ಹೊನ್ನಾವರ: ತಾಲೂಕಿನ ಮೂರುಕಟ್ಟೆ ಬಳಿ ಮಂಗಳವಾರ ತಡ ರಾತ್ರಿ ಬೈಕ್ ಮತ್ತು ಆಲ್ಟೊ ಕಾರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ವಲ್ಕಿಯ ಅನ್ಸಾರ್ ಅಬ್ದುಲ್ ರೆಹಮಾನ್ ಬೊಂಗ್ಯಾ ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ.
ಅನ್ಸಾರ್ ಮತ್ತು ಪಾಜಿಲ್ ಇಕ್ಬಾಲ್ ಎಂಬವರು ಬೈಕ್ ಅಲ್ಲಿ ಹೊನ್ನಾವರದಿಂದ ವಲ್ಕಿ ಕಡೆಗೆ ಹೋಗುತ್ತಿದ್ದಾಗ ಮೂರುಕಟ್ಟೆ ಬಳಿ ಎದುರಿನಿಂದ ಬರುತ್ತಿದ್ದ ಆಲ್ಟೊ ಕಾರ ಆಕಳು ರಸ್ತೆ ಮಧ್ಯೆ ಇದೆ ಎನ್ನುವ ಕಾರಣಕ್ಕೆ ಚಾಲಕ ಏಕಾ ಏಕಿ ಬಲಕ್ಕೆ ತಿರುಗಿಸಿ ಬೈಕ್ ಗೆ ಗುದ್ದಿದ್ದಾನೆ ಎನ್ನಲಾಗಿದೆ.
ಅಪಘಾತದಲ್ಲಿ ಬೈಕ್ ಅಲ್ಲಿದ್ದ ಅನ್ಸಾರ್ ಗಂಭೀರ ಗಾಯಾಗೊಂಡರೆ ಪಾಜಿಲ್, ಕಾರಿನ ಚಾಲಕ ಶ್ರೀಪತಿ ಗಣಪತಿ ಭಟ್ಟ, ಕಾರಿನಲ್ಲಿದ್ದ ಅನುಸುಯಾ ಗಣಪತಿ ಭಟ್ಟ, ಪ್ರಿಯಾಂಕ ಶ್ರೀಪತಿ ಭಟ್ಟ ಸಣ್ಣ ಪುಟ್ಟ ಗಾಯಗೊಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಅಪಘಾತ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ದಾವಿಸಿದ ಹೊನ್ನಾವರ ಪೊಲೀಸರು ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸುವಲ್ಲಿ ಶ್ರಮಿಸಿದರು. ಘಟನೆಗೆ ಸಂಬಂಧಿಸಿದಂತೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment