ಹೊನ್ನಾವರ : ತಾಲೂಕಿನ ಕಾಸರಕೋಡ ಬಂದರು ಅಳಿವೆಯಲ್ಲಿ ಗಂಗೋಳ್ಳಿ ಮೂಲದ ಎಸ್.ಎಮ್ ಪಿ ಪರ್ಶಿನ ಬೋಟ ಅಳವೆಯಲ್ಲಿ ಸಿಲುಕಿಕೊಂಡು ಆತಂಕ ಸೃಷ್ಠಿಯಾಗಿತ್ತು. ಬೋಟನಲ್ಲಿದ್ದ ೨೫ ಜನರಲ್ಲಿ ೨೩ ಜನರು ಈಜಿ ದಡ ಸೇರಿದರು ಇಬ್ಬರು ಬೋಟನಲ್ಲಿ ಸಿಲುಕಿ ಕೊಂಡಿದ್ದರು.
ಕರಾವಳಿ ಕಾವಲು ಪಡೆಯವರಿಗೆ ವಿಷಯ ತಿಳಿಸಿ ಯಾವುದೇ ಪ್ರಯೋಜನ ವಾಗಿಲ್ಲ ಎನ್ನುವುದು ಮೀನುಗಾರರ ಆರೋಪವಾಗಿದೆ
ಮಧ್ಯಾಹ್ನ ಎರಡು ಘಂಟೆಯ ಸುಮಾರಿಗೆ ಸ್ಥಳಿಯ ಬೋಟ್ ಮಾಲಿಕ ಇಕ್ಬಾಲ್ ತಮ್ಮ ಎರಡು ಬೋಟ್ ಮೂಲಕ ಘಟನಾ ಸ್ಥಳಕ್ಕೆ ಬಂದು ತಾವೆ ಕುದ್ದಾಗಿ ಒಂದು ಬೋಟನ್ನು ಚಲಾಯಿಸಿಕೋಂಡು ಇನ್ನೊಂದು ಬೋಟ ಚಾಲಕ ಶಂಕರ ಉಪ್ಪಾರ್ ಹಾಗೂ ಸಹ ಮೀನುಗಾರರೇ ತೆರಳಿ ಬೋಟ್ ಮತ್ತು ಇಬ್ಬರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ,

ಕರಾವಳಿ ಕಾವಲು ಪಡೆಯ ವಿರುದ್ದ ಮೀನುಗಾರರ ಆಕ್ರೋಶ; ಬೆಳಿಗ್ಗೆ ೧೧ ಘಂಟೆಯ ಸಮಯದಲ್ಲಿ ಘಟನೆ ನಡೆದಾಗ ತಕ್ಷಣ ಕರಾವಳಿ ಕಾವಲು ಪಡೆಯವರಿಗೆ ವಿಷಯ ತಿಳಿಸಿದ್ದಾಗ ಬಂದರು ಸಮೀಪ ಸಿಬ್ಬಂದಿಗಳು ಬಂದು ನಮ್ಮಲ್ಲಿ ಬೋಟ ಇಲ್ಲಾ ಎಂದು ಹೇಳಿ ಹೋಗಿದ್ದು ಬಿಟ್ಟರೆ ರಕ್ಷಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.ಪ್ರತಿಬಾರಿ ಅವಗಡವಾದಾಗ ಕರಾವಳಿ ಕಾವಲು ಪಡೆಯವರು ನಮ್ಮಲ್ಲಿ ಬೋಟ್ ಇಲ್ಲಾ ತದಡಿಯಲ್ಲಿದೆ ಎಂದು ಹೇಳುತ್ತಾರೆ ಒಂದುವೇಳೆ ಹೊನ್ನಾವರದಲ್ಲಿ ಇದ್ದರೆ ರಿಪೇರಿಇದೆ ಎಂದು ಉಡಾಪೆ ಉತ್ತರಗಳನ್ನು ಹೇಳುತ್ತಾರೆ ಎನ್ನುವುದು ಮೀನುಗಾರರ ಆರೋಪವಾಗಿದೆ.
Leave a Comment