ಪಟ್ಟಣದ ಸರಕಾರಿ ಆಸ್ಪತ್ರೆಗೆ ಹೊಸ ಡಯಾಲಿಸಿಸ್ ಯಂತ್ರ ಖರೀದಿಗೆ ಬಿಜೆಪಿ ಹೊನ್ನಾವರ ಮಂಡಲದ ವತಿಯಿಂದ 5 ಲಕ್ಷ ರೂ. ದೇಣಿಗೆಯನ್ನು ಶಾಸಕ ದಿನಕರ ಶೆಟ್ಟಿ ಶುಕ್ರವಾರದಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ರಾಜೇಶ ಕಿಣಿಯವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಸರಕಾರಿ ಆಸ್ಪತ್ರೆಗೆ ಹೊಸ ಡಯಾಲಿಸಿಸ್ ಯಂತ್ರ ಅಗತ್ಯವಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದರು. ಹೊಸ ಯಂತ್ರಕ್ಕೆ ಆರುಲಕ್ಷ ರೂ. ಗಳಷ್ಟಿದ್ದು ಐದು ಲಕ್ಷ ರೂ.ಗಳನ್ನು ಬಿಜೆಪಿ ಹೊನ್ನಾವರ ಮಂಡಲದ ಕಾರ್ಯಕರ್ತರ ವತಿಯಿಂದ ನೀಡಲಾಗಿದೆ. ಇನ್ನು ಎರಡು ಮೂರು ದಿನಗಳಲ್ಲಿ ಹೊಸ ಡಯಾಲಿಸಿಸ್ ಯಂತ್ರವನ್ನು ಆಸ್ಪತ್ರೆಯ ವೈದ್ಯರು ತರಿಸುವರು ಎಂದು ಹೇಳಿದರು.
ಲಸಿಕೆ ವಿತರಣೆ ಸಮಸ್ಯೆಯ ಕುರಿತು ಚರ್ಚೆ ನಡೆಸಿದ ಅವರು ಪಟ್ಟಣ ಪಂಚಾಯಿತಿಯಲ್ಲಿ ಅಧ್ಯಕ್ಷ ಶಿವರಾಜ ಮೇಸ್ತ ಹಾಗೂ ಮಾರ್ಥೋಮಾ ಶಾಲೆಯಲ್ಲಿ ರಾಜು ಭಂಡಾರಿ ಮತ್ತು ವಿಜು ಕಾಮತ ಟೋಕನ್ ನೀಡುವ ಕಾರ್ಯ ನಿರ್ವಹಿಸುವರು ಎಂದು ತಿಳಿಸಿದರು.
ಲಸಿಕೆ ಸಮಸ್ಯೆ ಹೊನ್ನಾವರದಲ್ಲಷ್ಟೇ ಅಲ್ಲ ಕುಮಟಾದಲ್ಲೂ ನಡೆಯುತ್ತಿದೆ. ಕೆಲವು ಮಂದಿ ದುಷ್ಟ ಶಕ್ತಿಗಳು, ಕೆಲಸವಿಲ್ಲದವರು ಬಿಜೆಪಿ ಪಕ್ಷಕ್ಕೆ ಕೆಟ್ಟ ಹೆಸರು ಬರಬೇಕು ಎಂಬ ಉದ್ದೇಶದಿಂದ ಏನೋ ಕ್ರಿಯೇಟ್ ಮಾಡಿ ಲಸಿಕೆ ಕೊಡುವಲ್ಲಿ ಹೋಗಿ ನಿಲ್ಲುವುದು, ಫೋಟೋ ತೆಗೆಸಿಕೊಳ್ಳುವುದು, ತಾವೇ ವ್ಯಾಕ್ಸಿನ್ ತಂದವರಂತೆ ಫೋಸ್ ಕೋಡುವುದನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ತಾನೂ ಮಾಜಿ ಶಾಸಕನಾಗಿದ್ದವನೇ. ಆದರೆ ನಾನು ಸುಮ್ಮಸುಮ್ಮನೆ ಹೋಗಿ ಆರೀತಿ ಕೆಲಸ ಮಾಡಿಲ್ಲ. ಹಿಂದಿನ ಶಾಸಕಿ ಶಾರದಾ ಶೆಟ್ಟಿಯವರಾಗಿದ್ದರು. ನಾನು ಎಲ್ಲಿಯೂ ಅವರ ಕೆಲಸಗಳಿಗೆ ತೊಂದರೆ ಕೊಟ್ಟಿಲ್ಲ. ಹೀಗಾಗಿ ಜನರು ನನ್ನಮೇಲೆ ಈ ಚುನಾವಣೆಯಲ್ಲಿ ಪ್ರೀತಿ ತೋರಿಸಿದ್ದಾರೆ ಎಂದರು.
ಆದರೆ ಈ ಸಲ ವಿರೋಧಿಗಳು ಸುಮ್ಮಸುಮ್ಮನೆ ವ್ಯಾಕ್ಸಿನ್ ಕೊಡುವುದರಲ್ಲಿ, ಫುಡ್ ಕಿಟ್ ಕೊಡುವುದರಲ್ಲಿ ಗಲಾಟೆ ಮಾಡುತ್ತಾರೆ. À ಚುನಾವಣೆ ಹತ್ತಿರ ಬರುತ್ತಿರುವುದರಿಂದ ಈಗೀU ನಾನು ಏನು ಮಾÀಡಲಿಕ್ಕೆ ಹೋದರೂ ಅವರಿಗೆ ಕಣ್ಣಿಗೆ ಕಾಣುತ್ತಿದೆ. ಇಷ್ಟು ವರ್ಷ ಕಾಣುತ್ತಿರಲಿಲ್ಲ ಎಂದು ಆಕ್ಷೇಪಿಸಿದರು.
