
ಯಲ್ಲಾಪುರ: ದೇಶದ ಸಂಸ್ಕೃತ ವಿದ್ವಾಂಸರಿಗೆ ಕೊಡಮಾಡುವ ಮಹಾರಾಷ್ಟ್ರ ಸರ್ಕಾರದ ಪ್ರತಿಷ್ಠಿತ ಮಹಾಕವಿ ಕಾಳಿದಾಸ ಸಂಸ್ಕೃತ ಸಾಧನಾ ಪ್ರಶಸ್ತಿಗೆ
ತಾಲೂಕಿನ ಉಮ್ಮಚಗಿ ಶ್ರೀ ಮಾತಾ ಸಂಸ್ಕೃತ ಮಹಾವಿದ್ಯಾಲಯದ ಭೂತಪೂರ್ವ ಪ್ರಾಚಾರ್ಯರಾದ ವಿದ್ವಾನ್ ಗಜಾನನ ಭಟ್ ಅವರು ಭಾಜನರಾಗಿದ್ದಾರೆ. ಇತ್ತೀಚೆಗೆ ಮಹಾರಾಷ್ಟçದ ನಾಗ್ಪುರ ದ ರಾಮ್ಟೆಕ್ನ ಕವಿಕುಲಗುರು ಕಾಳಿದಾಸ್ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರಧಾನ ಮಾಡಲಾಯಿತು.
ಮಹಾರಾಷ್ಟ್ರ ಸರ್ಕಾರದ ಉನ್ನತ ಶಿಕ್ಷಣ ಸಚಿವರಾದ ಉದಯ್ ಸಾವಂತ್ ಅವರು ನಾಗಪುರದ ಕವಿ ಕುಲ ಗುರು ಕಾಳಿದಾಸ ಸಂಸ್ಕೃತ ವಿಶ್ವ ವಿದ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ವಿದ್ವಾನ್ ಗಜಾನನ ಭಟ್ ಹಾಗೂ ಶರಾವತಿ ಭಟ್ ದಂಪತಿಯನ್ನು ಗೌರವಿಸಿ ಪ್ರಶಸ್ತಿ ಪ್ರಧಾನ ಮಾಡಿದರು.
ಮಹಾರಾಷ್ಟ್ರ ಸರ್ಕಾರವು ಸಂಸ್ಕೃತ ಭಾಷೆ ಹಾಗೂ ಸಂಸ್ಕೃತ ಸಂಶೋಧನೆ, ಪ್ರಕಟಣೆ, ಅಧ್ಯಯನ ಮತ್ತು ಬೋಧನೆ ಕ್ಷೇತ್ರದಲ್ಲಿ ಗಮನಾರ್ಹ ಕೆಲಸ ಮಾಡಿದ ದೇಶದ ವಿದ್ವಾಂಸರಿಗೆ ವಾರ್ಷಿಕವಾಗಿ ನೀಡಲಾಗುತ್ತದೆ.
ರಾಮಟೆಕ್ ಸಂಸದ ಕೃಪಾಲ್ ತುಮನೆ ಮುಖ್ಯ ಅತಿಥಿಯಾಗಿದ್ದರು. ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿ ಶ್ರೀನಿವಾಸ ವರಖೇಡಿ ಉಪಸ್ಥಿತರಿದ್ದರು.
ಮಾಜಿ ಉಪಕುಲಪತಿ ಪಂಕಜ್ ಚಂಡೆ, ಮಹರ್ಷಿ ಪಾಣಿನಿ ಸಂಸ್ಕೃತ ಮತ್ತು ವೈದಿಕ್ ವಿಶ್ವವಿದ್ಯಾಲಯದ ಉಪಕುಲತಿ ವಿಜಯಕುಮಾರ್, ಕೆಕೆಎಸ್ಯು ಡೀನ್ ನಂದ ಪುರಿ, , ಕೆಕೆಎಸ್ಯು ಮತ್ತು ಸಂಸ್ಕೃತ ಸಾಧನಾ ಪ್ರಶಸ್ತಿ ಸಮಿತಿಯ ಕಾರ್ಯದರ್ಶಿ ಕವಿತಾ ಹೊಳೆ ಮುಂತಾದವರು ಉಪಸ್ಥಿತರಿದ್ದರು.
Leave a Comment