
ಯಲ್ಲಪುರ: ಪಟ್ಟಣದ ಗೌಸಿಯಾ ಮಸೀದಿ ಜಮಾತಿನ ವಿರುಧ್ಧ ಮಾಡಿದ ಅಪಾದನೆ ಸತ್ಯಕ್ಕೆ ದೂರವಾದ ಸಂಗತಿಯಾಗಿದೆ.ಇಲ್ಲಿ ವಕ್ಫ ಮಂಡಳಿಯಿAದ ನೇಮಿಸಿರುವ ಆಡಳಿತಾಧಿಕಾರಿ ಆಡಳಿತ ನೋಡಿಕೊಳ್ಳುತ್ತಿದ್ದು , ವ್ಯವಹಾರ ನಿಯಮ ಬದÀ್ಧವಾಗಿಯೇ ಇದೆ ಎಂದು ಜುಮ್ಮಾ ಮಸೀದಿ ಅಧ್ಯಕ್ಷ ಫೈರೋಜ್ ಸಯ್ಯದ ಹೇಳಿದರು. ಅವರು ಪತ್ರಿಕಾ ಗೋಷ್ಠೀ ಯಲ್ಲಿ ಮಾತನಾಡಿ ತಾಮೀರ ಕೋ ಅಫರೇಟಿವ್ ಸೋಸೈಟಿ ಮಾಜಿ ಅಧ್ಯಕ್ಷ ಮಹಮ್ಮದ್ ಗೌಸ್ ಸ್ವಯಂ ಘೋಷಿತ ಮುಸ್ಲಿಂ ಮುಖಂಡ ಎಂದು ಹೇಳಿಕೊಂಡು ನಮ್ಮ ಸಮುದಾಯದಲ್ಲಿ ಒಡಕನ್ನುಂಟು ಮಾಡುತ್ತಿದ್ದಾರೆ. ನಮ್ಮಲ್ಲಿ ಯಾವದೇ ಒಬ್ಬ ವ್ಯಕ್ತಿ ಮುಖಂಡರಾಗಿರದೇ ಸಮಾಜದ ಜಮಾತುಗಳೇ ಮುಖಂಡರಾಗಿರುತ್ತಾರೆ.
ಮಹಮ್ಮದ್ ಗೌಸ್ ಇವರು ಗೌಸಿಯಾ ಮಸೀದಿ ಜಮಾತ ವಿರುಧ್ಧ ಮಾಡಿರುವ ಆರೋಪಗಳೇಲ್ಲವನ್ನು ಏಳು ದಿನದೊಳಗಾಗಿ ಸಾಬೀತು ಪಡಿಸತಕ್ಕದ್ದು .ಒಂದು ವೇಳೆ ಸಾಬೀತು ಪಡಿಸಲು ವಿಫಲರಾದರೆ ತಾವು ಪೂರ್ವಾಗ್ರಹ ಪೀಡಿತದಿಂದ ಆರೋಪ ಮಾಡಿದ್ದಾಗಿ ಸತ್ಯಕ್ಕೆ ದೂರವಾದ ಸಂಗತಿಯೆAದು ಒಪ್ಪಿಕೊಂಡು ಪತ್ರಿಕೆ ಮೂಲಕ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಇಲ್ಲದಿದ್ದರೆ ಅವರ ವಿರುದ್ಧ ವಕ್ಫ ಮಂಡಳಿಯಿAದ ನಿಯಮಾನುಸಾರ ಕಾನೂನು ಬದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.ಪಟ್ಟಣದ ನಾಲ್ಕು ಮಸೀದಿಗಳ ಜಮಾತನ ಪ್ರಮುಖರು ಪತ್ರಿಕಾಗೋಷ್ಠೀ ನಡೆಸಿ ಮಹಮ್ಮದ್ ಗೌಸ್ ಅವರ ನಡೆಯನ್ನು ಖಂಡಿಸಿದ್ದಾರೆ.
ಈ ಪತ್ರಿಕಾಗೋಷ್ಠೀಯಲ್ಲಿ ಗೌಸಿಯಾ ಮಸೀದಿಯ ಪರ ಮಕ್ಬುಲ್ ಹಲ್ವಾಯಿಗರ್,ಜುಮ್ಮಾ ಮಸೀದಿ ಕಾರ್ಯದರ್ಶಿ ಇರ್ಪಾನ್ ಕಾನಳ್ಳಿ, ಗರೀಬನ್ ನವಾಜ್ ಮಸೀದಿ ಅಧ್ಯಕ್ಷ ನಿಸ್ಸಾರ್ ಶೇಖ್,ಕಾರ್ಯದರ್ಶಿ ಅಬ್ದುಲ್ ಅಲಿ,ಬಿಲಾಲ ಮಸೀದಿಯ ಅಧ್ಯಕ್ಷ ಅಬ್ದುಲ್ ಖಾದರ್ ಮಾಂಡ್ಲಿಕ್,ಕಾರ್ಯದರ್ಶಿ ಮಹಮ್ಮದ್ ಶೇಖ ಇದ್ದರು.
Leave a Comment