ಹೊನ್ನಾವರ: ಗೇರುಸೊಪ್ಪಾ_ ಸಾಗರ ರಸ್ತೆ ನಿರ್ಮಣವಾದ ಕೆಲವೇ ದಿನದಲ್ಲಿ ಹದಗೆಟ್ಟಿದೆ. ಸಂಭದಿಸಿದ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಿ ಇಲ್ಲದಿದ್ದರೆ ನಮ್ಮ ಭಾಷೆ ಬೇರೆಯಾಗಲಿದೆ ಎಂದು ಶಾಸಕ ಸುನೀಲ ನಾಯ್ಕ ಗುಡುಗಿದರು.
ತಾಲೂಕ ಪಂಚಾಯತಿ ಸಭಾಭವನದಲ್ಲಿ ಭಟ್ಕಳ ಹೊನ್ನಾವರ ಶಾಸಕ ಸುನೀಲ ನಾಯ್ಕ ಅಧ್ಯಕ್ಷತೆಯಲ್ಲಿ ಕೆ.ಡಿಪಿ ಸಭೆಯಲ್ಲಿ ತಾಲೂಕಿನ ವಿವಿಧ ಇಲಾಖೆಯ ಪ್ರಗತಿ ಪರೀಶೀಲನೆ ನಡೆಯಿತು. ತಾಲಊಕಿನ ಹೆದ್ದಾರಿ ಸಮಸ್ಯೆ ಬಗ್ಗೆ ವಿಶೇಷ ಗಮನಹರಿಸಿದ ಶಾಸಕರು ಈ ಹಿಂದೆಯು ಹಲವು ರಸ್ತೆಗಳ ನಿರ್ವಹಣೆ ಸರಿ ಇಲ್ಲ ಎನ್ನುವ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ಗೇರುಸೊಪ್ಪಾದಿಂದ ಸಾಗರ ಮಾರ್ಗದ ರಾಷ್ಟ್ರೀಯ ಹೆದ್ದಾರಿಗೆ ಭೇಟಿ ನೀಡಿ ಕಾಮಗಾರಿ ಕುರಿತು ಎರಡು ದಿನದಲ್ಲಿ ವರದಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು. ಚಿಕ್ಕ ನೀರಾವರಿ ಇಲಾಖೆಯ ಅಡಿ ಚರ್ಚೆಯಲ್ಲಿ ಇಡಗುಂಜಿಯಿಂದ ಗುಣಮಂತೆಗೆ ಸರಬರಾಜುಗುವ ಏತನೀರಾವರಿ ಕಾಮಗಾರಿಯಲ್ಲಿ ಅನಧಿಕೃತವಾಗಿ ಇಡುಗುಂಜಿಯ ಎರಡು ಮನೆಯವರು ನೀರು ಪಡೆಯುತ್ತಿದ್ದಾರೆ. ಕೂಡುದಾದರೆ ಆ ಭಾಗದ ಎಲ್ಲರಿಗೂ ನೀಡಿ ಎಂದರು.
ಈ ಆರೋಪ ಅಧಿಕಾರಿಗಳು ಅಲ್ಲೆಗಳೆಯುವಾಗ ತಮ್ಮ ಮೊಬೈಲನಲ್ಲೆ ಇರುವ ಪೋಟೋ ಅಧಿಕಾರಿಗಳಿಗೆ ಪ್ರದರ್ಶಿಸಿದರು. ಇಂದೇ ಸ್ಥಳಕ್ಕೇ ಭೇಟಿ ನೀಡಿ ಪರೀಶೀಲನೆ ನಡೆಸಿ ಕ್ರಮಕೈಗೊಳ್ಳುವಂತೆ ಸೂಚಿಸಿದರು.
ಸರ್ವೇ ಇಲಾಖೆಯ ಚರ್ಚೆಯಲ್ಲಿ ಖಾಸಗಿ ಸರ್ವೆಗೆ ಅಧಿಕಾರಿಗಳು ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ತಾಲೂಕಿನಲ್ಲಿ 1372 ಅರ್ಜಿ ಸರ್ವೆಗೆ ಬಾಕಿ ಇದೆ. ಸರ್ಕಾರದ ಕಾಲಮಿತಿಯಲ್ಲಿ ಸರ್ವೆ ನಡೆಸಬೇಕಿದೆ. ಜನಸಾಮನ್ಯರಿಗೆ ಈ ಇಲಾಖೆ ಗಗನಕುಸುಮದಂತಿದೆ. ಯಾವೆಲ್ಲ ಅಧಿಕಾರಿಗಳು ಈ ರೀತಿಯಲ್ಲಿ ತೊಡಗಿದ್ದರೆ ಕ್ರಮ ಕೈಗೊಳ್ಳುದಾಗಿ ಎಚ್ಚರಿಸಿದರು.
