
ಯಲ್ಲಾಪುರ : ಇಳಿ ವಯಸ್ಸಿನಲ್ಲೂ ಸಹ ಇಷ್ಟು ಸಕ್ರೀಯರಾಗಿರುವವರನ್ನು ಕಂಡು ಮನಸ್ಸಿಗೆ ಖುಶಿಯಾಗುತ್ತದೆ. ಮನೆಯಿಂದ ದೂರವಿದ್ದರೂ ಜೊತೆಗಿರುವವರನ್ನೆ ತಮ್ಮವರು ಎಂದುಕೊಳ್ಳುವ ಇವರ ಮನಸ್ಥಿತಿ ನಿಜಾವಾಗಿಯೂ ಗಟ್ಟಿಯೇ ಸರಿ ಎಂದು ಕಮಾಂಡರ್ ಡಾ. ಅಯೋಧ್ಯ ಹೇಳಿದರು.
ಇಂದು ನಗರದ ಬಾಳಗಿಮನೆಯಲ್ಲಿರುವ ಶ್ರೀ ರಾಘವೇಂದ್ರ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆ ಹಾಗೂ ವೃದ್ಧಾಶ್ರಮದಲ್ಲಿ ೭೫ನೇ ಸ್ವಾತಂತ್ರೊö್ಯತ್ಸವದ ಪ್ರಯುಕ್ತ ಕಾರವಾರದ ಐ.ಎನ್.ಎಸ್. ವಿಕ್ರಮಾದಿತ್ಯ ನೌಕಾಪಡೆಯಿಂದ ಆಹಾರ ಸಾಮಾಗ್ರಿ ವಿತರಿಸಿದ ಅವರು,

ವೃದ್ಧಾಶ್ರಮದಲ್ಲಿರುವವರ ಆರೋಗ್ಯ ತಪಾಸಣೆ ನಡೆಸಿ, ತಮ್ಮ ಕಡೆಯಿಂದ ತಂದAತಹ ಔಷಧಗಳನ್ನು ನೀಡಿದರು. ಕಮಾಂಡರ್ ವಿಕ್ರಾಂತ್, ರಾಹುಲ್, ಶುಕ್ಲಾ ಸೇರಿಂದತೆ ಒಟ್ಟೂ ೧೧ ಜನರ ತಂಡದೊAದಿಗೆ ಆಗಮಿಸಿದ್ದ ಅವರು ಅಗತ್ಯವಿರುವ ಆಹಾರ ಧಾನ್ಯಗಳು, ಹಾಲಿನ ಪುಡಿ, ಸಕ್ಕರೆ, ಮಿಕ್ಸರ್ ಸೇರಿದಂತೆ ಅತ್ಯಗತ್ಯವಾಗಿರುವ ಮಾಸ್ಕ್, ಸಾನಿಟೈಜರ್, ವಿಟಮಿನ್ ಗುಳಿಗೆಯನ್ನು ವಿತರಿಸಿದರು.
ವೃದ್ಧಾಶ್ರಮದ ಜನರೊಡನೆ ಬೆರೆತು ಮಾತನಾಡಿ, ಅವರೊಂದಿಗೆ ಕ್ಯಾರಮ್ ಆಡುವ ಮೂಲಕ ಅವರ ಮನೋಬಲವನ್ನು ವೃದ್ಧಿಸಿದರು. ಈ ಸಂದರ್ಭದಲ್ಲಿ ಬುದ್ದಿಮಾಂದ್ಯ ಮಕ್ಕಳ ಶಾಲೆಯ ಮುಖ್ಯ ಶಿಕ್ಷಕ ಚಂದ್ರಪ್ಪ, ಶಿಕ್ಷಕರಾದ ಶ್ರೇಯಾಂಶ್, ಪ್ರವೀಣ ಹಾಗೂ ಇತರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
Leave a Comment