ಹೊನ್ನಾವರ ತಾಲೂಕಿನ ಹಡಿನಬಾಳ ಗ್ರಾಮದ ಕಡಿಗೇರಿಯ ನಾರಾಯಣ ನಾಯ್ಕರವರ ಮನೆಯ ಸುಮಾರು 30 ಅಡಿ ಆಳ 08 ಅಡಿ ನೀರಿರುವ ಬಾವಿಯಲ್ಲಿ ಆಕಳೊಂದು ಆಯತಪ್ಪಿ ಬಿದ್ದಿತ್ತು. ರಕ್ಷಣೆಗಾಗಿ ಹೊನ್ನಾವರ ಅಗ್ನಿಶಾಮಕದಳಕ್ಕೆ ಕರೆ ಮಾಡಿದಾಗ ಕೂಡಲೇ ಸ್ಪಂದಿಸಿದ ಸಿಬ್ಬಂದಿಯವರು ರಕ್ಷಣಾ ಉಪಕರಣಗಳ ಸಹಾಯದಿಂದ ಬಾವಿಯಲ್ಲಿ ಬಿದ್ದಿರುವ ಹಸುವನ್ನು ಸುರಕ್ಷಿತವಾಗಿ ಮೇಲಕ್ಕೆ ಎತ್ತುವ ಮೂಲಕ ರಕ್ಷಣೆ ಮಾಡಿದ್ದಾರೆ.
ಕಾರ್ಯಚರಣೆಯಲ್ಲಿ ಠಾಣಾಧಿಕಾರಿ ಜಯಾನಂದ ಎನ್. ಪಟಗಾರ ಸಿಬ್ಬಂದಿಗಳಾದ ಅರುಣ ಎಸ್. ಮಾಳೋದೆ, ನಾಗೇಶ್ ಪೂಜಾರಿ, ಗಜಾನನ ಪಿ. ನಾಯ್ಕ , ರಮೇಶ್ ಬಿ. ಚಿಕ್ಕಲಗಿ, ವೆಂಕಟೇಶ್ ನಾಯ್ಕ, ವಿನಾಯಕ ಎಸ್. ಭಂಡಾರಿ ಹಾಗೂ ಅಭಿಷೇಕ ನಾಯ್ಕ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಹಸುವನ್ನು ರಕ್ಷಣೆ ಮಾಡಿರುತ್ತಾರೆ.
Leave a Comment