ಗೋಕರ್ಣ : ಗೋಕರ್ಣ ಭಾಗದ ಕಡಲತೀರಗಳ ಅಪಾಯಕಾರಿ ಸ್ಥಳಗಳಲ್ಲಿ ಪ್ರವಾಸಿಗರು ಜೀವ ಕಳೆದುಕೊಳ್ಳುತ್ತಿರುವುದುದನ್ನು ಗಂಭಿರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಅಂತಹ ಸ್ಥಳಗಳಲ್ಲಿ ಪ್ರವಾಸಿಗರ ಮೇಲೆ ನಿಗಾ ಇಡಲು ಡ್ರೋಣ್ ಕ್ಯಾಮೆರಾ ನೀಡಿ ನೂತನ ವ್ಯವಸ್ಥೆ ಜಾರಿಗೊಳಿಸಿದ್ದಾರೆ.

ಎಸ್ ಪಿ. ತಮ್ಮ ಕಚೇರಿಯ ತಂತ್ರಜ್ಞರ ತಂಡ ಕಳುಹಿಸಿ, ಆ ತಂಡದವರು ಪಿ.ಎಸ್.ಐ ನವೀನ ನಾಯ್ಕ ನೇತೃತ್ವದಲ್ಲಿ ಮುಖ್ಯ ತೀರ ಓಂ ಬೀಚ್, ಪ್ಯಾರಡೈಸ್ ಬೀಚ್ ಹಾಫ್ ಮೂನ್ ಬೀಚ್‌ಗಳ ಅಪಾಯಕಾರಿ ಮತ್ತು ಇಕ್ಕಟ್ಟಾದ ಸ್ಥಳಗಳಲ್ಲಿ ಡ್ರೋಣ್ ಕ್ಯಾಮರಾ ಹಾರಿಸಿ ಸಮುದ್ರದ ಕಲ್ಲುಬಂಡೆಗಳಲ್ಲಿ ಟ್ರೆಕ್ಕಿಂಗ್ ಮಾಡುವಂತಹ ಪ್ರವಾಸಿಗರನ್ನು ಪತ್ತೆ ಹಚ್ಚಿ ಅವರನ್ನು ಕರೆದಂದು ಅವರಿಗೆ ಸಮುದ್ರದಿಂದಾಗುವ ಅಪಾಯದ ಬಗ್ಗೆ ಅರಿವು ಮೂಡಿಸಲಾಯಿತು.
ಇತ್ತಿಚಿಗೆ ಕೆಲವು ಪ್ರವಾಸಿಗರು ಸಮುದ್ರದಲ್ಲಿ ಈಚಾಡಲು ಹೋಗಿ ಅಲೆಗೆ ಸಿಲುಕಿ ಪ್ರಾಣ ಕಳೆದುಕೊಂಡು ಬಗ್ಗೆ ಮಾಹಿತಿ ನೀಡಿದರು. ಇನ್ನು ಮುಂದಿನ ದಿನಗಳಲ್ಲಿ ವಾರಾಂತ್ಯ ಸರ್ಕಾರಿ ರಜೆ ಇರುವ ಸಂದರ್ಭದಲ್ಲಿ ಮತ್ತು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ದಿನಗಳಲ್ಲಿ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಡ್ರೋಣ್ ಕಣ್ಗಾವಲು ಇರಲಿದೆ ಎಂದು ತಿಳಿಸಲಾಯಿತು.
Leave a Comment