ಹೊನ್ನಾವರ; ತಾಲೂಕಿನ ಕಾಸರಕೋಡ ಟೊಂಕ ಪ್ರದೇಶದಲ್ಲಿಖಾಸಗೀ ವಾಣಿಜ್ಯ ಬಂದರು ನಿರ್ಮಾಣ ಸ್ಥಳಕ್ಕೆ ರಾಜ್ಯಉಚ್ಚ ನ್ಯಾಯಾಲಯದ ನಿರ್ದೇಶನದಂತೆ ಜಿಲ್ಲಾಧಿಕಾರಿಮುಲ್ಲೆ ಮುಗಿಲನ್ ಶುಕ್ರವಾರ ಭೇಟಿ ನೀಡಿ ಸ್ಥಳಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.ಹೊನ್ನಾವರ ಪೋರ್ಟ್ ಪ್ರೆವೇಟ್ ಲಿಮಿಟೆಡ್ಕಂಪನಿ ಕಾಸರಕೋಡ ಟೊಂಕದಲ್ಲಿನಿರ್ಮಿಸುತ್ತಿರುವ ಖಾಸಗಿ ಬಂದರು ನಿರ್ಮಾಣ ಕಾಮಗಾರಿ ವಿರೋಧಿಸಿ ಹೊನ್ನಾವರ ತಾಲೂಕಾ ಹಸಿಮೀನು ವ್ಯಾಪಾರಸ್ಥರ ಸಂಘ ರಾಜ್ಯ ಉಚ್ಚನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಸಲ್ಲಿಸಿತ್ತು.
ಬಂದರು ನಿರ್ಮಾಣದ ಸ್ಥಳಬದಲಾವಣೆಯಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಣೆಸಲ್ಲಿಸಿದ್ದರು. ಇದರಂತೆ ಸ್ಥಳ ಪರಿಶೀಲಿಸಿ ವರದಿ ಸಲ್ಲಿಸಲುರಾಜ್ಯ ಉಚ್ಚ ನ್ಯಾಯಾಲಯವು ಜಿಲ್ಲಾಧಿಕಾರಿಯವರಿಗೆ ಈ ಹಿಂದೆನಿರ್ದೇಶನ ನೀಡಿತ್ತು.ಜಿಲ್ಲಾಧಿಕಾರಿಯವರು ವಿವಿಧ ಇಲಾಖೆಗಳಸಮಕ್ಷಮ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆನಡೆಸಿದರು.ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ಹೊನ್ನಾವರ ಬಂದರು ವಿಚಾರವಾಗಿಹಸಿ ಮೀನು ವ್ಯಾಪಾರಸ್ಥರ ಸಂಘದವರು ರಾಜ್ಯಉಚ್ಛ ನ್ಯಾಯಾಲಯಕ್ಕೆ ಮನವಿ ಹೋಗಿದ್ದು ಸ್ಥಳಬದಲಾವಣೆ ಆಗಿದೆ ಎಂದು ಅರ್ಜಿಯಲ್ಲಿಆಕ್ಷೇಪಣೆಯನ್ನು ಎತ್ತಿದ್ದಾರೆ.
ಅದರ ಬಗ್ಗೆ ಸ್ಥಳನಿರ್ದಿಷ್ಟವಾಗಿ ಏನಿದೆ ಎಂದು ಸರ್ವೆ ಮಾಡಿಸಿ ವರದಿ ಸಲ್ಲಿಸಲುಹೈಕೋರ್ಟ್ ಆದೇಶ ಕೊಟ್ಟಿದೆ. ಅದರಹಿನ್ನೆಲೆಯಲ್ಲಿ ಸಂಬಂಧಿಸಿದವರಿಗೆ ನೋಟಿಸ್ ನೀಡಿ ಜಿಪಿಎಸ್ಲೊಕೇಶನ್ ಮತ್ತು ಸ್ಥಳ ಸರ್ವೆಕೈಗೊಳ್ಳಲಾಗಿದ್ದು ನ್ಯಾಯಾಲಯಕ್ಕೆ ವರದಿ ಸಲ್ಲಿಸುವ ಕಾರ್ಯ ಮಾಡಲಾಗುವುದು.
ಕೆ.ಪಿ.ಸಿ.ಎಲ್. ನೀರು ಅಂತಿಮ ಎಚ್ಚರಿಕೆ ಬೆನ್ನಲ್ಲೆ ಪ್ರವಾಹ ಎದುರಿಸಲು ಸಿದ್ದತೆ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ ಪ್ರವಾಹದ ಕುರಿತುನದಿಯಂಚಿನ ನಿವಾಸಿಗಳು ತಾಲೂಕಾಡಳಿತ ನೀಡಿದಮುನ್ನೆಚ್ಚರಿಕೆಯನ್ನು ಅನುಸರಿಸುವ ಕಾರ್ಯವಾಗಬೇಕಿದೆ ಕಳೆದ ಕೆಲ ವರ್ಷಗಳಲ್ಲಿಪ್ರವಾಹದ ಸ್ಥಿತಿಗತಿ ಬದಲಾಗಿದೆ. ಯಾವ ಸ್ಥಳಲ್ಲಿಮಳೆ ಬಿದ್ದರೆ ಎಲ್ಲಿ ಪ್ರವಾಹ ಬರುತ್ತದೆ ಎಂದುತಾಲೂಕಾಡಳಿತ ಮಾಹಿತಿಯನ್ನಾಧರಿಸಿ ಮಾಹಿತಿಕೊಡುತ್ತಿದೆ. ಅದನ್ನು ಅನುಸರಿಸಿ ಮುನ್ನೆಚ್ಚಿಕೆವಹಿಸುವ ಮೂಲಕಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು.
ಈ ವೇಳೆ ಭಟ್ಕಳ ಉಪ ವಿಭಾಗಾಧಿಕಾರಿ ಮಮತಾದೇವಿ ಜಿ.ಎಸ್,ತಹಸೀಲ್ದಾರ ನಾಗರಾಜ ನಾಯ್ಕಡ್,ವಿವೇಕ ಶೇಣ್ವಿ,ಸಿಪಿಐ ಶ್ರೀಧರ ಎಸ್.ಆರ್.,ಬಂದರು ಇಲಾಖೆಯ ಕ್ಯಾಪ್ಟನ್ ಸ್ವಾಮಿ, ಭೂಮಾಪನ, ಬಂದರು ಹಾಗೂ ಅರಣ್ಯ, ಕಂದಾಯ, ಪೋಲಿಸ್ ಇಲಾಖೆಯ ಅಧಿಕಾರಿಗಳು, ಮೀನುಗಾರಮುಖಂಡರುಗಳಾದ ಚಂದ್ರಕಾಂತಕೊಚರೇಕರ, ವಿವನ್ ಫರ್ನಾಂಡೀಸ್, ರಾಜು ತಾಂಡೇಲ್, ಜಗ್ಗು ತಾಂಡೇಲ್, ಪರಿಸರವಾದಿ ಪ್ರಕಾಶ ಮೇಸ್ತ ಮತ್ತಿತರರುಉಪಸಸ್ಥಿತರಿದ್ದರು. ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ಏರ್ಪಡಿಸಲಾಗಿತ್ತು.

Leave a Comment