ಬಿಜೆಪಿ ಕಾರ್ಯಕರ್ತರು ಪ್ರಧಾನಿ ಮೋದಿಯವರ ಉಜ್ವಲಗ್ಯಾಸ್ ಸಿಲಿಂಡರ್ ಕೊಡುವ ಕಾರ್ಯಕ್ರವನ್ನು ಎಲ್ಲ ದಾಖಲೆ ಪತ್ರಗಳನ್ನು ಪಡೆದುಕೊಂಡು ದಾಸ್ತಾನು ಇರುವಲ್ಲಿಂದ ಜನರ ಮನೆಬಾಗಿಲಿಗ ಉಚಿತವಾಗಿ ಮುಟ್ಟಿಸುವ ಕೆಲಸವನ್ನು ಮಾಡಿದ್ದೇವೆ. 8 ಕೋಟಿ ಫಲಾನುಭವಿಗಳಿಗೆ ಸೇವೆ ಕೊಟ್ಟಿದ್ದೇವೆ. ವಿದ್ಯುತ್ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಸೇರಿದಂತೆ ಬೇರೆಬೇರೆ ಸೇವೆಗಳನ್ನು ಕೊಟ್ಟಿದ್ದೇವೆ. ನೆರೆ ಬಂದಾಗ ಮನೆಗೆ ನೀರು ಹೊಕ್ಕಿದವರಿಗೆ ಹತ್ತು ಸಾವಿರ ರೂ.ಗಳನ್ನು ಕೊಡುವ ಕೆಲಸ ಮಾಡಿದ್ದೇವೆ. ಅದಕ್ಕಾಗಿ ಅವರು ತಹಸೀಲ್ದಾರರ ಕಚೇರಿಗೆ ಓಡಾಡುವಂತೆ ಮಾಡಿಲ್ಲ.
ಇಷ್ಟು ಒಳ್ಳೆಯ ರೀತಿಯಿಂದ ಕೆಲಸ ಮಾಡಿದರೂ ಸಹ ಹುಳುಕು ಹುಡುಕುವ ಕೆಲಸವನ್ನು ನಮ್ಮ ವಿರೋಧಿಗಳು ಮಾಡುತ್ತಿದ್ದಾರೆ. ಅದನ್ನು ಖಂಡಿಸುತ್ತೇನೆ ಎಂದರು.
ಜಿಲ್ಲೆಗೆ ಸಿಎಂ ಬವರಾಜ ಬೊಮ್ಮಾಯಿಯವರು ಬಂದಾಗ ಗಮನಕ್ಕೆ ತಂದು ಮೀನುಗಾರರಿಗಾಗಿ ಒಂಬತ್ತು ಸಾವಿರ ಡೋಸ್ ಲಸಿಕೆಯನ್ನು ಜಿಲ್ಲೆಗೆ ತರಿಸುವ ಕೆಲಸ ಮಾಡಿದ್ದೇನೆ. ನಂತರ ಸಚಿವ ಅಶ್ವಥ್ಥನಾರಾಯಣರವರ ಮೂಲಕ ಒಂದುಸಾವಿರ ಡೋಸ್ ತಂದು ಗೋಕರ್ಣ ಭಾಗದಲ್ಲಿ ಉಚಿತವಾಗಿ ನೀಡಲಾಗಿದೆ. ವಾರದ ಹಿಂದೆ ಮೂರು ಸಾವಿರ ಡೋಸ್ ಹೆಚ್ಚುವರಿಯಾಗಿ ತರಿಸಿ ಹೊನ್ನಾವರಕ್ಕೆ ಒಂದುಸಾವಿರ, ಕುಮಟಾಕ್ಕೆ ಎರಡು ಸಾವಿರ ಡೋಸ್ ಕೊಡಲಾಗಿದೆ. ನಿನ್ನೆ ಮತ್ತೆ ಸಿಎಂ ಅವರ ಬಳಿ ಮನವಿ ಮಾಡಿದ್ದು ಐದು ಸಾವಿರ ಡೋಸ್ ಹೆಚ್ಚುವರಿ ಲಸಿಕೆ ಮಂಜೂರಿ ಮಾಡಿದ್ದಾರೆ, ಡೆಲ್ ಕಂಪನಿಯವರು ಒಂದು ಸಾವಿರ ಡೋಸ್ ಕೊಡಲು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.
ತಾಲೂಕಾ ಆರೋಗ್ಯಾಧಿಕಾರಿ ಡಾ. ಉಷಾ ಹಾಸ್ಯಗಾರ, ಬಿಜೆಪಿ ಹೊನ್ನಾವರ ಮಂಡಲದ ಅಧ್ಯಕ್ಷ ರಾಜು ಭಂಡಾರಿ. ಪ.ಪಂ. ಅಧ್ಯಕ್ಷ ಶಿವರಾಜ ಮೇಸ್ತ, ಸದಸ್ಯರಾದ ವಿಜು ಕಾಮತ, ವಿಶ್ವನಾಥ ಗೊಂಡ, ನಾಗರಾಜ ಭಟ್, ಸುಭಾಸ ಹರಿಜನ, ಮುಖಂಡರಾದ ಎಂ.ಎಸ್. ಹೆಗಡೆ ಕಣ್ಣಿಮನೆ, ಉಲ್ಲಾಸ ನಾಯ್ಕ, ರಘು ಪೈ ಮತ್ತಿತರರು ಉಪಸ್ಥಿತರಿದ್ದರು.
Leave a Comment