ಶಿರಸಿ : ಯಾರೋ ರಾಕ್ಷಸ ಮನಸ್ಥಿತಿಯವರು ಎತ್ತಿನ ಕಾಲು ಕಡಿದು, ಅದು ನ್ಯಾಯಾಲಯದ ಹಿಂಭಾಗದಲ್ಲಿ ನರಳುತ್ತ ಮಲಗಿದ್ದ ದೃಶ್ಯ ನ್ಯಾಯಾವಾದಿಯೊಬ್ಬರ ಮನಕಲಕಿ ಅವರು ತಕ್ಷಣ ಗೋ ರಕ್ಷಕರಿಗೆ ತಿಳಿಸಿ ಎತ್ತಿನ ರಕ್ಷಣೆಗೆ ನೆರವಾದ ಪ್ರಸಂಗ ಬುಧುವಾರ ನಡೆದಿದೆ.

ಬೆಳ್ಳಿಗೆ ನ್ಯಾಯಾಲಯ ಕ್ಕೆ ಬಂದ ನ್ಯಾಯವಾದಿ ಕಾವ್ಯ ಜಗದೀಶ ರವರು, ಎತ್ತು ರಕ್ತದ ಮಡುವಿನಲ್ಲಿ ಒದ್ದಾಡುತ್ತಿರುವುದನ್ನು ಕಂಡು ಗೋ ರಕ್ಷಕ ಸಂಘಡನೆ ಯವರಿಗೆ ಮಾಹಿತಿ ನೀಡಿದರು. ತಕ್ಷಣವೇ ಕಾರ್ಯಪ್ರವೃತ್ತರಾದ ಗೋ ರಕ್ಷಕ ದಳ ದ ಪ್ರಮುಖರಾದ ಶ್ರೀನಿವಾಸ ಹೆಬ್ಬಾರ್ ಹಾಗೂ ಅವರ ತಂಡ ಸ್ಥಳಕ್ಕೆ ಪಶು ವೈದ್ಯಾಧಿಕಾರಿಯನ್ನು ಕರೆಸಿ ಸ್ಥಳದಲ್ಲಿ ಚಿಕಿತ್ಸೆ ಕೊಡಿಸಿದರು. ಎತ್ತನ್ನು ಗೋ ರಕ್ಷಕ ಸಂಘಟನೆ ಸುಪರ್ದಿಗೆ ತೆಗೆದುಕೊಂಡು ಚಿಕಿತ್ಸೆ ಮುಂದುವರೆಸಿದೆ. ಇವರ ಈ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Leave a Comment