ಹೊನ್ನಾವರದಲ್ಲಿ; ವಾಹನದಲ್ಲಿ ಅಕ್ರಮವಾಗಿ ಗೊ ಮಾಂಸ ಸಾಗಟ ಮಾಡುತ್ತಿದ್ದವರನ್ನು ವಾಹನ ಸಮೇತ ಇರ್ವರು ಆರೋಪಿತರನ್ನು ಪೋಲಿಸರು ಬಂಧಿಸಿದ್ದಾರೆ ಖಚಿತ ಮಾಹಿತಿ ಮೇರೆಗೆ 170 ಕೇ.ಜಿ ಗೋಮಾಂಸವನ್ನು ಮಾರುತಿ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾಗ ಪಟ್ಟಣದ ಗೇರುಸೊಪ್ಪ ಸರ್ಕಲ್ ಬಳಿ ಸಿಕ್ಕಿ ಬಿದ್ದಿದ್ದಾರೆ.
ಹಾವೇರಿಯ ಹಾನಗಲ್ ಮೂಲದ ಮೌಲಾನಾ ತೋಟದ್ ಹಾಗೂ ಮಂಜುನಾಥ ಓಲೇಕಾರ್ ಬಂಧಿತ ಆರೋಪಿಗಳು. ಇವರು ಹಾನಗಲ್ನಿಂದ ಹೊನ್ನಾವರ ಮಾರ್ಗವಾಗಿ ಮುರ್ಡೇಶ್ವರ ಕಡೆಗೆ ಬರೋಬ್ಬರಿ 170 ಕೇ.ಜಿ ಗೋಮಾಂಸವನ್ನು ಅಕ್ರಮವಾಗಿ ಸಾಗಾಟ ಮಾಡಲು ಸ್ಕೆಚ್ ಹಾಕಿದ್ದರು.
ಈ ವೇಳೆ ಗೇರುಸೊಪ್ಪ ಚೆಕ್ಪೋಸ್ಟ್ ಬಳಿ ವಾಹನ ತಪಾಸಣೆ ಸಂದರ್ಭದಲ್ಲಿ ಪೊಲೀಸರಿಂದ ತಪ್ಪಿಸಿಕೊಂಡು ಬಂದಿದ್ದರು ಎನ್ನಲಾಗಿದೆ. ತಕ್ಷಣ ಕಾರ್ಯಪ್ರವರ್ತರಾದ ಪೊಲೀಸರು ಗೇರುಸೊಪ್ಪ ಸರ್ಕಲ್ ಬಳಿ ವಾಹನವನ್ನು ತಡೆದಿದ್ದು, ವಾಹನ ಸಮೇತ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment