ಹೊನ್ನಾವರ : ನನ್ನ ಕ್ಷೇತ್ರದಲ್ಲಿ ಯಾವುದೇ ಸಮಾಜದ ಯಾವುದೇ ಜಾತಿಯ, ಯಾವುದೇ ಧರ್ಮದ ಪ್ರತಿಭಾವಂತ ವಿದ್ಯಾರ್ಥಿಯೂ ತನ್ನ ಬಡತನದ ಕಾರಣಕ್ಕೆ ಶಿಕ್ಷಣವನ್ನು ಮೊಟಕುಗೊಳಿಸಬಾರದು. ಬಯಸಿದ ಕೋರ್ಸ ಅನ್ನು ಚೆನ್ನಾಗಿ ಓದುವುದಷ್ಟೇ ಅವರ ಕೆಲಸ ಓದಿಸುವ ಜವಾಬ್ದಾರಿ ನನ್ನದು ಎಂದು ಮಾಜಿ ಶಾಸಕ ಮಂಕಾಳ ವೈದ್ಯ ಕ್ಷೇತ್ರದ ವಿದ್ಯಾರ್ಥಿಗಳಿಗೆ ಭರವಸೆ ನೀಡಿದ್ದಾರೆ
ತಾಲೂಕಿನ ಗೇರಸೊಪ್ಪಾದ ಗುತ್ತಿಕನ್ನಿಕಾ ಪರಮೇಶ್ವರಿ ದೇವಾಲಯದ ಸಭಾಂಗಣದಲ್ಲಿ ಮಂಗಳವಾರ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ ನಾಲ್ವರು ವಿದ್ಯಾರ್ಥಿನಿಯರಿಗೆ ಗೌರವಿಸುವ ಮತ್ತು ವೈಯ್ಯಕ್ತಿಕವಾಗಿ ಅವರಿಗೆ ಲ್ಯಾಪ್ಟಾಪ್ ವಿತರಿಸಿದ ನಂತರ ಮಾತನಾಡಿ ನಾವು ಶಾಲೆಗೆ ಹೋಗುವಾಗ ಮನೆಯಲ್ಲಿ ಕರೆಂಟ್ ಇರಲಿಲ್ಲ, ಕಷ್ಟದ ದಿನವನ್ನು ಕಳೆದು ಬಂದಿರುವ ಓದನ್ನು ಮುಂದುವರಿಸಲಾಗದ ಹಿಂದಿನ ನೋವು ನನಗೆ ಗೊತ್ತಿದೆ ಅದೇ ಕಾರಣಕ್ಕೆ ನಾನು ಶಾಸಕನಾಗುವ ಪೂರ್ವದಲ್ಲೂ ಶಾಸಕನಾಗಿದ್ದಾಗಲೂ ನನ್ನ ಮೊದಲ ಆದ್ಯತೆಯನ್ನು ಶಿಕ್ಷಣಕ್ಕೆ ನೀಡುತ್ತಾ ಬಂದಿದ್ದೇನೆ.

ಶಾಸಕನಾಗಿದ್ದ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ 65 ಲಕ್ಷದಷ್ಟು ಹಣವನ್ನು ಕ್ಷೇತ್ರದಲ್ಲಿರುವ ಪ್ರತಿಯೊಂದು ಪ್ರೌಢಶಾಲೆಗಳಿಗೆ ಕಂಪ್ಯೂಟರ್ ಮತ್ತು ಇಂಟರ್ನೆಟ್ ಸೌಲಭ್ಯ ಕಲ್ಪಿಸಲು ವಿನಿಯೋಗಿಸಿದ್ದೇನೆ. ಸುಮ್ಮನೆ ಜನ ಆರೋಪ ಮಾಡುವುದು ಬೇಡ. ನನ್ನ ಅವಧಿಯಲ್ಲಿಯೇ ಕ್ಷೇತ್ರದ ಎಲ್ಲಾ ಪ್ರೌಢಶಾಲೆಗಳು ಕಂಪ್ಯೂಟರ್ ಹೊಂದಿದ ಮೊದಲ ಕ್ಷೇತ್ರ ಭಟ್ಕಳ ಹೊನ್ನಾವರ ಆಗಿತ್ತು ಎನ್ನುವುದನ್ನು ಖುಷಿಯಿಂದ ನೆನಪು ಮಾಡಿಕೊಳ್ಳುತ್ತೇನೆ ಎಂದರು.17 ಚಾಕ್ ಪಿಸ್ ನಲ್ಲಿ ನಮ್ಮ ರಾಷ್ಟ್ರಗೀತೆ ಹಾಗೂ ರಾಷ್ಟ್ರಗೀತೆ ರಚನಾಕಾರರ ಹೆಸರನ್ನು ಬರೆದು ಏಷ್ಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸಾಧನೆ ಗೈದ ಪ್ರದೀಪ್ ನಾಯ್ಕ್ ನನ್ನು ಸನ್ಮಾನಿಸಿ ಪ್ರೋತ್ಸಾಹಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಂಕಿ ಬ್ಲಾಕ್ ಅಧ್ಯಕ್ಷ ಗೋವಿಂದ್ ನಾಯ್ಕ,ನಾಮದಾರಿ ಸಮಾಜದ ತಾಲೂಕ ಅಧ್ಯಕ್ಷ ಮಂಜುನಾಥ್ ನಾಯ್ಕ, ಉಪ್ಪೋಣಿ ಗ್ರಾ. ಪಂ.ಅಧ್ಯಕ್ಷೆ ಮಾದೇವಿ ಉಪ್ಪಾರಮಾಜಿ ಜಿ. ಪಂ.ಸದಸ್ಯರಾದ ಕೃಷ್ಣ ಗೌಡ, ಪುಷ್ಪಾ ನಾಯ್ಕ, ತಾ. ಪಂ. ಮಾಜಿ ಅಧ್ಯಕ್ಷ ಉಲ್ಲಾಸ್ ನಾಯ್ಕ, ಸದಸ್ಯರಾದ ಅಣ್ಣಯ್ಯ ನಾಯ್ಕ, ಲೋಕೇಶ್ ನಾಯ್ಕ, ರಾಜು ನಾಯ್ಕ. ಗ್ರಾ. ಪಂ. ಮಾಜಿ ಅಧ್ಯಕ್ಷ ಈಶ್ವರ್ ನಾಯ್ಕ, ಉದಯ್ ನಾಯ್ಕ ಸದಸ್ಯರಾದ ಯೋಗೇಶ್ ರಾಯ್ಕರ್ ಮಾಜಿ ಸದಸ್ಯ ಗಣಪತಿ ನಾಯ್ಕ ರಾಘವೇಂದ್ರ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
Leave a Comment