ಆರೋಗ್ಯ ಇಲಾಖೆಯ ಚರ್ಚೆಯಲ್ಲಿ ಇಲಾಖೆಯ ಮಾಹಿತಿ ಪಡೆದು ಕೋವಿಡ್ ವಾಕ್ಸಿನ್ ಸ್ಥಿತಿಗತಿ ಪರಾಮರ್ಶೆ ನಡೆಸಿದರು. ಗ್ರಾಮೀಣ ಭಾಗವಾದ ಚಿಕ್ಕನಕೋಡ್ ಹಿರೈಬೈಲ್ ಭಾಗದಲ್ಲಿ ವಿಶೇಷ ವಾಕ್ಸಿನ್ ಅಭಿಯಾನ ನಡೆಸುವಂತೆ ಶಾಸಕರು ಸೂಚಿಸಿದರು. ಡಯಾಲಿಸಿಸ್ ಘಟಕ ಸಮಸ್ಯೆ ಬಗ್ಗೆ ಪ್ರಶ್ನಿಸಿದಾಗ ಬಿಜೆಪಿ ಮಂಡಲದ ದೇಣಿಗೆಯ ಬಗ್ಗೆ ಮಾಹಿತಿ ನೀಡಿ ಒಂದು ಲಕ್ಷ ಕೊರತೆಯ ಬಗ್ಗೆ ತಿಳಿಸಿದಾಗ ಉಳಿದ ಹಣ ನೀಡುವುದಾಗಿ ಭರವಸೆ ನೀಡಿದರು.

ಶಿಕ್ಷಣ ಇಲಾಖೆಯ ಚರ್ಚೆಯಲ್ಲಿ ತಾಲೂಕಿನ 39 ಪ್ರೌಡಶಾಲೆಯಲ್ಲಿ ತರಗತಿಗಳು ಆರಂಭವಾಗಿದೆ. ಶಿಕ್ಷಕರು ಸಕಲ ಸಿದ್ದತೆಯೊಂದಿಗೆ ತರಗತಿ ಆರಂಭಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ತಾಲೂಕಿನ 195 ಮನೆಗಳಿಗೆ ಸೌಭಾಗ್ಯ ಯೋಜನೆಯಡಿ ವಿದ್ಯುತ್ ಪೂರೈಕೆಯ ಗುರಿ ಹೊಂದಾಲಾಗಿದೆ ಎಂದು ಹೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದರು. ಹಾಡಗೇರಿ ಬಾಗದಲ್ಲಿ ವಿದ್ಯುತ್ ಸಮಸೈ ಬಗೆಹರಿಸುವಂತೆ ಶಾಸಕರು ಆದೇಶಿಸಿದರು. ಸಮಾಜಕಲ್ಯಾಣ ಇಲಾಖೆಯ ಚಚೆರ್Àಯಲ್ಲಿ ತಾಲೂಕಿನ 56 ಫಲಾನುಭವಿಯ ಹಕ್ಕುಪತ್ರ ಮಂಜೂರಾತಿ ಹಂತದಲ್ಲಿದ್ದು, 12,091 ಅರ್ಜಿಗಳ ಪೈಕಿ 9800ರಷ್ಟು ಅರ್ಜಿ ತಿರಸ್ಕøತವಾಗಿದೆ ಎಂದು ಸಭೆಗೆ ಮಾಹಿತಿ ನೀಡುತ್ತಿದ್ದಂತೆ 6 ತಿಂಗಳೊಳಗೆ ಮತ್ತೊಮ್ಮೆ ದಾಖಲಾತಿ ಕ್ರೋಡಿಕರಿಸಿ ಎಲ್ಲಾ ಅರ್ಜಿ ವಿಲೇವಾರಿ ಮಾಡುವಂತೆ ತಿಳಿಸಿದರು.
