ಬೆಂಗಳೂರು : ಕಳಪೆ ಭೋಧನೆ, ಮೂಲಸೌಕರ್ಯಕೊರತೆ ಮತ್ತಿತರ ಕಾರಣಗಳಿಂದ ತೀವ್ರ ಸಮಸ್ಯೆ ಎದುರಿಸುತ್ತಿದ್ದ ರಾಜ್ಯದ ಆರು ಎಂಜಿನಿಯರಿAಗ್ ಕಾಲೇಜುಗಳನ್ನು ಶಶ್ವತವಾಗಿ ಮಚ್ಚಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯ (ಐಟಿಯು) ಅಧಿಸೂಚನೆ ಪ್ರಕಟಿಸಿದೆ. ಬೆಂಗಳೂರಿನ ಅಲ್ಫಾ ಎಂಜಿನಿಯರಿAಗ್ ಇನ್ ಸ್ವಿಟ್ಯೂಟ್ ಆಫ್ ಟೆಕ್ನಾಲಜಿ, ಬೆಳಗಾವಿಯ ಶೇಖ್ ಎಂಜಿನಿಯರಿAಗ್ ಇನ್ಸ್ವಿಟ್ಯೂಟ್ ಆಫ್ ಟೆಕ್ನಾಲಜಿ ಬೆಂಗಳೂರಿನ ಇಸ್ಲಾಮಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಜಾಮರಾಜನಗರದ ಏಕಲವ್ಯ ಇನ್ ಸ್ವಿಟ್ಯೂಟ್ ಆಫ್ ಟೆಕ್ನಾಲಜಿ, ಕೆಜಿಎಫ್ನ ಶ್ರೀ ವಿನಾಯಕ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಹಾಗೂ ಬೆಂಗಳೂರಿನ ಬಿಟಿಎಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಪ್ರಸಕ್ತ ವರ್ಷದಿಂದ ಮುಚ್ಚಲ್ಪಡುತ್ತೆವೆ.

ಇತ್ತೀಚಿನ ನಡೆದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಹಿತದೃಷ್ಟಿಯಿಂದ ಮೂಲಸೌಕರ್ಯ ಕೊರತೆ ಇರುವ ಎಂಜಿನಿಯರಿAಗ್ ಕಾಲೇಜುಗಳನ್ನು ಮುಚ್ಚಿ, ಸದ್ಯ ಈ ಕಾಲೇಜುಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಅನ್ಯ ಕಾಲೇಜುಗಳಿಗೆ ವರ್ಗಾವಣೆಗೊಳಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಲ್ಲದೇ 2021-22 ನೇಶೈಕ್ಷಣಿಕ ಸಾಲಿನಿಂದ ಈ ಆರು ಕಾಲೇಜುಗಳಿಗೆ ಪ್ರವೇಶ ಪಡೆಯದಂತೆ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ವಿಟಿಯು ಎಚ್ಚರಿಕೆಯನ್ನೂ ನೀಡಿದೆ.
Leave a Comment