ಶಿರಸಿ : ವಿವಿಧ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಪ್ರಮುಖರ ಜೊತೆ ಸಭೆ ನಡೆಯಿತು.
ಶಿರಸಿ : ಮುಂಬರುವ ಗಣೇಶ ಚತುರ್ಥಿಯನ್ನು ಸರ್ಕಾರದ ನಿಯಮದಂತೆ ಅತ್ಯಂತ ಸರಳವಾಗಿ ಮನೆ ಹಾಗೂ ದೇವಸ್ಥಾನದಲ್ಲಿ ಮಾತ್ರ ಆಚರಿಸಬೇಕು ಎಂದು ತಹಸೀಲ್ದಾರ ಎಮ್ . ಆರ್. ಕುಲಕರ್ಣಿ ಸೂಚಿಸಿದ್ದರು.
ಗಣೇಶ ಚತುರ್ಥಿ ಹಿನ್ನಲೆಯಲ್ಲಿ ನಗರದ ಮಿನಿ ವಿಧಾನಸೌಧದಲ್ಲಿ ವಿವಿಧ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಪ್ರಮುಖರ ಜೊತೆ ಸಭೆ ನಡೆಸಿ ಮಾತನಾಡಿದ ಅವರು, ಕೊವಿಡ್ ಕಾರಣಕ್ಕಾಗಿ ಸರ್ಕಾರದ ಅದ್ದೂರಿ ಆಚರಣಿಗೆ ಬ್ರೇಕ್ ಹಾಕಿದೆ ಪೆಂಡಾಲ್, ಮೆರವಣಿಗೆ, ಪಟಾಕಿ, ಡಿಜೆಯನ್ನು ನೀಷೆಧಿಸಲಾಗಿದೆ ಎಂದರು.

ಬಹಳಷ್ಟು ಎತ್ತರದ ಗಣಪತಿ ಇಡಬಾರದು. ಎಲ್ಲಿಯೂ ಸಾರ್ವಜನಿಕ ಗಣಪತಿ ಅವಕಾಶವಿಲ್ಲ ಹಾಗೂ ಯಾವುದೇ ಮನರಂಜನೆ ಕಾರ್ಯಕ್ರಮ ಆಯೋಜನೆ ಮಡಬರದು ಎಂದೆ ಅವರು, ಗ್ರಾಮೀಣ ಭಾಗದಲ್ಲಿಯೂ ಸಹ ಇದೇ ನಿಯಮ ಅನ್ವಯವಾಗುತ್ತದೆ. ಎಲ್ಲಿಯೂ ದಿನಕಿಂತ ಹೆಚ್ಚು ದಿನ ಗಣಪತಿ ಉತ್ಸವ ಮಾಡಬಾರದು ಎಂದರು.
ಡಿಡಸ್ಪಿ ರವಿ ನಯ್ಕ ಮಾತನಾಡಿ ಮೋಹರಂ ಹಾಗೂ ಗಣೇಶ ಹಬ್ಬವನ್ನು ಸರ್ಕಾರದ ನಿಯಮದ ಪ್ರಕಾರ ಮಾತ್ರ ಅನುಮತಿ ನೀಡಲಾಗುತ್ತಿದೆ. ಎಂದರು ಉತ್ಸವ ಸಮಿತಿ ಪ್ರಮುಖರು ಆಯ ಸಮುದಾಯ ಭವನದಲ್ಲಿ ಆಚರಣೆಗೆ ಅವಕಾಶ ಕೊಡುವಂತೆ ಹಾಗೂ ದೇವಸ್ಥಾನಗಳನ್ನು ಹಬ್ಬಕ್ಕೆ ಮುನ್ನ ಸ್ಯಾನಿಟೈಸ್ ಮಾಡುವಂತೆ ವಿನಂತಿಸಿದರು ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾದಿಕಾರದ ಅಧ್ಯಕ್ಷ ನಂದನ್ ಸಾಗರ್, ನಗರಸಭೆ ಪೌರಾಯುಕ್ತ ಕೇಶವ ಚೌಗಲೆ, ಸಿಪಿಐ ರಮಚಂದ್ರ ನಾಯಕ ಮುಂತಾದವರು ಇದ್ದರು.
Leave a Comment