ದೇಶದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಹಿಡಿಯಲು ಅವಕಾಶ ನೀಡಬೇಡಿ, ಪಕ್ಷದ ನಿಲುವು, ಶ್ವೇತಪತ್ರವೇನು’
ಭಟ್ಕಳ: ಐಸಿಸ್ ಪ್ರಚಾರ ಮಾಸಿಕ ಆನ್ ಲೈನ್ ನಿಯತಕಾಲಿಕೆ ವೈಸ್ ಆಪ್ ಹಿಂದು ವನ್ನು ದಕ್ಷಿಣ ಭಾರತದ ಭಾಷೆಗೆ ಭಾಷಾಂತರ ಮಾಡುವ ಕೆಲಸದ ಮೂಲಕ ಐಸಿಸ್ ಗೆ ಸಹಾಯ ಮಾಡಿದ ಆರೋಪದ ಮೇಲೆಗೆ ಜಪ್ರಿ ಎಂಬುವವನನ್ನು ಭಟ್ಕಳಕ್ಕೆ ಬಂದ ಎನ್.ಐ.ಎ. ಬಂಧಿಸಿ ದೆಹಲಿಗೆ ಕರೆದುಕೊಂಡು ಹೋಗಿದ್ದರ ಬಗ್ಗೆ ಜವಾಬ್ದಾರಿ ಸ್ಥಾನದಲ್ಲಿರುವ ಜಿಲ್ಲೆಯ ಕಾಂಗ್ರೆಸ್ ಪಕ್ಷದ ನಾಯಕರಾದ ದೇಶಪಾಂಡೆ, ಮಾಜಿ ಶಾಸಕ ಮಂಕಾಳ ವೈದ್ಯ ಎಲ್ಲಿದ್ದೀರಿ. ನಿಮ್ಮ ಮೌನ ಯಾಕೆ? ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ, ವಕ್ತಾರ ನಾಗರಾಜ ನಾಯಕ ಪ್ರಶ್ನಿಸಿದ್ದಾರೆ.
ಅವರು ಈ ಕುರಿತು ಶನಿವಾರದಂದು ಇಲ್ಲಿನ ಭಟ್ಕಳ ಬಿಜೆಪಿ ಮಂಡಲ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
‘ಭಟ್ಕಳದಲ್ಲಿ ಮುಂದೊಂದು ದಿನ ಬಹುದೊಡ್ಡ ಅನಾಹುತ, ಘಟನೆ ಆಗುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಸತತ ತನಿಖೆಯನ್ನು ನಡೆಸಿ ಐಸಿಸ್ ಉಗ್ರ ಸಂಘಟನೆಗೆ ಸಹಾಯ ಮಾಡುತ್ತಿದ್ದ ಎಂಬ ಆರೋಪದ ಮೇರೆಗೆ ಓರ್ವನನ್ನು ಬಂಧಿಸಿ ಭಟ್ಕಳ ಹಾಗು ದೇಶದ ರಕ್ಷಣೆ ಮಾಡಿದ ಎನ್.ಐ.ಎ. ಅವರನ್ನು ಅಭಿನಂದಿಸಲಿದ್ದೇನೆ. ಮತ್ತು ಭಟ್ಕಳಕ್ಕೆ ಮಲ್ಲಿಗೆ ನಗರಿ ಎಂಬ ಹೆಸರನ್ನು ಕಡೆಸುವುಂತೆ ಕಪ್ಪು ಚುಕ್ಕೆಯಂತಾದ ಕೆಲ ಭಯೋತ್ಪಾದನಾ ಚಟುವಟಿಕೆ ಸಹಕಾರಿ ವ್ಯಕ್ತಿಗಳಿಂದ ವಿಶ್ವವೇ ಭಟ್ಕಳದತ್ತ ತಿರುಗುವಂತೆ ಮಾಡಿರುವುದು ಬೇಸರದ ಸಂಗತಿಯಾಗಿದೆ ಎಂದರು.

‘ಈಗಾಗಲೇ ಭಟ್ಕಳ ಮೂಲದ ಸಾಕಷ್ಟು ವ್ಯಕ್ತಿಗಳು ಭಯೋತ್ಪಾದನೆಗೆ ಸಹಕಾರಿ ಹಾಗೂ ಅದರ ಚಟುವಟಿಕೆಯಲ್ಲಿ ಭಾಗವಹಿಸಿದ ಆರೋಪಗಳಿದ್ದರು ಸಹ ಯಾಸಿನ್ ಭಟ್ಕಳ ಎಂಬಾತನಿಗೆ ಶಿಕ್ಷೆಯಾದ ನಂತರ ಎಲ್ಲವೂ ಬಹಿರಂಗವಾಗಿದೆ. ಕೆಲ ದಿನದ ಹಿಂದೆ ನಡೆದ ಎನ್.ಐ.ಎ. ದಾಳಿಯಿಂದ ಬಂಧಿಸಿದ ವ್ಯಕ್ತಿಯಿಂದ ಜಿಲ್ಲೆ ಭಟ್ಕಳದ ಸಾಮಾನ್ಯ ಜನರಲ್ಲಿ ಭಯ ಕಳವಳಿ ವ್ಯಕ್ತವಾಗುವುದರೊಂದಿಗೆ ಎಲ್ಲರೂ ಈ ಘಟನೆ ಖಂಡಿಸಿದ್ದಾರೆ. ಆದರೆ ರಾಜಕೀಯವಾಗಿ, ಸಮಾಜದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ನಾಯಕರುಗಳು ಮೌನ ಕ್ಕೆ ಶರಣಾಗಿದ್ದಾರೆ.