ಪಿ.ಡಬ್ಲೂಡಿ ಇಲಾಖೆಯ ಚರ್ಚೆಯಲ್ಲಿ ಖರ್ವಾ ರಸ್ತಯೆ 3 ಕೀಮಿ ರಸ್ತೆ ಮಂಜೂರಾಗಿದ್ದು ಒಂದು ತಿಂಗಳಲ್ಲಿ ಕಾಮಗಾರಿ ಆರಂಭಿಸುವ ಜೊತೆ ಮುಂದಿನ ಹಂತದ ರಸ್ತೆಗೆ ಹಣ ಮಂಜೂರಾತಿಯ ಬಗ್ಗೆ ಮಾಹಿತಿ ನೀಡಿದರು. ಮಂಕಿಯಲ್ಲಿ ಗೋಕಳ್ಳತನ ಸಿಸಿಟಿವಿ ದೃಶ್ಯ ದಾಖಲಾದ ಬಗ್ಗೆ ಚರ್ಚೆ ನಡೆದು ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು. ಅಕ್ರಮ ಗೋಸಾಗಟ ತಡೆಯಲು ಚೆಕಪೋಸ್ಟ ಹೆಚ್ಚುವರಿ ಮಾಡುವಂತೆ ಪೋಲಿಸರಿಗೆ ಸೂಚಿಸಿದರು.
ಕಂದಾಯ ಇಲಾಖೆಯ ಚರ್ಚೆಯಲ್ಲಿ ಪಾಲ್ಗೊಂಡ ತಹಶೀಲ್ದಾgರಿಗೆÉ ನೆರಹಾವಳಿ ಎದುರಿಸಲು ಸಕಲ ಸಿದ್ದತೆಯ ಜೊತೆ ಪರಿಹಾರ ವಿತರಣೆ ಸಮರ್ಪಕವಾಗುವಂತೆ ಸೂಚಿಸಿದರು. ಜನಸ್ನೇಹಿ ಆಡಳಿತ ನೀಡಲು ಕಂದಾಯ ಇಲಾಖೆಯ ಸಿಬ್ಬಂದಿಗಳು ಸಾರ್ವಜನಿಕರ ಕುಂದುಕೊರತೆ ಆಲಿಸಿ ಸಕಾಲದಲ್ಲಿ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಆದೇಶಿಸುವಂತೆ ಶಾಸಕರು ತಿಳಿಸಿದರು. ಆರ.ಟಿ.ಓ ಕಛೇರಿಯಲ್ಲಿ ದಲ್ಲಾಳಿಗಳ ಕಾಟ ವಿಪರೀತವಾಗಿದೆ. ಸಾಮನ್ಯ ಜನರಿಗೂ ಅನೂಕೂಲವಾಗುವಂತೆ ಕತ್ಯರ್ವ ನಿರ್ವಹಿಸಿ ಎಂದು ಸಾರಿಗೆ ಆಯುಕ್ತರಿಗೆ ಸೂಚಿಸಿದರು.
ಸಾರಿಗೆ, ಕೃಷಿ, ಹೈನುಗಾರಿಕೆ, ತೋಟಗಾರಿಕೆ, ಮೀನುಗಾರಿಕೆ, ಬಂದರು, ಇಲಾಖೆಯ ಅಧಿಕಾರಿಗಳು ಇಲಾಖಾವಾರು ಮಾಹಿತಿ ನೀಡಿದರು.
ತಹಶೀಲ್ದಾರ ನಾಗರಾಜ ನಾಯ್ಕಡ್, ತಾಲೂಕ ಆಡಳಿತಧಿಕಾರಿ ವಿನೋಧ ಅಣ್ವೇಕರ್, ತಾಲೂಕ ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ, ಯೋಜನಾ ಸಮಿತಿ ಸದಸ್ಯ ಸತೀಶ ಹೆಬ್ಬಾರ, ಮಂಝುನಾಥ ನಾಯ್ಕ, ಮಂಜುಳಾ ಗೌಡ, ಎಂ.ಎಸ್.ಹೆಗಡೆ, ಸುಬ್ರಾಯ ನಾಯ್ಕ, ವಿ.ಎನ್.ಭಟ್ ಉಪಸ್ಥಿತರಿದ್ದರು.
Leave a Comment