ಯಲ್ಲಾಪುರ: ವ್ಯಕ್ತಿಯೋರ್ವ ಮಲಗಿದಲ್ಲೇ ಆಕಸ್ಮಿಕವಾಗಿ ಮೃತಪಟ್ಟ ಘಟನೆ ತಾಲೂಕಿನ ಗುಳ್ಳಾಪುರ ಸಮೀಪದ ನವಗ್ರಾಮ ಚಿಕ್ಕುಮನೆಯಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ಚಿಕ್ಕುಮನೆಯ ಮಂಜುನಾಥ ಕೃಷ್ಣ ಸಿದ್ದಿ (40) ಎಂದು ಗುರುತಿಸಲಾಗಿದೆ. ಭಾನುವಾರ ಎಂದಿನಂತೆ ಕೆಲಸಕ್ಕೆ ಹೋಗಿ ಬಂದ ಈತ ರಾತ್ರಿ ಊಟ ಮಾಡಿ ಮಲಗಿದ್ದ. ಸೋಮವಾರ ಬೆಳಗ್ಗೆ ಮನೆಯವರು ನೋಡಿದಾಗ ಆತ ಮೃತಪಟ್ಟಿರುವುದು ಕಂಡು ಬಂದಿದೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment