ಕಾರವಾರ : ಕಾಳಿಂಗ ಸರ್ಪ ಹಾಗೂ ಹೆಬ್ಬಾವಿನ ನಡುವೆ ದೂಡ್ಡ ಕದನ ನಡೆದು ಸೋಲೊಪ್ಪಿಕ್ಕೊಳ್ಳಲು ಸಿದ್ಧರಿಲ್ಲದೆ ಸಾವಿನಂಚಿಗೆ ತೆರಳಿದಾಗ ಅರಣ್ಯ ಇಲಾಖೆ ಸಿಬ್ಬಂದಿ ಕಾಳಗ ಬಿಡಿಸಿದ ಘಟನೆ ಕಾರವಾರದ ಹರಿದೇವ ನಗರದಲ್ಲಿ ಶುಕ್ರವಾರ ಸಂಜೆ ನಡೆದಿದೆ.

ನಗರದ ಹರಿದೇವ ನಗರದಲ್ಲಿ ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪ ಹಾಗೂ ಸುಮಾರು 6 ಅಡಿ ಉದ್ದದ ಹೆಬ್ಬಾವು ಕಾಳಗ ನಡೆಸಿದ್ದವು. ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು ಅರ್ಧ ಗಂಟೆಗೂ ಹೆಚ್ಚು ಕಾಲ ಕಾಳಗ ನಡೆದು, ಹೆಬ್ಬಾವು ಕಾಳಿಂಗ ಸರ್ಪದ ತಲೆಯನ್ನು ತನ್ನ ದೇಹದಲ್ಲಿ ಬಂದಿಯಾಗಿಸಿತ್ತು. ಹೆಬ್ಬಾವಿಗೆ ಉದ್ದದ ಕಾಳಿಂಗನನ್ನು ನುಂಗಲು ಸಾಧ್ಯವಾಗುತ್ತಿರಲಿಲ್ಲ. ಕಾದಾಡಿ ಎರಡು ಹಾವುಗಳು ಸಾವನ್ನಪ್ಪುವ ಸ್ಥಿತಿಯಲ್ಲಿದ್ದಾಗ ಅರಣ್ಯ ಇಲಾಖೆ ಸಿಬ್ಬಂದಿ ಬಿಡಿಸಿದ್ದರು.
Leave a Comment