ಅದರಲ್ಲೂ ಪ್ರತಿ ಭಾರಿಯೂ ಭಯೋತ್ಪಾದನಾ ವಿಚಾರದಲ್ಲಿ ಜಿಲ್ಲೆಯ ಕಾಂಗ್ರೆಸ್ ನಾಯಕರುಗಳು ಬಾಯಿಗೆ ಬೀಗ ಹಾಕಿಕೊಂಡಿರುವಂತೆ ಮೌನಕ್ಕೆ ಶರಣಾಗಿ ಹಾಸಿಗೆಯಲ್ಲಿ ಹೊದಿಕೆ ಹಾಕಿ ಮಲಗಿರುವಂತೆ ಇರುವುದು ಜಿಲ್ಲೆಯ ಜನರಿಗೆ ಅವರು ಪ್ರಶ್ನಾತೀತರಾಗಲಿದ್ದಾರೆ ಎಂದರು.
ದೇಶದ ಎಲ್ಲೆಲ್ಲಿ ಭಯೋತ್ಪಾದನೆ, ಬಾಂಬ್ ಸ್ಪೋಟದ ಸಂಬಂಧಿತ ಪ್ರಕರಣದಲ್ಲಿ ಭಟ್ಕಳದ ಓರ್ವ ವ್ಯಕ್ತಿಯ ಹೆಸರು ಕೇಳಿ ಬರುತ್ತಲಿದ್ದು ಅದರಲ್ಲಿ ಕೆಲವರ ಶ್ಯಾಮೀಲು, ಪುರಾವೆ ದ್ರಡಪಟ್ಟಿದ್ದರೆ ಇನ್ನುಳಿದ ಪ್ರಕರಣದಲ್ಲಿ ದ್ರಡಪಡಬೇಕಿದೆ. ದೇಶದ ಸ್ವಾತಂತ್ರ್ಯದ ವಿಚಾರದಲ್ಲಿ ಹೋರಾಟ ಮಾಡಿದೆ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಪಕ್ಷದ ನಾಯಕರು ದಿವ್ಯ ಮೌನಕ್ಕೆ ಉತ್ತರಿಸಬೇಕಿದೆ ಎಂದರು.
‘ಕಾಂಗ್ರೆಸ್ ಪಕ್ಷವು ಭಯೋತ್ಪಾದನೆ ಸಂಬಂಧಿಸಿದ ಘಟನೆಯ ಪೂರ್ವ ಹಾಗೂ ಬಳಿಕವೂ ಸಹ ಯಾವುದೇ ಹೇಳಿಕೆ ನೀಡದೇ ಇರುವುದು ಅವರ ನಿಲುವು, ಶ್ವೇತಪತ್ರ ಎನೆಂಬುದು ಪ್ರಶ್ನಾತೀತವಾಗಿ ಕಾಣುತ್ತಲಿದೆ. ಇಂತಹ ಪಕ್ಷಕ್ಕೆ ದೇಶದ ಚುಕ್ಕಾಣಿಯನ್ನು ಹಿಡಿಯಲು ಜನರು ಮತ್ತೆ ಅವಕಾಶ ನೀಡಬಾರದು. ಅವರಿಗೆ ಅಧಿಕಾರ ಕೈಗೆ ನೀಡಬೇಡಿ. ದೇಶದ ಉದ್ದಾರಕ್ಕೆ ಪಕ್ಷ ಇದೆ ಎಂಬುದನ್ನು ಹೇಳಿಕೊಳ್ಳುವ ಪಕ್ಷದ ವರ್ತನೆ ಸರಿಯಿಲ್ಲ. ಹೊದ್ದುಕೊಂಡು ಮಲಗಿದ ನಾಯಕರು ಇದ್ದಾರೋ ಅಥವಾ ಏನು ಎಂಬುದು ಜನರಿಗೆ ತಿಳಿಸಬೇಕಾಗಿದೆ ಎಂದರು.
