ಹೊನ್ನಾವರ ; ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರುನಾಡ ವಿಜಯ ಸೇನೆ ಮಂಕಿ ಹಡಿಕಲ್ ಭಾಗದ ಪದಾಧಿಕಾರಿಗಳ ಆಯ್ಕೆ ನಡೆಯಿತು. ಇದೇ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಗಿರೀಶ್ ನಾಯ್ಕ ಹಡಿಕಲ್ ಇವರನ್ನು ನೇಮಕ ಮಾಡಲಾಯಿತು.
ಮಂಕಿ ಹಡಿಕಲ್ ಯುವಘಟಕದ ಅಧ್ಯಕ್ಷರಾಗಿ ಗಜಾನನ ನಾಯ್ಕ, ಉಪಾಧ್ಯಕ್ಷರಾಗಿ ಯೋಗೇಶ್ ನಾಯ್ಕ, ಕಾರ್ಯದರ್ಶಿಯಾಗಿ ಕುಮಾರ್ ನಾಯ್ಕ, ಆಯ್ಕೆ ಮಾಡಲಾಯಿತು.ಈ ಸಂದರ್ಭದಲ್ಲಿ ಮಹೇಶ್ ಮೆಸ್ತ, ರಾಜೇಶ್ ನಾಯ್ಕ, ದಿಲೀಪ್ ನಾಯ್ಕ, ಸಂತೋಷ ನಾಯ್ಕ, ಮಾರುತಿ ನಾಯ್ಕ,ನವೀನ್ ನಾಯ್ಕ,ಗೌರೀಶ್ ನಾಯ್ಕ, ಪ್ರವೀಣ್ ನಾಯ್ಕ ಸದಸ್ಯರಾಗಿ ನೇಮಕ ಮಾಡಲಾಯಿತು.

ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷರಾದ ವಿನೋದ್ ನಾಯ್ಕ ರಾಯಲಕೇರಿ,ಜಿಲ್ಲಾ ಅಧ್ಯಕ್ಷ ವಿನಾಯಕ ಆಚಾರಿ,ಜಿಲ್ಲಾ ವಕ್ತಾರರಾದ ಶ್ರೀರಾಮ್ ಹೊನ್ನಾವರ, ತಾಲೂಕು ಗೌರವ ಅಧ್ಯಕ್ಷ ಸದಾನಂದ್ ಭಟ್,ಯುವ ಘಟಕ ಅಧ್ಯಕ್ಷ ರಾಘವೇಂದ್ರ ನಾಯ್ಕ,ತಾಲೂಕ ಪ್ರಧಾನ ಕಾರ್ಯದರ್ಶಿ ರಾಹುಲ್.ಜಿ.ಎಂ,ಉಪಸ್ಥಿತರಿದ್ದರು.
Leave a Comment