ಬೆಳಗಾವಿ (ಘಟಪ್ರಬಾ) : ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಕ್ರೊರಿಗಳು ಸಾಮೂಹಿಕ ಅತ್ಯಾಚಾರವೆಸಗಿ ಅಟ್ಟಹಾಸ ಮೆರೆದಿರುವ ಘಟನೆಗೂ ಮೊದಲೇ ಅಂತಹುದೇ ಹೀನ ಕೃತ್ಯವೊಂದು ಮೂಡಲಗಿ ತಲೂಕಿನ ಗ್ರಾಮವೊಂದರಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. 16 ವರ್ಷದ ಅಪ್ರಾಪ್ತೆ (9ನೇ ತರಗತಿ) ಯನ್ನು ಐವರು ಪುಸಲಾಯಿಸಿ ಕರೆದುಕೊಂಡು ಹೋಗಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ.
ಘಟಪ್ರಭಾ ಪೊಲೀಸ್ ಠಾಣೆ ವ್ಯಪ್ತಿಯಲ್ಲಿ ಜುಲೈ 12 ರಂದು ನಡೆದ ಘಟನೆ ಇದಗಿದ್ದು. ಮೈಸೂರು ಪ್ರಕರಣದ ನಂತರ ಬೆಳಕಿಗೆ ಬಂದಿದೆ ಪೋಕ್ಸೋ ಕಾಯ್ದೆಯಡಿ ನಾಲ್ವರನ್ನು ಬಂಧಿಸಿರುವ ಪೊಲೀಸರು, ತಲೆಮರೆಸಿ ಕೊಂಡಿರುವ ಇನ್ನೋರ್ವನ ಬಂಧನಕ್ಕೆ ಬಲೆ ಬೀಸಿದ್ದಾರೆ.
ಘಟನೆ ವಿವರ : ಬಟ್ಟೆ ಹೋಲಿಸಲು ಊರಿಗೆ ಬಂದು, ಮರಳಿ ತೋಟದ ಮನೆಗೆ ಹೋಗುತ್ತಿದ್ದ ಅಪ್ರಪ್ತೆಯನ್ನು ಅದೇ ಗ್ರಾಮದ ಐವರು ಹಿoಬಾಲಿಸಿದ್ದಾರೆ. ಸುತ್ತಲು ಯಾರು ಇಲ್ಲದ್ದನ್ನು ಗಮನಿಸಿ ಅತ್ಯಾಚಾರ ಎಸಗಿದ್ದಾರೆ. ಈ ವಿಷಯ ಬಹಿರಂಗಪಡಿಸಿದ್ದರೆ, ಕುಟುಂಬಸ್ಥರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಹಾಗಾಗಿ ಹೆದರಿ ಬಾಲಕಿ ಈ ವಿಷಯವನ್ನು ಮನೆಯಲ್ಲಿ ಯಾರಿಗೂ ಹೇಳದಯೇ 4-5 ದಿನ ಕಳೆದಿದ್ದಾಳೆ ಆದರೆ ಬಾಲಕಿ ಮಾನಸಿಕವಾಗಿ ಕುಗ್ಗುತ್ತಿರುವುದನ್ನು ಗಮನಿಸಿದ ಮನೆಯವರು ವಿಚಾರಿಸಿದಾಗ ಅತ್ಯಾಚಾರ ನಡೆದಿರುವುದನ್ನು ತಿಳಿಸಿದ್ದಾಳೆ.
ಬಾಲಕಿ ಪಾಲಕರು ಮಕ್ಕಳ ಸಹಾಯವಾಣಿ 1098 ಕ್ಕೆ ಕರೆ ಮಾಡಿ ಅತ್ಯಾಚಾರ ನಡೆದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಬಳಿಕ ಸಂತ್ರಸ್ತೆ ಹಾಗೂ ಪಾಲಕರನ್ನು ಸಹಾಯವಾಣಿ ಕೇಂದ್ರದ ಅಧಿಕಾರಿಗಳು ಬೆಳಗಾವಿಗೆ ಕರೆಸಿ. ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರುಪಡಿಸಿ ವಿಚಾರಣೆ ಮಾಡಿದ್ದಾರೆ. ಸದ್ಯ ಬೆಳಗಾವಿಯ ಉಜ್ವಲ ಮಹಿಳಾ ಪುನರ್ವಸತಿ ಕೇಂದ್ರದಲ್ಲಿ ಬಾಲಕಿ ಆಶ್ರಯ ಕಲ್ಪಿಸಲಾಗಿದೆ.
Leave a Comment