ಮಂಕಾಳ ವೈದ್ಯ, ದೇಶಪಾಂಡೆ ಎಲ್ಲಿ:
ಶಾಸಕ ಸುನೀಲ ನಾಯ್ಕ ಅವರು ಕೋವಿಡ್ ಸಮಯದಲ್ಲಿ ನಿರಂತರವಾಗಿ ಜನರೊಂದಿಗೆ ಇದ್ದು ಅವರ ಕಷ್ಟ ಸುಖಕ್ಕೆ ಸ್ಪಂದಿಸುವ ಕೆಲಸ ಮಾಡುತ್ತಿದ್ದರು ಸಹ ಇಲ್ಲಿನ ಮಾಜಿ ಶಾಸಕ ಮಂಕಾಳ ವೈದ್ಯ ಅವರು ಶಾಸಕರು ಎಲ್ಲಿ ಎಂಬ ಪ್ರಶ್ನೆ ಮಾಡಿದ್ದು ಈಗ ನಮ್ಮ ಸರದಿ. ಭಟ್ಕಳದಲ್ಲಿ ಭಯೋತ್ಪಾದನೆ ಸಂಬಂಧಿಸಿದಂತೆ ಓರ್ವನನ್ನು ಬಂದಿಸಿದ ಘಟನೆ ನಡೆದು ಇಷ್ಟು ದಿನವಾದರು ಇಲ್ಲಿನ ಮಾಜಿ ಶಾಸಕರಿಗೆ ಇದು ಕಣ್ಣಿಗೆ ಬಿದ್ದೀಲ್ಲವೇ. ಈಗ ಎಲ್ಲಿದ್ದೀರಾ ಮಾಜಿ ಶಾಸಕರೇ.? ಜಿಲ್ಲೆಯ ಕಾಂಗ್ರೆಸ್ ಸಾರ್ವಭೌಮ ನಾಯಕರಾಗಿ ಮೆರೆದ ಆರ್.ವಿ.ದೇಶಪಾಂಡೆ ಅವರಿಗೆ ಈ ಘಟನೆ, ವಿಚಾರ ಕಾಣಿಸಲಿಲ್ಲವೇ ಎಂಬುದರ ಬಗ್ಗೆ ಸ್ಪಷ್ಟ ನಿಲುವು ನೀಡಲು ಹಿಂಜರಿಕೆಯೇ ಎಂದು ಕಿಡಿಕಾರಿದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗೋವಿಂದ ನಾಯ್ಕ ಮಾತನಾಡಿ ‘ ಭಟ್ಕಳದಲ್ಲಿ ಈ ಹಿಂದೆ ವಾಜಪೇಯಿ ಸರಕಾರದ ಅವಧಿಯಲ್ಲಿ ಎನ್.ಐ.ಎ. ಕೇಂದ್ರ ಘಟಕ ಸ್ಥಾಪನೆ ಮಾಡಬೇಕೆಂಬುದ ಬಗ್ಗೆ ಮನವಿ ಸಹಿತ ಒತ್ತಾಯ ಮಾಡಲಾಗಿದ್ದು, ಈಗ ರಾಜ್ಯ ಗ್ರಹ ಸಚಿವರನ್ನು ಜಿಲ್ಲಾ ಬಿಜೆಪಿ ನಿಯೋಗವೂ ಭೇಟಿ ಮಾಡಿ ಭಟ್ಕಳದಲ್ಲಿ ಎನ್.ಐ.ಎ. ಘಟಕ ಸ್ಥಾಪನೆಗೆ ಒತ್ತಾಯ ಮಾಡಲಿದ್ದೇವೆ. ಮಂಗಳೂರಿನಲ್ಲಿ ಎನ್.ಐ.ಎ.ಘಟಕ ಸ್ಥಾಪನೆಗೆ ನಮ್ಮ ಸಹಕಾರವಿದೆ. ಅದೇ ರೀತಿ ಸಿ.ಆರ್.ಪಿ.ಎಫ್. ತುಕಡಿ ನಿಯೋಜನೆಗೆ ಸಹ ಒತ್ತಡ ಹಾಕಲಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಭಟ್ಕಳ ಬಿಜೆಪಿ ಮಂಡಲಾಧ್ಯಕ್ಷ ಸುಬ್ರಾಯ ದೇವಾಡಿಗ, ತಾಲೂಕಾ ಪ್ರಧಾನ ಕಾರ್ಯದರ್ಶಿ ಭಾಸ್ಕರ ದೈಮನೆ, ಉಪಾಧ್ಯಕ್ಷ ಮೋಹನ ನಾಯ್ಕ, ಜಿಲ್ಲಾ ಸೈನಿಕ ಪ್ರಕೋಷ್ಠದ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ಜಿಲ್ಲಾ ಬಿಜೆಪಿ ಕಾನೂನು ಪ್ರಕೋಷ್ಠದ ಸುರೇಶ ನಾಯ್ಕ ಇದ್ದರು.
Leave a Comment