
ಯಲ್ಲಾಪುರ: ಜಿಲ್ಲೆಯಾದ್ಯಂತ ಅತಿವೃಷ್ಟಿಯಿಂದ ಅಪಾರ ಹಾನಿಯಾಗಿ ಕೆಲವು ಗ್ರಾಮಗಳು ನಾಗರಿಕ ಸೌಲಭ್ಯಗಳಿಂದಲೇ ವಂಚಿತವಾಗಿದೆ.ಈಗಿರುವ ಕಾನೂನಿನಲ್ಲಿ ತಿದ್ದುಪಡಿ ಮಾಡುವ ಅಗತ್ಯತೆಯೂ ಇಂತಹ ವಿಶೇಷ ಸಂದರ್ಭದಲ್ಲಿ ನಿರ್ಮಾಣವಾಗುತ್ತಿದೆ.ಇಲ್ಲಿ ಆಗಿರುವ ಹಾನಿಗೆ ಅಷುಇಷ್ಟು ಕೊಡುತ್ತೇವೆ ಅಂದರೆ ಅದಕ್ಕೆ ಏನು ಸ್ಪಂದನೆ ಇಲ್ಲದಂತಾಗುತ್ತದೆ. ಆದ್ದರಿಂದ ಕಾಯ್ದೆಗಳಲ್ಲೂ ಪರಿವರ್ತನೆ ತರಬೇಕಾದಅನಿವಾರ್ಯತೆ ಇದೆ.
.ೆ ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು
ಅವರು ಮಂಗಳವಾರ ತಾಲೂಕಿನ ಅರಬೈಲ್, ಗುಳ್ಳಾಪುರ ,ಕಳಚೆ ಭಾಗಕ್ಕೆ ಭೇಟಿ ನೀಡಿ ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿÀ ಪರಿಶೀಲನೆ ನಡೆಸಿದರು, ನಂತರ ಮಾತನಾಡಿ ಕಳಚೆಯಲ್ಲಿ ಹೆಚ್ಚಿನ ಭೂಕುಸಿತವಾಗಿದ್ದರಿಂದ, ಗದ್ದೆ ತೋಟಗಳಿಗೆ ನೀರು ನುಗ್ಗಿ ಸಂಕಷ್ಟತAದೊಡ್ಡಿದೆ.ಈಗಾಗಲೇ ಹಾನಿಗೀಡಾದ ಕೃಷಿ ಭೂಮಿಯ ಸಮಗ್ರ ಸಮೀಕ್ಷೆ ಮಾಡಲಾಗುತ್ತಿದೆ.
ಮಾನವೀಯ ನೆಲೆಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳಬೇಕಾದ ಅನಿರ್ವಾತೆಯೂ ಇದೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದೇ£ಇಲ್ಲಿಯ ಪರಿಸ್ಥಿತಿ ಅಲೋಕಿಸಿದರೆ ಮಳೆಯ ನೀರು ಭೂಮಿಯಲ್ಲಿ ಹೀರಿಕೊಳ್ಳಲಾಗದೇ ಎಲ್ಲೆಡೆ ಭೂಕುಸಿತ ಉಂಟಾಗಿದೆ ಈಗಲೂ ಕೆಲ ಮನೆಗಳು ಕುಸಿಯುತ್ತಿದ್ದು . ಪರ್ಯಾಯವಾಗಿ ಪುನರ್ವಸತಿ ಕುರಿತು ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರಕಾರದ ಮಟ್ಟದಲ್ಲಿ ನೀರ್ಣಯ ತೆಗೆದುಕೊಳ್ಳಲಾಗುವದು.ಈಗಾಗಲೆ ಜಿಲ್ಲಾಉಸ್ತುವಾರಿ ಸಚಿವ ಹೆಬ್ಬಾರ ಅವರೊಡನೆ ಚರ್ಚಿಸಿದ್ದೇನೆ.
ಕಷ್ಟದಲ್ಲಿರುವರ ಜೊತೆ ಹಾಗೂ ಸರಕಾರದ ವ್ಯವಸ್ಥೆಯ ಜೊತೆಯೂ ಹೆಜ್ಜೆ ಹಾಕಲೇಬೇಕು.ಅತಿಕ್ರಮಣದಾರರಿಗೆ ಪರಿಹಾರ ದೊರಕುವದಿಲ್ಲ ಆದರೆ ಮುಖ್ಯಮಂತ್ರಿಗಳು ನೀಡುವಂತೆ ಹೇಳಿದ್ಧಾರೆ ಅದು ಆದೇಶವಾಗಿ ಬರಬೇಕಿದೆ.ಇನ್ನು ಪುನರ್ವಸತಿ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ .
ಸಂತ್ರಸ್ತರೊಡನೆ ಇನ್ನು ಒಂದೆರಡು ಸುತ್ತು ಸಮಾಲೋಚನೆ ನಡೆಸಿ ನೀರ್ಣಯಿಸಲಾಗುವದು ಎಂದರು. ವಾ.ಕ.ರಾ.ರ.ಸಾ.ನಿಗಮದ ಅಧ್ಯಕ್ಷ ವಿ.ಎಸ್.ಪಾಟೀಲ್. ಕಳಚೆ ಸಹಕಾರಿ ಸಂಘದ ಅಧ್ಯಕ್ಷ ಉಮೇಶ ಭಾಗ್ವತ,ಬಿಜೆಪಿ ತಾಲೂಕಾಧ್ಯಕ್ಷ ಗೋಪಾಲಕೃಷ್ಣ ಗಾಂವಕರ್, ರಾಘವೇಂದ್ರ ಭಟ್ಟ,ಲೋಕೋಪಯೋಗಿ ಕಾರ್ಯ ನಿರ್ವಹಣಾಧಿಕಾರಿ ವಿ.ಎಮ್ ಭಟ್ಟ , ಗುಳ್ಳಾಪುರ ಗ್ರಾಪಂ ಸದಸ್ಯ ಶ್ರೀಕಾಂತ ಶೆಟ್ಟಿ,ತಾಪಂ ಮಾಜಿ ಅಧ್ಯಕ್ಷ ರವಿ ಕೈಟ್ಕರ್ ಗ್ರಾಪಂ ಅಧ್ಯಕ್ಷರು ಉಪಾಧ್ಯಕ್ಷ ಮುಂತಾದವರು ಇದ್ದರು.
Leave a Comment