ಯಲ್ಲಾಪುರ : ಪಟ್ಟಣದ ಬಿಕ್ಕು ಗುಡಿಗಾರ್ ಕಲಾ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಸಂತೋಷ್ ಗುಡಿಗಾರ್ ನೇತೃತ್ವದಲ್ಲಿ ಇಲ್ಲಿ ನಿರ್ಮಿಸಲಾಗುತ್ತಿರುವ ವಾಲ್ಮೀಕಿ ಸಮಾಜಕ್ಕೆ ಸೇರಿದ ಬೃಹತ್ ಗಾತ್ರದ ರಥದ ನಿರ್ಮಾಣ ಕಾರ್ಯವನ್ನು ಪ್ರವಾಸೋದ್ಯಮ & ಪರಿಸರ ಖಾತೆ ಸಚಿವ ಆನಂದ ಸಿಂಗ್ ವೀಕ್ಷಿಸಿದರು. ಹರಿಹರದ ರಾಜನಹಳ್ಳಿಯ ಮಠಾಧೀಶರಾದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಗಳ ಇಚ್ಛೆಯಂತೆ ಅವರೊಡನೆ ಆಗಮಿಸಿದ್ದ ಸಚಿವರು ನಿರ್ಮಾಣ ಹಂತದಲ್ಲಿರುವ ರಥವನ್ನು ವೀಕ್ಷಿಸಿ, ಅದರ ಖರ್ಚು ವೆಚ್ಚಗಳ ಬಗ್ಗೆ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ‘ ರಾಜಕೀಯದ , ಕೇಳಬೇಡಿ. ನಾನು ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ, ಎಂದು ತಮ್ಮ ರಾಜನಾಮೆಯ ಕುರಿತಾಗಿ ಆಗಲಿ ಅಥವಾ ಖಾತೆಯ ಬದಲಾವಣೆಯ ಕುರಿತಾಗಲೀ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡಲಿಲ್ಲ. ಬದಲಾಗಿ ಶ್ರೀರಾಮನ ಆಶೀರ್ವಾದವೋ ಎನೋ ಗೊತ್ತಲ್ಲಿ ಆದರೆ ಗುರುಗಳ ಪ್ರಸ್ತಾವನೆಯಂತೆ ನಾನು ಈ ರಥದ ನಿರ್ಮಾಣ ಕಾರ್ಯಕ್ಕೆ ಅಗತ್ಯವಿರುವ ಸಹಾಯವನ್ನು ಮಾಡುತ್ತಿರುವುದಾಗಿ ಹಾಗೂ ಇಲ್ಲಿಗೆ ತಮ್ಮ ಸಮಾಜದ ಕಾರ್ಯದ ನಿಮಿತ್ತ ಬಂದಿರುವದಾಗಿ ಸ್ಪೀಕರ್ ಅವರನ್ನು ಭೇಟಿಯಾಗುವದಿಲ್ಲ ಎಂದು ತಿಳಿಸಿದರು.

ನಂತರ ಬಿಕ್ಕು ಗುಡಿಗಾರ ಕಲಾಕೇಂದ್ರದ ವತಿಯಿಂದ ಸಚಿವರಿಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂತೋಷ ಗುಡಿಗಾರ, ಅರುಣ ಗುಡಿಗಾರ, ಅಣ್ಣಪ್ಪ ಗುಡಿಗಾರ, ಪ.ಪಂ. ಸದಸ್ಯ ಆದಿತ್ಯ ಗುಡಿಗಾರ ಮುಂತಾದವರು ಉಪಸ್ಥಿತರಿದ್ದರು.
ಸಾಮಾನ್ಯವಾಗಿ ಬಿ.ಜೆ.ಪಿ. ಯಾವುದೇ ಮಂತ್ರಿ ಗಳು,ಮುಖಂಡರು ಯಲ್ಲಾಪುರಕ್ಕೆ ಆಗಮಿಸಿದಾಗ ತಾಲೂಕಿನ ಕಾರ್ಯಕರ್ತರು ಆತ್ಮೀಯವಾಗಿ ಸ್ವಾಗತಿಸಿ ಬರಮಾಡಿ ಮಾಡಿಕೊಳ್ಳುತ್ತಿದ್ದದ್ದು ವಾಡಿಕೆಯಾಗಿತ್ತು. ಆದರೆ ಒಬ್ಬ ಸಚಿವರು ಬೇಟಿ ನೀಡಿದ್ದರೂ ಯಾವುದೇ ಕಾರ್ಯಕರ್ತರಾಗಲಿ, ಮುಖಂಡರಾಗಲಿ, ಕಾರ್ಮಿಕ ಸಚಿವ ರ ಸ್ವಕ್ಷೇತ್ರ ಕ್ಕೆ ಬಂದಿದ್ದರೂ ಭೇಟಿ ಮಾಡದೇ ಇದ್ದದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಸಚಿವ ಆನಂದ ಸಿಂಗ್ ಅವರ ರಾಜಿನಾಮೆಯ ಕುರಿತಾಗಿ ಹಲವಾರು ಊಹಾಪೋಹಗಳು ಕೆಲವು ದಿನಗಳಿಂದ ಹರಿದಾಡುತ್ತಿದ್ದು. ಅವರು ಶಿರಸಿಯಲ್ಲಿ ರಾಜಿನಾಮೆಯನ್ನು ಘೋಷಿಸುವ ಸಾಧ್ಯತೆಗಳಿವೆ ಎನ್ನುವ ಗಾಳಿ ಸುದ್ದಿ ಹರಡಿತ್ತು. ಈ ಕುರಿತು ಸಚಿವರನ್ನು ವಿಚಾರಿಸಿದಾಗ, ನಾನು ಇಲ್ಲಿಂದ ನೇರವಾಗಿ ಹೊಸಪೇಟೆಗೆ ತೆರಳುವೆ. ಶಿರಸಿಗೆ ಹೋಗುತ್ತಿಲ್ಲ. ನಂಬಿಕೆ ಇಲ್ಲವಾದಲ್ಲಿ ಗಡಿಯವರೆಗೂ ಬಂದು ನನ್ನನ್ನು ಕಳುಹಿಸಿಕೊಡಬಹುದು ಎಂದು ನಗೆ ಚಾಟಿ ಬೀಸಿದ್ದ ಅವರು ನಂತರ ಕಾರವಾರ ತೆರಳಿಅಲ್ಲಿಂದ ಗೋವಾಗೆ ಹೋಗಿದ್ದು ನಿಗೂಢ ನಡೆ ಯಾಗಿದೆ
Leave a Comment