
ಯಲ್ಲಾಪುರ:ಪಟ್ಟಣದ ಗೌಸಿಯಾ ಮಸೀದಿಯಲ್ಲಿ ಅವ್ಯವಹಾರದ ನಡೆದಿದೆ. ಈ ಕುರಿತು ಸೂಕ್ತ ತನಿಖೆ ನಡೆಸುವಂತೆ ತಾಮೀರ್ ಕೊ ಆಪ್ ಸೊಸೈಟಿ ಮಾಜಿ ಅಧ್ಯಕ್ಷ ಮಹಮ್ಮದ ಗೌಸ್ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕಳೆದ ಏಳು ವರ್ಷಗಳಿಂದ ಗೌಸಿಯಾ ಮಸೀದಿ ಆಡಳಿತ ಕಮೀಟಿ ಅಸ್ತತ್ವದಲ್ಲಿದ್ದು ಕಾನೂನಾತ್ಮಕವಾಗಿ ಸರ್ಕಾರದಲ್ಲಿ ನೊಂದಣಿಯಾಗಿಲ್ಲ. ಅಲ್ಲದೇ ಇದರಲ್ಲಿರುವ ಸದಸ್ಯರು ವಕ್ಫ್ ಬೋರ್ಡ್ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಸಮಿತಿಯಲ್ಲಿ ಹಣಕಾಸು, ಲೆಕ್ಕ ಪತ್ರ ಸರಿಯಾಗಿ ಇಟ್ಟಿಲ್ಲ. ಇದರ ಬಗೆಗೆ ಆಡಿಟ್ ಮಾಡಿಸಿಲ್ಲ. ಮಸೀದಿ ಹೆಸರಿನಲ್ಲಿ ಹಣ ಮಾಡುವ ದಂಧೆಗೆ ಇಳಿದಿದ್ದಾರೆಂದು ಆರೋಪಿಸಿದ್ದಾರೆ.
ಹಣಕಾಸಿನ ಲೆಕ್ಕಪತ್ರವನ್ನು ವಕ್ಫ್ ಬೋರ್ಡಿಗೆ ನೀಡಿಲ್ಲ. ನೋಂದಣಿಯಾಗದೇ ಶಾದಿ ಮಹಲ್ ಬಾಡಿಗೆಗೆ ನೀಡುವುದರೊಂದಿಗೆ ಸಂಬAಧಿಸಿದ ಪಾತ್ರೆಗಳನ್ನೂ ಬಾಡಿಗೆಗೆ ನೀಡುತ್ತಿದ್ದು ಇದಕ್ಕೂ ಯಾವುದೇ ಲೆಕ್ಕವಿಲ್ಲ. ಹಿಂದೆ ವಕ್ಫ್ ಬೋರ್ಡಿನ ಅಧ್ಯಕ್ಷರು,ಉಪಾಧ್ಯಕ್ಷರು, ಅಧಿಕಾರಿಗಳು ಬಂದು ಲೆಕ್ಕ ಪತ್ರ ಒಪ್ಪಿಸಲು ಹೇಳಿದ್ದರೂ ಸಮಿತಿಯವರು ಒಪ್ಪಿಸಿಲ್ಲ. ಇಷ್ಟೇ ಅಲ್ಲದೇ ಮಸೀದಿ ಜಾಗವನ್ನು ಕಮೀಟಿ ಸದಸ್ಯರೇ ಅತಿಕ್ರಮಣ ಮಾಡಿದರೂ ಯಾವುದೇ ಕ್ರಮವಾಗಿಲ್ಲ.
ಜಿಲ್ಲಾ ಉಸ್ತುವಾರಿ ಸಚಿವರ ಪರಿಶ್ರಮದಿಂದ ಇನ್ನೆರಡು ಮಸೀದಿಗಳಿಗೆ ತಲಾ ೨೦ ಲಕ್ಷ ಅನುದಾನ ಬಂದಿದೆ ಆದರೆ ಗೌಸಿಯಾ ಮಸಿದಿಯಲ್ಲಿ ಹಣಕಾಸಿನ ಅವ್ಯವಹಾರ ನಡೆಯುತ್ತಿರುವದರಿಂದ ಮೊದಲ (ಮೂಲ )ಮಸೀದಿಯಾಗಿದ್ದರೂ ಸರಕಾರದಿಂದ ಯಾವದೇ ಅನುದಾನವೂ ಬಾರದಾಗಿದೆ. ಆದ್ದರಿಂದ ಒಂದು ಧಾರ್ಮಿಕ, ಸಾರ್ವಜನಿಕ ಆಸ್ತಿ ದುರುಪಯೋಗ ಮಾಡುವದು ಕಾನೂನಿನ ಪ್ರಕಾರ ಅಪರಾಧವಾಗಿದೆ. . ಸೂಕ್ತ ತನಿಖೆಯಾಗಿ ವ್ಯವಹಾರ ಸರಿಯಾಗಿ ಮಾಡುªವರೆಗೂ ಈ ಮಸೀದಿಗೆ ಆಡಳಿತ ಮಂಡಳಿಯ ಚುನಾವಣೆ ನಡೆಸದಂತೆ ತಡೆಯಾಜ್ಞೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ನಾನು ರ್ಸಾಜನಿಕ ಹಿತಾಸಕ್ತಿಯಿಂದ ಮಸೀದಿಯ ಅವ್ಯವಹಾರ ಬಯಲಿಗೆ ತರುತ್ತಿರುವದರಿಂದ ನನಗೆ ಜೀವ ಬೆದರಿಕೆಯನ್ನು ಹಾಕುತ್ತಿದ್ದಾರೆ ಎಂದರು.
ಈ ಕುರಿತು ಸೂಕ್ತ ತನಿಖೆ ಮಾಡಿ, ಕ್ರಮ ಕೈಗೊಳ್ಳಲು ತಹಸೀಲ್ದಾರ ಶ್ರೀಕೃಷ್ಣ ಕಾಮ್ಕರ್ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇನೆ ಎಂದು ತಿಳಿಸಿದ್ದಾರೆ.ಒಂದು ವೇಳೆ ಕ್ರಮ ಕೈಗೊಳ್ಳದಿದ್ದರೆ ಸಮಾಜ ಬಾಂಧವರೊAದಿಗೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಸಿದ್ದಾರೆ. ಗಾಸಿಯಾ ಅರೇಬಿಕ್ ಮದರಸಾ ಅಧ್ಯಕ್ಷ ಖಾಸಿಂ ಸಾಬ್ ಮಹಮ್ಮದ್ ಗೌಸ್ ಮುಲ್ಲಾ ಇದ್ದರು.
Leave a Comment