ಹೊನ್ನಾವರ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಸಕ್ತ ವರ್ಷದ ವಿವಿಧ ಕೊರ್ಸಗಳಿಗೆ ಪ್ರವೇಶಾತಿ ಪ್ರಾರಂಭವಾಗಿದೆ.ಕರ್ನಾಟಕ ವಿಶ್ವವಿದ್ಯಾಲಯದ ಧಾರವಾಡರವರ ಸುತ್ತೋಲೆಯಂತೆ 2021-22ನೆ ಸಾಲಿನ 1ನೆ ಸೆಮಿಸ್ಟರಗೆ ಪ್ರವೇಶಾತಿ ಪಡೆಯಲು ದಂಡ ರಹಿತವಾಗಿ ಸಪ್ಟೆಂಬರ್ ೪ ಕೊನೆಯ ದಿನವಾಗಿದೆ.
ತದನಂತರ ದಂಡ ಸಹಿತ ಪ್ರವೇಶಾತಿ ನೀಡಲಾಗುವುದು. ಆಸಕ್ತ ಅಭ್ಯರ್ಥಿಗಳು ಅಗಸ್ಟ 26ರಿಂದ ಕಾಲೇಜಿಗೆ ಆಗಮಿಸಿ ಅರ್ಜಿ ಪಡೆದು, ನಿಯಮಾನುಸಾರ ಪ್ರವೇಶ ಪಡೆಯಲು ತಿಳಿಸಿದ್ದಾರೆ. ಕಾಲೇಜಿನಲ್ಲಿ ಲಭ್ಯವಿರುವ ಕೋರ್ಸುಗಳಾದ ಬಿ.ಎ., ಬಿ.ಕಾಂ,ಬಿ.ಎಸ್ಸಿ, ಬಿ.ಬಿ.ಎ,ಬಿ.ಸಿ.ಎ ಕೊರ್ಸುಗಳು ಲಭ್ಯವಿದೆ.

ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿ (NEP) ರ ಪ್ರಕಾರ ಕರ್ನಾಟಕ ವಿಶ್ವವಿದ್ಯಾಲಯ ನಿಗದಿ ಪಡಿಸಿದ ಪಠ್ಯಕ್ರಮ ಹಾಗೂ ವಿಷಯ ಮಾನ್ಯತೆ ಪ್ರಕಾರ ವಿಷಯಗಳ ವ್ಯಾಸಂಗಕ್ಕೆ ಅವಕಾಶವಿದೆ. ಎಂದು ಕಾಲೇಜಿನ ಪ್ರಾರ್ಚಾರ್ಯೆ ಡಾ. ಸುಮಂಗಲಾ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment