಗೆ ಪುಸ್ತಕ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಗ್ರಂಥಪಾಲಕ ಎಫ್ ಎಚ್ ಬಾಸೂರ ಮಾತನಾಡಿ ಕೇ.ಕ ಸಾ.ವೇದಿಕೆಯಿಂದ ನೀಡಿದ ಗೌರವ ನನಗೆ ಇನ್ನು ಹೆಚ್ಚಿನ ಕೆಲಸ ಮಾಡುವದಕ್ಕೆಪ್ರೇರಣೆಯಾಗಿದೆ ಎಂದರಲ್ಲದೇ ಎಲ್ಲಾ ಕ್ಷೇತ್ರದಲ್ಲಾದಂತೆ ಕೊರೋನಾ ನಮ್ಮನ್ನು ಕಂಗೆಡಿಸಿದೆ. ಆದರೂ ಪುಸ್ತಕಪ್ರಿಯರಿಗೆ ನಿರಾಶೆಯಾಗದಂತೆ ಡಿಜಿಟಲ್ ಲೈಬ್ರರಿ ಆರಂಭಿಸಲಾಗಿದೆ. ತಾಲೂಕಿನಲ್ಲಿ ಈಗಾಗಲೇ ೧೩,೦೦೦ ಜನರು ಸದಸ್ಯರಾಗಿದ್ದಾರೆ.
ಇದರ ಸದಸ್ಯತ್ವ ಉಚಿತವಾಗಿದ್ದು ಪ್ರತಿಯೊಬ್ಬರೂ ಪ್ರಯೋಜನ ಪಡೆದುಕೊಳ್ಳಬೇಕೆಂದರು.
ಪತ್ರರ್ತ ಜಯರಾಜ ಗೋವಿ ನಿರ್ವಹಿಸಿದರು. ಸಹಾಯಕ ಗ್ರಂಥಪಾಲಕಿ ರೂಪಾ ಕಿರಣ ಪಾಠಣಕರ ವಂದಿಸಿದರು. ಸ್ವಾತಿ ನಾಯ್ಕ, ಬಿಂದು ಹಾಗೂ ಗ್ರಂಥಾಲಯದ ಓದುಗರು ಇದ್ದರು.
ಗ್ರಂಥಾಲಯದ ಗ್ರಂಥಪಾಲಕರು ಸಲ್ಲಿಸುವ ಸೇವೆ ಎಲೆಮರೆಯ ಕಾಯಿಯಂತೆ.ಪುಸ್ತಕಗಳನ್ನು ಓದುವ ಹವ್ಯಾಸ ಒಳ್ಳೆಯ ಸ್ನೇಹಿತನ ಸಂಪಾದಿಸಿದಂತೆ..