ಯಲ್ಲಾಪುರ : ಲಯನ್ಸ್ ಕ್ಲಬ್ ಜಾಗತಿಕ ಮಟ್ಟದಲ್ಲಿ ಉತ್ತಮ ಸಂಘಟನೆಹೊAದಿದ್ದು ,ತಾಲೂಕಿನಲ್ಲಿ ಹತ್ತು-ಹಲವು ಸೇವಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಈ ಸಂಘಟನೆಯಲ್ಲಿ ಕಾರ್ಯ ನಿರ್ವಹಿಸುವುದು ನನಗೆ ಹೆಮ್ಮೆಯೆ ನಿಸುತ್ತದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಪುನರಾಯ್ಕೆಯಾದ ಶ್ರೀಧರ ಶೆಟ್ಟಿ ಹೇಳಿದರು.

ಅವರು ಪಟ್ಟಣದ ಬಸ್ ನಿಲ್ಧಾಣ ಸಮೀಪದ ಏಕದಂತ ಕಟ್ಟಡದಲ್ಲಿ ನಡೆದ ಲಯನ್ಸ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದರು. ಕೋವಿಡ್ ಕಾರಣದಿಂದಾಗಿ ಕೆಲವು ಕಾರ್ಯಕ್ರಮಗಳು ಮುಂದೂಡಲ್ಪಟ್ಟಿವೆ.
ಸದ್ಯದಲ್ಲಿಯೇ ನಾನಾ ರಚನಾತ್ಮಕ, ಸೇವಾ ಕಾರ್ಯಗಳನ್ನು ಸಂಘಟಿಸುವ ಗುರಿ ಹೊಂದಲಾಗಿದೆ ಎಂದರು.
ಇಡಗುAದಿಯ ಸ್ನೇಹಸಾಗರ ವಸತಿ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಲಯನ್ ಎಸ್.ಎಲ್.ಭಟ್ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದ ಅವರು ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಗುಣವನ್ನು ನಾವು ಬೆಳೆಸಿಕೊಳ್ಳಬೇಕು. ಸೇವಾ ಮನೋಭಾವನೆಯಿಂದ ಮಾಡುವ ಕಾರ್ಯಗಳು ಸಾರ್ಥಕತೆಯ ಜೊತೆಗೆ ಸಾಫಲ್ಯತೆಯನ್ನು ತಂದುಕೊಡುತ್ತವೆ ಎಂದರು.
ಇದೇ ಸಂದರ್ಭದಲ್ಲಿ ಸದಸ್ಯರಿಗೆ ವಿವಿಧ ಜವಾಬ್ಧಾರಿಗಳನ್ನು ವಹಿಸಲಾಯಿತು. ಡಿಸ್ಟ್ರಿಕ್ಟ್ ಚೇರ್ ಪರ್ಸನ್ಸ್ ಆಗಿ ಲಯನ್ ಎಸ್.ಎಲ್.ಭಟ್ ಹಾಗೂ ಲಯನ್ ಶಾಂತಾರಾಮ ಹೆಗಡೆ ಆಯ್ಕೆಯಾದರು.
ಬೋರ್ಡ್ ಆಫ್ ಡೈರೆಕ್ಟರ್ ಆಗಿ ನಂದನ ಬಾಳಗಿ, ಶಾಂತಾರಾಮ ಹೆಗಡೆ, ನಾಗರಾಜ ನಾಯ್ಕ, ಉಪಾಧ್ಯಕ್ಷರಾಗಿಎಸ್.ಎನ್.ನಾಯ್ಕ್
ಮಂಜುನಾಥ ನಾಯ್ಕ್, ಕಾರ್ಯದಶೀಯಾಗಿ ಅಕ್ತರ್ ಅಲಿ ಪುನರಾಯ್ಕೆಯಾಗಿದ್ದು, ಖಜಾಂಚಿಯಾಗಿ ಸುರೇಶ ಬೋರ್ಕರ್
ಸದಸ್ಯತ್ವ ಸಮೀತಿಯ ಪ್ರಮುಖರಾಗಿ ಗೋಪಾಲ ನೇತ್ರೇಕರ್ ಆಯ್ಕೆಯಾದರು.
ಘನಶ್ಯಾಮ ಹೆಗಡೆ, ಶಿವಾನಂದ ಹೆಗಡೆ ವಿಶಾಲ್ ಬೀಡಿಕರ್, ಎಸ್.ಎಸ್.ಹಳ್ಳನ್ನವರ್ .
ಡಾ.ಸತೀಶ ಭಟ್, ವೀಣಾ ಭಟ್, ಭವ್ಯಾ ಶೆಟ್ಟಿ, ಸಂಧ್ಯಾ ಹೆಗಡೆ, ಮುಂತಾದವರು ಉಪಸ್ಥಿತರಿದ್ದರು.
ಕಾರ್ಯದರ್ಶಿಅಕ್ತರ್ ಅಲಿ ವಾರ್ಷಿಕ ವರದಿ ವಾಚಿಸಿದರು. ಮಂಜುನಾಥ ನಾಯ್ಕ ಸ್ವಾಗತಿಸಿದರು. ಖಜಾಂಚಿ ಸುರೇಶ ಬೋರ್ಕರ್ ವಂದಿಸಿದರು. ಶಾಂತಾರಾಮ ಹೆಗಡೆ ನಿರ್ವಹಿಸಿದರು.
Leave a Comment